ಹೊನ್ನಾವರದ ನ್ಯೂ ಇಂಗ್ಲೀಷ ಶಾಲೆಯಲ್ಲಿ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಧರ್ಮಜಾಗೃತಿ ಸಮಿತಿ ವತಿಯಿಂದ ಶಾಲೆಯಲ್ಲಿ ಉಚಿತ ವಹಿ(ನೋಟ್ ಬುಕ್) ವಿತರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸುಮಾರು 72 ವಿದ್ಯಾರ್ಥಿಗಳು ಇದರ ಲಾಭವನ್ನು ಪಡೆದುಕೊಂಡರು.

ವಹಿ ವಿತರಿಸುವ ಸಂದರ್ಭದಲ್ಲಿ ಧರ್ಮಜಾಗೃತಿ ಸಮಿತಿ ವತಿಯಿಂದ ಸೌ. ವಾಸಂತಿ ಮುರ್ಡೇಶ್ವರ ಇವರು ಮಾತನಾಡುತ್ತಾ ವಹಿಗಳ ವೈಶಿಷ್ಟವೇನೆಂದರೆ ಮುಖ ಪುಟಗಳಲ್ಲಿ ತೇಜಸ್ವಿ ರಾಷ್ಟ್ರ ಪುರುಷರ ಮತ್ತು ಉತ್ತಮ ಸಂಸ್ಕಾರಗಳ ಪ್ರಬೋಧನಾತ್ಮಕ ಚಿತ್ರಗಳಿದ್ದು ಮಕ್ಕಳಿಗೆ ಸ್ಪೂರ್ತಿದಾಯಕವಾಗಿದೆ. ನೈತಿಕ ಮೌಲ್ಯಗಳ ಸಂವರ್ಧನೆಗೆ ಪ್ರೇರಣೆ ನೀಡುವಲ್ಲಿ, ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸುವಲ್ಲಿ, ರಾಷ್ಟ್ರ ಮತ್ತು ಧರ್ಮದ ಅಭಿಮಾನ ಮೂಡಿಸುವ, ಗುರುಹಿರಿಯರನ್ನು ಗೌರವಿಸುವ, ಬಾಲ ಮನಸ್ಸಿನಲ್ಲಿ ಉತ್ತಮ ಸಂಸ್ಕಾರಗಳ ಬೀಜ ಬಿತ್ತುವಲ್ಲಿ ಅತ್ಯಂತ ಪೂರಕವಾಗಿದೆ ಮತ್ತು ನೈತಿಕ ಮೌಲ್ಯವನ್ನು ಹೆಚ್ಚಿಸುವಂತ ಸುಸಂಸ್ಕಾರ ವಿಚಾರಗಳನ್ನೊಳಗೊಂಡ ಇಂತಹ ವಹಿಯು ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಪೆÇೀಷಕವಾಗಿದೆ. ಇಂತಹ ವಹಿಗಳು ಮಕ್ಕಳಿಗೆ ಅತ್ಯಂತ ಪ್ರೆರಣದಾಯಕವಾಗಿದೆ ಎಂದು ಹೇಳಿದರು.

RELATED ARTICLES  ಹಣತೆ ಬೆಳಕು ಚೆಲ್ಲುವ ದೀಪಸ್ತಂಭವಾಗಿ ಎತ್ತರದಲ್ಲಿ ನಿಲ್ಲಲಿ : ಕಾಸರಗೋಡು ಚಿನ್ನಾ

ಈ ಸಂದರ್ಭದಲ್ಲಿ ಶಾಲೆಯ ಮೂಖ್ಯೋಪಾಧ್ಯಾಯರು/ಶಿಕ್ಷಕಿಯರು ಉಪಸ್ಥಿತರಿದ್ದರು.