ಕುಮಟಾ : “ಮಾದಕ ವಸ್ತುಗಳ ಸಂಗ ಮಾಡುವುದು ಸಮಾಜದ ಶಾಂತಿ ಭಂಗಮಾಡಿದಂತೆ ಮಾದಕ ವಸ್ತುಗಳಿಂದ ಯುವಜನರ ರಕ್ಷಣೆ – ನಮ್ಮೆಲ್ಲರ ಹೊಣೆ. ಮಾದಕ ವಸ್ತುಗಳ ಬಳಕೆ ನಿವಾರಿಸಲು ಎಲ್ಲರೂ ಕೈ ಜೋಡಿಸಬೇಕು” ಎಂದು ಗೋಕರ್ಣ ಪೋಲಿಸ್ ಠಾಣೆಯ ಪಿ. ಎಸ್. ಐ ಸಂತೋಷಕುಮಾರ ನುಡಿದರು.
ಅವರು ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯಲ್ಲಿ ಹೈಸ್ಕೂಲ್ ಮತ್ತು ಗೋಕರ್ಣ ಪೋಲಿಸ್ ಠಾಣೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಜೂನ್26 2018 ಅಂತರಾಷ್ರ್ಟೀಯ ಮಾದಕ ವಸ್ತು ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. “ನಿಮ್ಮ ಸ್ವಾಸ್ಥ್ಯ ದೇಶಕ್ಕೆ ಶಕ್ತಿ ಮಾದಕ ವ್ಯಸನಿಗಳಾಗುವ ಮುನ್ನ ಬಳಸಿ ನಿಮ್ಮ ಯುಕ್ತಿ! ಯುವ ಶಕ್ತಿ ಶಕ್ತಿಗುಂದದಿರಲಿ ಮಾದಕ ವಸ್ತು ವ್ಯಸನ ದೇಶದ ಸರ್ವಾಂಗೀಣ ಪ್ರಗತಿಗೆ ಮಾರಕ ಆದ್ದರಿಂದ ವ್ಯಸನಿಗಳಲ್ಲಿ ಅರಿವು ಮೂಡಿಸಿ ಅವರನ್ನು ಚಟಮುಕ್ತರಾಗಿಸಬೇಕಾದ ಅಗತ್ಯ ಈಗ ಹಿಂದೆಂದಿಗಿಂತ ಹೆಚ್ಚಿದೆ” ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಎನ್.ರಾಮು ಹಿರೇಗುತ್ತಿ ಮಾತನಾಡಿ “ಮಾದಕ ವಸ್ತುವಿನ ವ್ಯಸನದಿಂದ ಯುವ ಸಮೂಹವನ್ನು ಹೊರೆಸೆಳೆಯದಿದ್ದಲ್ಲಿ ಅದು ದೇಶದ ಭದ್ರತೆ ಮತ್ತು ಸಮಗ್ರತೆಯನ್ನೇ ಅಪೋಶನ್ ತೆಗೆದುಕೊಳ್ಳುಬಹುದು ಆದ್ದರಿಂದ ದುಶ್ಚಟಗಳಿಗೆ ಲಗಾಮು ಹಾಕುವ ನಿಟ್ಟಿನಲ್ಲಿ ಸರ್ಕಾರ ಕ್ಷೀಪ್ರ ಕ್ರಮಕ್ಕೆ ಮುಂದಾಗಬೇಕಾಗಿದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿಕ್ಷಕ ವಿಶ್ವನಾಥ ಬೇವಿನಕಟ್ಟಿ “ಮಾದಕ ವ್ಯ¸ನದಿಂದ ದೈಹಿಕ-ಮಾನಸಿಕ ಶಕ್ತಿಗಳು ಉಡುಗಿಹೋಗಿ ಆರೋಗ್ಯ ಹಾಳಾಗುತ್ತದೆ. ಮಾದಕ ವ್ಯಸನಿಯ ಸ್ವಾವಲಂಬನೆ – ಸ್ವಾಭಿಮಾನ ಹಾಗೂ ಕುಟುಂಬದ ನೆಮ್ಮದಿ-ಸಂತೋಷ ಮಣ್ಣುಪಾಲಾಗುತ್ತದೆ” ಎಂದರು.
ಕಾರ್ಯಕ್ರಮದಲ್ಲಿ ವೇದಕೆಯಲ್ಲಿ ಗೋಕರ್ಣ ಪೋಲಿಸ್ ಠಾಣೆಯ ಶಿವಾನಂದ ಗೌಡ ಸಂತೋಷ ಜಾಧವ ಶಿಕ್ಷಕರಾದ ಬಾಲಚಂದ್ರ ಹೆಗಡೆಕರ್, ನಾಗರಾಜ ನಾಯಕ, ಮಹಾದೇವ ಗೌಡ, ಇಂದಿರಾ ನಾಯಕ, ಜಾನಕಿ ಗೊಂಡ, ಶಿಲ್ಪಾ ನಾಯಕ, ಕವಿತಾ ಉಪಸ್ಥಿತರಿದ್ದರು.
ಶಶಿ ಸಂಗಡಿಗರು ಪ್ರಾರ್ಥನೆಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದರು.ವಿದ್ಯಾರ್ಥಿ ಸಹನಾ ಗೌಡ ಸರ್ವರನ್ನು ಸ್ವಾಗತಿಸಿದರು. ವೆಂಕಟೇಶ ಕಾರ್ಯಕ್ರಮ ನಿರೂಪಣೆ ಮಾಡಿದರು ಪ್ರೀತಿ ಗಾಂವಕರ್ ವಂದಿಸಿದರು.
ವರದಿ: ರಾಮು.ಎನ್ ಹಿರೇಗುತ್ತಿ