ಕಾರವಾರ: ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಅವರು ಜೂನ್ 30 ಮತ್ತು ಜುಲೈ 1 ರಂದು ಉ.ಕ. ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಜೂನ್ 30 ರಂದು ಕಾರವಾರದಲ್ಲಿ ಬೆಳಗ್ಗೆ 10ಕ್ಕೆ ಸಾರ್ವಜನಿಕರ ಭೇಟಿ ಮಾಡುವರು. 10.30ಕ್ಕೆ ಮಳೆಹಾನಿ ಮತ್ತು ಕೈಗೊಂಡ ಪರಿಹಾರ ಹಾಗೂ ಪುನರ್ವಸತಿ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸುವರು. ಮಧ್ಯಾಹ್ನ 2.30ಕ್ಕೆ ಜೋಯಿಡಾದಲ್ಲಿ ಸಾರ್ವಜನಿಕರ ಭೇಟಿ ಮಾಡುವರು. 3 ಗಂಟೆಗೆ ಜೋಯಿಡಾ ತಾಲೂಕು ಮಟ್ಟದ ಕೆ.ಡಿ.ಪಿ ಸಭೆಯಲ್ಲಿ ಭಾಗವಹಿಸುವರು.ಸಂಜೆ 4.30ಕ್ಕೆ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.ಸಂಜೆ 5.30ಕ್ಕೆ ದಾಂಡೇಲಿಯಲ್ಲಿ ಸಾರ್ವಜನಿಕರ ಭೇಟಿ ಮಾಡುವರು.

RELATED ARTICLES  ವಿಸ್ತಾರ ಕಾಯಕ ಯೋಗಿ ಪ್ರಶಸ್ತಿಗೆ ಆರ್ .ಕೆ. ಬಾಲಚಂದ್ರ ಆಯ್ಕೆ

ಜುಲೈ 1 ರವಿವಾರದಂದು ಹಳಿಯಾಳದಲ್ಲಿ ಬೆಳಗ್ಗೆ 9ಕ್ಕೆ ಸಾರ್ವಜನಿಕರ ಭೇಟಿ ಮಾಡುವರು. 10.30ಕ್ಕೆ ತಾಲೂಕು ಮಟ್ಟದ ಕೆ.ಡಿ.ಪಿ ಸಭೆಯಲ್ಲಿ ಭಾಗವಹಿಸುವರು. ಮಧ್ಯಾಹ್ನ 12.30ಕ್ಕೆ ಹಳಿಯಾಳ ಪುರಸಭೆ ಸಮುದಾಯ ಭವನದಲ್ಲಿ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಬಳಿಕ ವಿವಿಧ ಫಲಾನುಭವಿಗಳಿಗೆ ಹಾಗೂ ಮುಜರಾಯಿ ಇಲಾಖೆಯಿಂದ ಮಂಜೂರಾದ ದೇವಸ್ಥಾನಗಳಿಗೆ ಚೆಕ್ ವಿತರಿಸುವರು.

RELATED ARTICLES  ಸರ್ವ ಸಮಾಜದ ಸಾಹಿತ್ಯ ಪ್ರೇಮಿಗಳೇ ನನ್ನ ಬೆಂಬಲಿಗರು - ಕೃಷ್ಣಮೂರ್ತಿ ಹೆಬ್ಬಾರ್