ಕಾರವಾರ: ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ `ಟ್ಯಾಗೋರ್ ಪತ್ರಿಕಾ ಪ್ರಶಸ್ತಿ’ಗೆ ಪತ್ರಕರ್ತ ಶ್ರೀನಾಥ ಜೋಶಿ ಅವರು ಆಯ್ಕೆಯಾಗಿದ್ದಾರೆ.

ಸಂಘದ ಅಧ್ಯಕ್ಷ ಟಿ.ಬಿ.ಹರಿಕಾಂತ ಅವರ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಪತ್ರಿಕಾ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ. ಅವರಿಗೆ ಜುಲೈ ಒಂದರಂದು ಜಿಲ್ಲಾ ಪತ್ರಿಕಾಭವನದಲ್ಲಿ ನಡೆಯುವ ಪತ್ರಿಕಾ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಶ್ರೀನಾಥ ಜೋಶಿ ಅವರು ಮೂಲತಃ ಕಾರವಾರದ ಸಿದ್ದರ ಗ್ರಾಮದವರಾಗಿದ್ದು, ವಿಜಯ ಕರ್ನಾಟಕ ಪತ್ರಿಕೆಯಿಂದ ವೃತ್ತಿ ಆರಂಭಿಸಿದ್ದರು. ಬಳಿಕ ಸುವರ್ಣ ನ್ಯೂಸ್, ಸಮಯ ನ್ಯೂಸ್ ಸೇರಿದಂತೆ ರಾಜ್ಯಮಟ್ಟದ ವಿವಿಧ ವಾಹಿನಿಗಳಲ್ಲಿ ಕಾರ್ಯ ನಿರ್ವಹಿಸಿದರು. ಅವರು ಪ್ರಸ್ತುತ ಟಿವಿ 5 ಕನ್ನಡ ಸುದ್ದಿವಾಹಿನಿಯ ಸಹ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

RELATED ARTICLES  ನವಿಲಗೋಣ ಭಾಗದ ಕಾರ್ಯಕರ್ತರಿಂದ ಶಾಸಕ ದಿನಕರ ಶೆಟ್ಟಿ ಅವರಿಗೆ ಅಭಿನಂದನೆ.

`ಜೀವಮಾನ ಸಾಧನೆ ಪ್ರಶಸ್ತಿ’ಗೆ ಇಬ್ಬರು:

ಸಂಘದ ಸದಸ್ಯರಿಗೆ ಪ್ರದಾನ ಮಾಡುವ `ಜೀವಮಾನ ಸಾಧನೆ ಪ್ರಶಸ್ತಿ’ಗೆ ಕನ್ನಡಪ್ರಭ ಪತ್ರಿಕೆಯ ವಿಶೇಷ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ವಸಂತಕುಮಾರ್ ಕತಗಾಲ ಹಾಗೂ ಕರ್ನಾಟಕ ಫೆÇೀಟೊ ನ್ಯೂಸ್‍ನ (ಕೆಪಿಎನ್) ಛಾಯಾಗ್ರಾಹಕ ಪಾಂಡುರಂಗ ಹರಿಕಂತ್ರ ಅವರನ್ನು ಆಯ್ಕೆ ಮಾಡಲಾಗಿದೆ.
received 879496912233464
ವಸಂತಕುಮಾರ್ ಕತಗಾಲ: ಮೂಲತಃ ಕುಮಟಾದ ಕತಗಾಲದವರಾಗಿರುವ ವಸಂತಕುಮಾರ್ ಅವರು, ಕನ್ನಡ ಎಂ.ಎ. ಪದವಿ ಪಡೆದು ಉಪನ್ಯಾಸಕರಾಗಿ ಕಾರವಾರಕ್ಕೆ ಬಂದರು. ಪತ್ರಿಕಾರಂಗದ ಸೆಳೆತದಿಂದಾಗಿ ಕನ್ನಡ ಜನಾಂತರಂಗ ಪತ್ರಿಕೆಯಲ್ಲಿ ತಮ್ಮ ಪತ್ರಿಕಾವೃತ್ತಿಯನ್ನು ಆರಂಭಿಸಿದರು. ನಂತರ ಕನ್ನಡಪ್ರಭದ ವಿಶೇಷ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

RELATED ARTICLES  ಕುಮಟಾದಲ್ಲಿ ಬಿಜೆಪಿ ತೆಕ್ಕೆಗೆ ಪುರ‌ಸಭೆ: ಜಿದ್ದಾ ಜಿದ್ದಿನ ಹೋರಾಟದ ಫಲಿತಾಂಶ ಪ್ರಕಟ

received 879496928900129
ಪಾಂಡುರಂಗ ಹರಿಕಂತ್ರ: ಕರ್ನಾಟಕ ಫೋಟೊ ನ್ಯೂಸ್‍ನಲ್ಲಿ ಹಲವು ವರ್ಷಗಳಿಂದ ಪಾಂಡುರಂಗ ಹರಿಕಂತ್ರ ಅವರು ಛಾಯಾಗ್ರಾಹಕರಾಗಿದ್ದಾರೆ. ಕಾರವಾರದ ಕಡಲ ಕಿನಾರೆಯೂ ಸೇರಿದಂತೆ ಪರಿಸರ ಛಾಯಾಗ್ರಹಣದಲ್ಲಿ ನಿಪುಣರಾದ ಅವರ ಬಳಿ ಜಿಲ್ಲೆಯ ಹಲವು ಅಪರೂಪದ ಚಿತ್ರಗಳ ಸಂಗ್ರಹವಿದೆ.