ಹೊನ್ನಾವರ : ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತನ್ನದೇ ಆದ ಹಲವಾರು ವಿಶಿಷ್ಟತೆಗಳಿಂದ ಖ್ಯಾತಿ ಗಳಿಸಿರುವ ಪಟ್ಟಣ. ರಾಷ್ಟ್ರೀಯ ಹೆದ್ದಾರಿ ಇದೇ ಊರಿನ ಮೂಲಕ ಸಾಗಿ ಹೋಗುತ್ತದೆ. ವಿಶಾಲವಾದ ಶರಾವತಿಯ ಹರಿವಿನಷ್ಟೇ ಗಮನ ಸೆಳೆಯುವುದು ಕರ್ನಲ್ ಹಿಲ್, ಇಂತಹ ಐತಿಹಾಸಿಕ ಸ್ಮಾರಕವುಳ್ಳ ಪಟ್ಟಣ ವ್ಯಾಪ್ತಿಯ ಕರ್ನಲ್ ಹಿಲ್ ಸಮೀಪದ ಗುಡ್ಡ ಮತ್ತೆ ಕುಸಿಯಲಾರಂಭಿಸಿದೆ. ಗುಡ್ಡದ ಮೇಲ್ಭಾಗದ ಮನೆಗಳಿಗೆ ಅಪಾಯ ಎದುರಾಗಿದೆ. ಇದರಿಂದ ಮೇಲ್ಭಾಗದಲ್ಲಿರುವ ಕನಿಷ್ಠ ಮೂರು ಮನೆಗಳ ನಿವಾಸಿಗಳು ಆತಂಕಗೊಂಡಿದ್ದಾರೆ.

RELATED ARTICLES  ಉಜ್ವಲ ಯೋಜನೆಯನ್ನು ಮನೆ ಮನೆಗೆ ತಲುಪಿಸುತ್ತಿರುವ ಬೆಳಕು ಸಂಸ್ಥೆ

`ಕರ್ನಲ್ ಹಿಲ್ ಸಮೀಪ ಮತ್ತಷ್ಟು ಗುಡ್ಡ ಕುಸಿದರೆ ಮೇಲ್ಭಾಗದ ಮನೆಗಳಿಗೆ ಅಪಾಯ ಆಗಬಹುದು. ಮುಂದಿನ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ಧಕ್ಕೆಯಾಗುವ ಸಾಧ್ಯತೆಯಿದೆ. ಗುಡ್ಡದ ಕೆಳಗೆ ಹೊಂದಿಕೊಂಡಿರುವ ಜಾಗದ ಮಾಲೀಕರಾದ ಗೀತಾ ಸಾಂತೋಲಿನ್ ಫರ್ನಾಂಡಿಸ್ ಎಂಬವರಿಗೆ ನೋಟಿಸ್ ನೀಡಲಾಗಿದೆ. ಗುಡ್ಡಕ್ಕೆ ಪಿಚಿಂಗ್ ಕಟ್ಟುವ ಕಾಮಗಾರಿಯನ್ನು ಕೂಡಲೇ ಮುಗಿಸುವಂತೆ ಆದೇಶಿಸಲಾಗಿದೆ’ ಎಂದು ತಹಶೀಲ್ದಾರ ಮಂಜುಳಾ ಭಜಂತ್ರಿ ತಿಳಿಸಿದರು.

RELATED ARTICLES  ಸ್ನಾತಕೋತ್ತರ ಸಿ.ಇ.ಟಿ. ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಉತ್ತರಕನ್ನಡದ ಸನ್ಮತಿ ಸಾಧನೆ

ಈ ನಡುವೆ ಎರಡು ದಿನಗಳಿಂದ ಮಳೆಯ ತೀವ್ರತೆ ಹೆಚ್ಚಾಗಿದ್ದು ತಾಲೂಕಿನಲ್ಲಿ 38.1 ಮಿ.ಮೀ ಹಾಗೂ ಈ ವರ್ಷ ಇಲ್ಲಿಯವರೆಗೆ ಒಟ್ಟು 769.4 ಮಿ.ಮೀ ಮಳೆ ದಾಖಲಾಗಿದೆ. ಐತಿಹಾಸಿಕ ಸ್ಮಾರಕಕ್ಕೂ ಇದರಿಂದ ಅಪಾಯ ಎದುರಾಗುವುದರಿಂದ ಅದರ ರಕ್ಷಣೆ ಆಡಳಿತದ ಜವಾಬ್ಧಾರಿಯಾಗಿದೆ.