ಕಾಸರಗೋಡು,
➖➖➖➖➖➖➖➖
* ಮುಳ್ಳೇರ್ಯ ಹವ್ಯಕ ಮಂಡಲ ಮಾಸಿಕ ಸಭೆಯು ನೀರ್ಚಾಲು ವಲಯದ ಅಗ್ರಸಾಲೆ ಶ್ರೀ ಶಾಸ್ತಾರ ಮಂದಿರದಲ್ಲಿ ಜರಗಿತು. ದೀಪಜ್ವಲನ, ಧ್ವಜಾರೋಹಣ, ಶಂಖನಾದ, ಗುರುವಂದನೆ, ಗೋಸ್ತುತಿಯೊಂದಿಗೆ ಸಭೆ ಪ್ರಾರಂಭವಾಯಿತು.
ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆಯವರು ಪ್ರಸ್ಥಾವನೆ ಮಾಡಿ ಸಭಾಸಂಯೋಜನೆ ಮಾಡಿದರು. ವಲಯ ವರದಿಯ ಬಳಿಕ ಉಪಾಧ್ಯಕ್ಷ ಕುಮಾರ್ ಪೈಸಾರಿ, ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ, ಬಾಲಸುಬ್ರಹ್ಮಣ್ಯ ಭಟ್ ಪರಪ್ಪೆ, ಕೇಶವಪ್ರಸಾದ ಎಡಕ್ಕಾನ, ದೇವಕಿ ಪನ್ನೆ, ಗೀತಾಲಕ್ಷ್ಮಿ, ಸರಳಿ ಮಹೇಶ, ಸತ್ಯಶಂಕರ ಭಟ್ ಹಿಳ್ಳೆಮನೆ ಇವರು ತಮ್ಮ ವಿಭಾಗಗಳ ಕಾರ್ಯಯೋಜನೆಗಳ ಬಗ್ಗೆ ಅವಲೋಕನ ಮಾಡಿ ಮಾಹಿತಿಗಳನ್ನಿತ್ತರು.
* ಶ್ರೀ ಯಮ್. ವಿ. ಹೆಗ್ಡೆ ಸಿದ್ಧಾಪುರ, ಮಹಾಮಂಡಲ ಕೃಷಿ ಪ್ರಧಾನ ಭಾಸ್ಕರ ಹೆಗ್ಡೆ ಕೊಡ್ಗಿಬಯಲು, ಮಹಾಮಂಡಲಾಧ್ಯಕ್ಷೆ ಈಶ್ವರಿ ಬೇರ್ಕಡವು ಇವರು ಬಾನ್ಕುಳಿ ಮಠದಲ್ಲಿ ಜರಗಲಿರುವ ‘ ಗೋಸ್ವರ್ಗ-ಚಾತುರ್ಮಾಸ್ಯ ‘ ದ ಕುರಿತು ಸಮಗ್ರ ಮಾಹಿತಿಗಳನ್ನಿತ್ತರು. ಮಹಾಮಂಡಲ ಉಲ್ಲೇಖ ಪ್ರಧಾನ ಗೋವಿಂದಬಳ್ಳಮೂಲೆ ಸಂಘಟನೆಯ ಕಾರ್ಯರೂಪದ ಕುರಿತು ವಿವರಣೆಯನ್ನಿತ್ತರು.
ಸಭೆಯಲ್ಲಿ ಉನ್ನತ ಅಂಕ ಗಳಿಸಿದ ವಲಯದ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
* ಈ ಸಂದರ್ಭದಲ್ಲಿ ಶ್ರೀ ಮಠದ ಅಂಗಸಂಸ್ಥೆ ಮಹಿಳೋದಯದ ವತಿಯಿಂದ ಬಜಕುಡ್ಲು ಗೋಶಾಲೆಯಲ್ಲಿ ನಿರ್ಮಾಣವಾಗುತ್ತಾ ಇರುವ ಗೋವರ್ಧನ ಯಾಗಮಂಟ ಯೋಜನೆ ಹಾಗೂ ಪಳ್ಳತ್ತಡ್ಕ ವಲಯದ ಕೆಡಿಂಜಿ ವೆಂಕಟೇಶ್ವರಿ ಅಮ್ಮನವರ ಮನೆ ದುರಸ್ಥಿಗೆ ದೇಣಿಗೆ ಸಮರ್ಪಣೆಯನ್ನು ಹಸ್ತಾಂತರಿಸಲಾಯಿತು.
ಚಂದ್ರಮೌಳೀಶ್ವರ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಕಲಶ ಸೇವೆ ಮಾಡಿಸಿದವರಿಗೆ ಇವನ್ನು ವಿತರಿಸಲಾಯಿತು. ಸುಬ್ರಹ್ಮಣ್ಯ ನೆಕ್ಕರೆಕಳೆಯ ಅವರು ಗವ್ಯೋದ್ಯಮ, ಗವ್ಯೋತ್ಪನ್ನಗಳ ವಿಶೇಷತೆ ಬಗ್ಗೆ ಮಾಹಿತಿಗಳನ್ನಿತ್ತರು.
ನೀರ್ಚಾಲು ವಲಯಾಧ್ಯಕ್ಷರಾದ ಜಯದೇವ ಖಂಡಿಗೆಯವರು ಮಾತನಾಡಿ ಶ್ರೀ ಮಧೂರು ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳ ಮಾಹಿತಿಗಳನ್ನಿತ್ತು ಸರ್ವರೂ ಸಕ್ರಿಯವಾಗಿ ಭಾಗವಹಿಸುವಂತೆ ವಿನಂತಿಸಿದರು.
ಮಂಡಲಾಧ್ಯಕ್ಷ ಪ್ರೊ // .ಶ್ರೀಕೃಷ್ಣ ಭಟ್ ಅಧ್ಯಕ್ಷತೆಯನ್ನು ವಹಿಸಿ ಮುಂದಿನ ಸಾಂಘಿಕ ಚಟುವಟಿಕೆಗಳ ಬಗ್ಗೆ ಮಾಹಿತಿಗಳನ್ನಿತ್ತರು.
ರಾಮಮಂತ್ರ, ಶಾಂತಿಮಂತ್ರ, ಗೋಸ್ತುತಿ, ಧ್ವಜಾವರೋಹಣ, ಶಂಖನಾದವಾಗಿ ಸಭೆ ಮುಕ್ತಾಯವಾಯಿತು.
➖➖➖➖➖➖➖➖?