ಶ್ರೀ ರಾಮದೇವ ಭಾನ್ಕುಳಿ ಮಠದಲ್ಲಿ ಶ್ರೀ ರಾಮದೇವರ ನೂತನ ಮೂರ್ತಿ ಪ್ರತಿಷ್ಠಾನ ಕಾರ್ಯಕ್ರಮವು ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಇಂದು ಮಧ್ಯಾಹ್ನ ತಾಂತ್ರಿಕರು, ವೈದಿಕರು, ವಿದ್ವಾಂಸರು ಮತ್ತು ಶಿಷ್ಯ ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜ್ರಂಭಣೆಯಿಂದ ನೇರವೆರಿತು.
ದೇವದಾರು ಮರದ ಪೀಠಕ್ಕೆ ಸೀಮೆಯ ಭಕ್ತರಿಂದ ದೇಣಿಗೆಯಾಗಿ ಬಂದ ರಜತದಿಂದ ರಜತ ಹೊದಿಕೆಯನ್ನು ಶ್ರೀ ಸಂಸ್ಥಾನ ದವರು ನೀಡಿದ ರಜತ ಮತ್ತು ಸುವರ್ಣ ಮಂತ್ರಾಕ್ಷತೆಯ ಕಿರೀಟ ಮತ್ತು ಮುಕುಟ ದಿಂದ ಶೋಭಾಯಮಾನ ವಾಗಿರುವ ಪೀಠದಲ್ಲಿ ಪಂಚ ಲೋಹದ ಶ್ರೀರಾಮ ಸೀತಾ ಮಾತೆ ಲಕ್ಷ್ಮಣ ಆಂಜನೇಯ ಮತ್ತು ಪರಿವಾರ ದೇವರನ್ನು ಶ್ರೀ ಗುರುಗಳು ಪ್ರತಿಷ್ಠಪಿಸಿದರು.
ಪ್ರತಿಷ್ಠಂಗ ಹವನ, ರಾಮತಾರಕ ಹವನ, ಸಹಸ್ರ ಕಲಶ ಸ್ಥಾಪನೆ, ಶ್ರೀಕರಾರ್ಚಿತ ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ ನಡೆದವು.
ಮಧ್ಯಾಹ್ನ ಧರ್ಮ ಸಭೆಯಲ್ಲಿ ಸಮಿತಿಯಿಂದ ಫಲ ಸಮರ್ಪಣೆ,
ಎಮ್.ಎಮ್ ಹೆಗಡೆ ದಂಪತಿಗಳಿಂದ ಸಭಾ ಪೂಜೆ,
ಭಾಸ್ಕರ ಹೆಗಡೆ ಇವರಿಂದ ಪ್ರಾಸ್ತಾವಿಕ ನುಡಿಗಳು ಹಾಗೂ ಶ್ರೀ ಅರ್.ಎಸ್.ಹೆಗಡೆಯವರು ಕಾರ್ಯಕ್ರಮದ ಸಮಗ್ರ ಅವಲೋಕನ ನೀಡಿದರು.
ಶಂಕರ ಪಂಚಮಿಯಂದು ಘೋಷಣೆಯಾದ ಶಂಕರ-ಕಿಂಕರ ಪ್ರಶಸ್ತಿಯನ್ನು ಇಂದು ಧಾರವಾಡದ ಶ್ರೀ ಭಾಲಚಂದ್ರ ಶಾಸ್ತ್ರಿ ಅವರಿಗೆ ಮರಣೋತ್ತರವಾಗಿ ನೀಡಲಾಯಿತು ಅವರ ಮೊಮ್ಮಗರಾದ ತರ್ಕರತ್ನ ವಾಚಸ್ಪತಿ ಶಾಸ್ತ್ರಿ ಇವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಶ್ರೀಮಠದ ಹಿರಿಯ ಶಿಷ್ಯರಾದ ತಿಮ್ಮಪ್ಪ ಮಂಜಯ್ಯ ಹೆಗಡೆ ಕನ್ನಳ್ಳಿ ಮತ್ತು ಸುಬ್ರಾಯ ಪರಮೇಶ್ವರ ಹೆಗಡೆ ಬಿದ್ರಕಾನ ಇವರನ್ನು ಶ್ರೀಗಳು ಸನ್ಮಾನ ಪತ್ರವನ್ನಿತ್ತು ಆಶಿರ್ವದಿಸಿದರು.
ನಾಗರಾಜ ಭಟ್ ಇವರು ಅಭಿನಂದನಾ ನುಡುಗಳನ್ನು ಆಡಿದರು.
ರಜತ ಶಿಲ್ಪಿ ಶ್ರೀ ಉದಾನೇಶ್ವರ,
ಕಾಷ್ಟ ಶಿಲ್ಪಿ ಶ್ರೀ ಗಣಪತಿ ಇವರನ್ನು ವಿಶೇಷವಾಗಿ ಆಶಿರ್ವದಿಸಿದರು.
ರಜತ ಪೀಠಕ್ಕೆ ವಿಶೇಷ ದೇಣಿಗೆ ನೀಡಿದ ದಾನಿಗಳನ್ನು ರಜತ ರಾಮಠಂಕೆಯೊಂದಿಗೆ ಆಶಿರ್ವಾದ ಮಂತ್ರಾಕ್ಷತೆಯನ್ನು ಶ್ರೀಗಳವರು ಅನುಗ್ರಹಿಸಿದರು.
ಶ್ರೀಗಳವರು ಪ್ರತಿಷ್ಠಾಂಗ ಆಶೀರ್ವಚನದಲ್ಲಿ ತಾಮ್ರಗುಂಡಿಯಿಂದ ಪುಣ್ಯಜಲವನ್ನು ಸಂಗ್ರಹಿಸಿ ಇಂದು ನಡೆಸಿದ ಪ್ರತಿಷ್ಠಾ ಕಾರ್ಯಕ್ರಮವನ್ನು ಶ್ಲಾಘಿಸಿ ಬಿಳಗಿ ಸೀಮೆಯ ಮತ್ತು ಸಮಸ್ತ ಶಿಷ್ಯ ಭಕ್ತರಿಗೂ ಸಪರಿವಾರ ಶ್ರೀ ರಾಮದೇವರ ಅನುಗ್ರಹವು ಸದಾ ಇರಲೆಂದು ಹರಸಿದರು.
ಜುಲೈ ೦೯ ರಿಂದ ಆರಂಭವಾಗಲಿರುವ ಅಭಯಾಕ್ಷರ ಪ್ರಯುಕ್ತ ಪ್ರತಿಯೊಬ್ಬರು ಸಮಯವನ್ನು ನೀಡಿ ಗೋಹತ್ಯಾ ನಿಷೇಧ ಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆಗ್ರಹಿಸೋಣ ಎಂದು ಕರೆ ನೀಡಿದರು.
ಶ್ರೀ ರಾಮದೇವರಿಗೆ ಶ್ರೀಗಳವರು ವಿಶೇಷ ಪೂಜೆ ನೆರವೇರಿಸಿದರು.
ನಾಳೆ ಪ್ರಾತಃ ಕಾಲ ಜೀವ ಕುಂಭಾಬಿಷೇಕ ಮತ್ತು ಸಹಸ್ರ ಕುಂಭಾಬಿಷೇಕ, ಮಹಾ ಪೂಜೆ ಪ್ರಸಾದ ವಿತರಣೆ ನಡೆಯಲಿದೆ.