ಆತ್ಮೀಯ ಮಿತ್ರರೆ ಇಂದು ಯುವಾ ಬ್ರಿಗೇಡ್ ಶಿರಸಿ ಮತ್ತು ಶಾಂಭವಿ ಯುವಕ ಸಂಘ ರಾಗಿ ಹೊಸಳ್ಳಿ ವತಿಯಿಂದ ಹಣ್ಣಿನ ಗಿಡಗಳನ್ನ ನೆಡುವ(Mid_Day_Fruit) ಕಾರ್ಯಕ್ರಮವನ್ನು ಶಿರಸಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಗಿಹೊಸಳ್ಳಿಯಲ್ಲಿ ಹಮ್ಮಿಕೊಳ್ಳಲಾಯಿತು.

ತುಂಬಾ ಹೆಮ್ಮೆಯ ಸಂಗತಿ ‌ಎನೆಂದರೆ ದೇಶ‌ಕಟ್ಟುವನೆಡೆಗೆ ಸದಾ ಸಿದ್ದ ಎನ್ನುತ್ತಿರುವ ಸ್ಥಳೀಯ ಶಾಂಭವಿ ಯುವಕ ಸಂಘ,ರಾಗಿಹೊಸಳ್ಳಿಯ ಅರಣ್ಯ ಅಧಿಕಾರಿಗಳು ಮತ್ತು ಶಾಲೆಯ SDMC ಯ ಅದ್ಯಕ್ಷರು ತುಂಬಾ ಉತ್ಸುಕತೆಯಿಂದ ಈ ವಿಭಿನ್ನ ಕಾರ್ಯಕ್ರಮವನ್ನು‌ ಯಶಸ್ವಿಗೊಳಿಸಲು ತುಂಬು ಹ್ರದಯದ ಸಹಕಾರ ನೀಡಿದರು.

RELATED ARTICLES  “ಹಸಿರು ಮಾಸ” ಸಸ್ಯಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ

ವಿಷೇಷವೆನಂದರೆ ಯುವಾ ಬ್ರಿಗೇಡ್ ಉದ್ದೇಶವೇ ‌ಹಾಗೆ ಗಿಡಗಳನ್ನ ನೆಟ್ಟು ಹೆಮ್ಮೆ ಪಟ್ಟರಾಗಲಿಲ್ಲ‌ ಅದನ್ನ ಪೋಷಿಸಿ,ಸಂರಕ್ಷಿಸುವ ಮತ್ತು ಅದರಿಂದ ಫಲ ಪಡೆಯುವ ಪರಿಜ್ಞಾನ ಕೂಡಾ ಮಕ್ಕಳಲ್ಲಿ,ನಮ್ಮಲ್ಲಿ ಬೆಳೆಯ ಬೇಕು ಎಂಬುದು.ಅದರಂತೆಯೇ ನಾವು ನೆಟ್ಟ ಹಣ್ಣಿನ ಗಿಡಗಳ ಸಂರಕ್ಷಿಸುವ ಜವಾಬ್ದಾರಿಯನ್ನ ಪ್ರತಿ ತರಗತಿಯ ವಿದ್ಯಾರ್ಥಿಗಳ ಗುಂಪುಗಳಾಗಿ‌ ರಚಿಸಿ‌ ಆಯಾ ಹಣ್ಣಿನ ಗಿಡ ಬೆಳೆಸುವ ಜವಾಬ್ದಾರಿಯನ್ನ ಹಂಚುವಾಗ ನಮಗೆ ಆ ಗಿಡ ನಮಗೆ ಈ ಗಿಡ ಎಂದು ಪುಟ್ಟ ಮಕ್ಕಳ ಮುಗ್ಧತೆಯ ಉತ್ಸುಕತೆಯು ನಮ್ಮೆಲ್ಲರ ಮನ ಮುಟ್ಟುವಂತಿತ್ತು ಮತ್ತು ಯಾವ ಗುಂಪು ಸರಿಯಾಗಿ ಗಿಡಗಳನ್ನ ಸಂರಕ್ಷಿಸಿ ಬೆಳೆಸುವುದೊ ಆ ಗಿಂಪಿಗೆ ಮುಂದಿನ ವರ್ಷ ಇದೇ ಸಮಯಕ್ಕೆ ಬಹುಮಾನ ಶಾಂಬವಿ ಯುವಕ ಸಂಘದಿಂದ ನೀಡಲಾಗುದು ಎಂದು ಮಕ್ಕಳನ್ನ‌ಮಣ
ಉತ್ತೇಜಿಸಲಾಯಿತು..ಅರಣ್ಯ ಇಲಾಖೆ ಕೂಡಾ ನಮಗೆ ಗಿಡಗಳನ್ನ ಪೂರೈಸಿ ಸಹಕರಿಸಿದರು..ಹಾಗೆ ಅಲ್ಲಿನ‌ SDMC ಅದ್ಯಕ್ಷರು ಮತ್ತು ಶಿಕ್ಷಕ ಸಮೂಹ ಕೂಡಾ ನಾವೂ ಜವಾಬ್ದಾರಿ ತೆಗೆದುಕೊಳ್ಳುತ್ತೆವೆಂದು ಸಹಕರಿಸಿದರು.

RELATED ARTICLES  ಬಿಸಗೋಡ ಶಾಲೆ ಶೇ.84.61 ಫಲಿತಾಂಶ; ಸ್ನೇಹಾ ಪ್ರಥಮ