ಕುಮಟಾ: ತಾಲೂಕಿನ ಒಳಚರಂಡಿ ಕಳಪೆ ಕಾಮಗಾರಿಯ ಬಗ್ಗೆ ಆಗಾಗ ವರದಿ ಆಗುತ್ತಿದ್ದರೂ ಮಳೆಗಾಲದಲ್ಲಿ ಒಳಚರಂಡಿಯ ರಾದ್ದಾಂತ ಮುಂದುವರೆದಿದೆ.

ಕುಮಟಾ ಬಸ್ ಸ್ಟ್ಯಾಂಡ್ ಎದುರು ಬಾಯ್ದೆರೆದಿರುವ ಒಳಚರಂಡಿ ಜನತೆಗೆ ಮೃತ್ಯುಕೂಪದಂತಿತ್ತು. ಈ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದರು.

RELATED ARTICLES  ಮಂಗಳೂರು ಚಲೋ ತಡೆಯುವ ಪ್ರಯತ್ನ : ಕುಮಟಾದಲ್ಲಿ ಪರಿಸ್ಥಿತಿ ಉದ್ವಿಘ್ನ.

ಇಂದು ಸೂರ್ಯೋದಯದೊಳಗೇ ಶಾಸಕ ದಿನಕರರ ಶೆಟ್ಟಿಯವರು ಸ್ಥಳಕ್ಕೆ ಆಗಮಿಸಿ ಘಟನೆ ಬಗ್ಗೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳ ಗಮನಕ್ಕೆ ತಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
IMG 20180626 WA0001
ಈ ಒಳಚರಂಡಿ ಕಾಮಗಾರಿಯ ಅವಾಂತರ ಸರಿಪಡಿಸುವತ್ತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ಅವರು ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

RELATED ARTICLES  ವಿಶ್ವಕೊಂಕಣಿ ಸಂಗೀತ ನಾಟಕ ಅಕಾಡೆಮಿ ಸದಸ್ಯರಾಗಿ ಚಿದಾನಂದ ಭಂಡಾರಿ ನೇಮಕ.

ವರದಿ : ಜಯದೇವ ಬಳಗಂಡಿ, ಕುಮಟಾ.