ಕಾರವಾರ: ಕರ್ನಾಟಕ ನಾಟಕ ಅಕಾಡೆಮಿಯು 2017ನೇ ಸಾಲಿನಲ್ಲಿ ಪ್ರಕಟವಾಗಿರುವ ರಂಗಭೂಮಿಗೆ ಸಂಬಂಧಿಸಿದ ಕೃತಿಗಳಿಗೆ ಪುಸ್ತಕ ಬಹುಮಾನ ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ.

ಕೃತಿಗಳು ಜನೆವರಿ 2017 ರಿಂದ ಡಿಸೆಂಬರ್ 2017ರೊಳಗೆ ಮುದ್ರಣವಾಗಿರಬೇಕು. ಸಂಶೋಧನಾ ಪ್ರಬಂಧವಾಗಿರಬಾರದು. ಪುಸ್ತಕಗಳು ಯಾವುದೇ ಪದವಿಗಾಗಿ, ಪಿ.ಹೆಚ್.ಡಿ.ಗಾಗಿ ಮತ್ತು ಪಠ್ಯಪುಸ್ತಕಕ್ಕೆ ಸಿದ್ಧಪಡಿಸಿದ ವಿಷಯವಾಗಿರಬಾರದು. ಕಳುಹಿಸಲ್ಪಡುವ ಕೃತಿ ನಾಟಕವಾಗಿರಬಾರದು, ರಂಗಸಂಬಂಧಿ ವಸ್ತುವುಳ್ಳದ್ದಾಗಿಬೇಕು. ಕೃತಿಯ ತಾಂತ್ರಿಕ ಪುಟದಲ್ಲಿ ಮುದ್ರಣ ವರ್ಷವನ್ನು ನಮೂದಿಸಿರಬೇಕು.

RELATED ARTICLES  ಡಿ.26ರಂದು ಸೇವಂತಿಗೆ ಪುಷ್ಪ ಪ್ರದರ್ಶನ ಮತ್ತು ಮಾರಾಟ ಮೇಳ.

ಆಸ್ತಕ ಲೇಖಕರು ತಮ್ಮ ಹೆಸರು, ವಿಳಾಸ, ಪ್ರಕಟಣೆ ವರ್ಷ ನೀಡಿ, ಪುಸ್ತಕದ ನಾಲ್ಕು ಪ್ರತಿಗಳೊಂದಿಗೆ ರಿಜಿಸ್ಟ್ರಾರ್ , ಕರ್ನಾಟಕ ನಾಟಕ ಅಕಾಡೆಮಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002. ಇವರಿಗೆ ದಿನಾಂಕ : 30-09-2018 ರೊಳಗಾಗಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ವಿವರಗಳನ್ನು ಕಛೇರಿ ವೇಳೆಯಲ್ಲಿ ಅಕಾಡೆಮಿಯಿಂದ ಪಡೆಯಬಹುದು. ದೂರವಾಣಿ :080: 22237484 ಇ.ಮೇಲ್.ಐಡಿ. [email protected]ನಲ್ಲಿ ಅರ್ಜಿಗಳನ್ನು ಪಡೆಯಬಹುದು.

RELATED ARTICLES  ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿ 2,000 ಹುದ್ದೆಗಳಿಗೆ ಅರ್ಜಿ ಆಹ್ವಾನ.