ಹೊನ್ನಾವರ: ತಮ್ಮ ಮಗ ಹೆಚ್​.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿ ಯಾಗಬೇಕೆಂದು ದೇವೇಗೌಡ್ರು, ಇಡಗುಂಜಿ ಗಣೇಶನಿಗೆ ಸಂಕಲ್ಪ ಮಾಡಿಕೊಂಡಿದ್ದರಂತೆ. ಸಂಕಲ್ಪ ಈಡೇರಿದ ಹಿನ್ನೆಲೆಯಲ್ಲಿ ತಾಲೂಕಿನ ಇಡಗುಂಜಿಯ ದೇವಸ್ಥಾನಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ ನೀಡಿ ಪ್ರಸಿದ್ಧ ವಿನಾಯಕನ ದರ್ಶನ ಪಡೆದರು.

RELATED ARTICLES  ಹಿರಿಯ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಚಿಟ್ಟಾಣಿಯವರಿಗೆ ಪ್ರಾಣಾಪಾಯವಿಲ್ಲ

ಕಳೆದ 30 ವರ್ಷದಿಂದ ಇಡಗುಂಜಿ ವಿನಾಯಕ ದೇವರನ್ನು ದೇವೇಗೌಡರು ಆರಾಧಿಸುತ್ತಾ ಬಂದಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿದೆ.

ದೇವೇಗೌಡರು, ಇಡಗುಂಜಿಯ ದೇವಸ್ಥಾನದ ಅರ್ಚಕ ಹಾಗೂ ಜ್ಯೋತಿಷಿ ಮಂಜುನಾಥ್ ಭಟ್ ನೇತೃತ್ವದಲ್ಲಿ ಅಷ್ಟ ದ್ರವ್ಯ ಪೂರಕ ಗಣ ಹೋಮ ಕಾರ್ಯ ನೆರವೇರಿಸಿದರು.

RELATED ARTICLES  ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಆಗ್ರಹ: ಕುಮಟಾ ಬರಗದ್ದೆ ನಿವಾಸಿಗಳಿಂದ ಅಧಿಕಾರಿಗಳಿಗೆ ಮನವಿ ಸಲ್ಲಿಕೆ.