ಶಿರಸಿ : ಮಳೆಗಾಲ ಬಂದರೇ ಇಂಗು ಗುಂಡಿಗಳನ್ನು ತೆಗೆಯುವತ್ತ ವಿವಿಧ ಇಲಾಖೆಗಳು ಮುಂದಾಗುತ್ತದೆ. ಸರ್ಕಾರವೂ ಸಹ ಇದನ್ನು ಪ್ರೋತ್ಸಾಹಿಸುತ್ತಿದೆ. ಆದರೆ ಇದನ್ನೇ ಬಂಡವಾಳವಾಗಿ ಇಟ್ಟುಕೊಂಡು ಇಂಗು ಗುಂಡಿ ತೆಗೆಯುವುದರಲ್ಲಿಯೇ ಸೊಂದಾ ಗ್ರಾಮ ಪಂಚಾಯತದ ಕಾಮಗಾರಿಯಲ್ಲಿ ಅವ್ಯವಹಾರ ನಡೆಸಿರುವ ಶಂಕೆ ಸ್ಥಳೀಯರಿಂದ ವ್ಯಕ್ತವಾಗಿದೆ.

ಸೋಂದಾ ಗ್ರಾಮ ಪಂಚಾಯತದ ವತಿಯಿಂದ ನಿಧಿ 1 ಹಾಗೂ 14 ನೇ ಹಣಕಾಸು ಯೋಜನೆಯಡಿಯಲ್ಲಿ ಸುಮಾರು 1,14,000 ರೂ.ಗಳ ವೆಚ್ಚದಲ್ಲಿ ಇಂಗು ಗುಂಡಿಗಳ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಆದರೆ ಇದರಲ್ಲಿ ಫಲಾನುಭವಿಗಳ ಆಯ್ಕೆಯಾಗಲಿ, ಇಂಗು ಗುಂಡಿಗಳನ್ನು ತೆಗೆಯುವಾಗ ನಿರ್ದಿಷ್ಟ ಜಾಗವಾಗಲಿ ಗುರುತಿಸಿಲ್ಲ. ಬದಲಾಗಿ ಮಾಲ್ಕಿ ಜಾಗದಲ್ಲಿಯೂ ಸಹ ಪಂಚಾಯತದ ಹಣದಲ್ಲಿಯೇ ಇಂಗು ಗುಂಡಿಗಳನ್ನು ತೆಗೆಯಲಾಗುತ್ತಿದೆ. ಅಲ್ಲದೇ ಇಂಗು ಗುಂಡಿಗಳನ್ನು ತೆಗೆಯಲು ಜೆಸಿಬಿ ಬಳಸಿದ್ದು, ಇದನ್ನು ಯಾವುದೇ ಟೆಂಡರ್ ಮೂಲಕ ಪಡೆಯದೇ ಕೇವಲ ಬಾಯಿ ಮಾತಿಗೆ – ಕೈ ಲೆಕ್ಕಕ್ಕೆ ಪಡೆದುಕೊಂಡು ಲಕ್ಷ ರೂ.ಗಳ ಕಾಮಗಾರಿಯಲ್ಲಿ ಅವ್ಯವಹಾರ ನಡೆಸುತ್ತಿದ್ದಾರೆ ಎಂದು ಸೋಂದಾ ಭಾಗದ ಗ್ರಾಮಸ್ಥರು ಆರೋಪಿಸಿದ್ದಾರೆ.
IMG 20180625 WA0006
ಗ್ರಾಮ ಪಂಚಾಯತದ ವ್ಯಾಪ್ತಿಯಲ್ಲಿ ವಿವಿಧ ಕಡೆಗಳಲ್ಲಿ ಇಂಗು ಗುಂಡಿಗಳನ್ನು ತೊಡಲಾಗಿದೆ. ಇಂಗು ಗುಂಡಿಗಳನ್ನು ತೊಡುವುದು ನೀರಿಂಗಿಸುವ ಮೂಲ ಉದ್ದೇಶವಾಗಿದ್ದರೂ, ಇಲ್ಲಿ ಮಾತ್ರ ಬೇಕಾಬಿಟ್ಟಿ ಇಂಗು ಗುಂಡಿಗಳನ್ನು ತೆಗೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ ಕೆಲವೊಂದು ಗ್ರಾಮ ಪಂಚಾಯತ ಸದಸ್ಯರು ತಾವೇ ಮುಂದೇ ನಿಂತು ಇಂಗು ಗುಂಡಿಗಳನ್ನು ತೆಗೆಯುತ್ತಿದ್ದು, ತಮಗೆ ಬೇಕಾದವರ ಜಾಗದಲ್ಲಿ ಗ್ರಾಮ ಪಂಚಾಯತ ಅನುದಾನದಿಂದ ತೆಗೆಯಲಾಗುತ್ತಿದೆ ಎನ್ನಲಾಗಿದೆ.

RELATED ARTICLES  ಅಳ್ವೇಕೋಡಿಯಲ್ಲಿ ರಂಜಿಸಿದ ಉಮೇಶ ಮುಂಡಳ್ಳಿ ತಂಡದ ಗಾಯನ

ಎಲ್ಲಾ ಕಡೆಗಳಲ್ಲಿ ಇಂಗು ಗುಂಡಿಗಳನ್ನು ತೆಗೆದರೇ ಇಲ್ಲಿ ಮಾತ್ರ, ಗ್ರಾಮ ಪಂಚಾಯತ ವ್ಯಾಪ್ತಿಯ ಬಾಡಲಕೊಪ್ಪದಲ್ಲಿ ತೆಗೆದ ಇಂಗು ಗುಂಡಿಗಳನ್ನು ಸ್ವತಃ ತಾವೇ ಮುಚ್ಚಿ ಹೋಗಿದ್ದಾರೆ. ದಿನ ಬಾಡಿಗೆ ಲೆಕ್ಕಾಚಾರದಲ್ಲಿ ಜೆಸಿಬಿ ತಂದು ಇಂಗು ಗುಂಡಿ ತೆಗೆಯುವುದರ ಜೊತೆಗೆ ಮುಚ್ಚುವ ಕೆಲಸವವನ್ನೂ ಮಾಡಿ ಅನುದಾನ ಪೋಲು ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

RELATED ARTICLES  ಎಲ್ಲರಿಗೂ ಮಾದರಿಯಾದ ಯುವಸೇನಾ ಗೆಳೆಯರ ಬಳಗ ಬಗ್ಗೋಣ ಸಂಘಟನೆ.

ಇಂಗು ಗುಂಡಿಗಳನ್ನು ತೆಗೆಯುವುದು ಉತ್ತಮವಾದ ಯೋಜನೆ ಆಗಿದ್ದರೂ, ಸರಿಯಾದ ಮಾರ್ಗವನ್ನು ಅನುಸರಿಸಿ ಗ್ರಾಮಸ್ಥರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ಮಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.