ಕುಮಟಾ: ಇಲ್ಲಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಸಾಂಸ್ಕøತಿಕ ಸಂಭ್ರಮ ದಿನವನ್ನು ಮೊದಲ ಬಾರಿಗೆ ಪುಸ್ತಕರಹಿತವಾಗಿ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿ ಅದ್ವಿತೀಯವಾಗಿ ಆಚರಿಸಿದರು.

ಶಾಲಾ ಮಂತ್ರಿಮಂಡಳದ ಉಸ್ತುವಾರಿಯಲ್ಲಿ ನಡೆದ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳ ಅನಾವರಣ ಅವರಲ್ಲಿ ಹುದುಗಿದ್ದ ಸಾಂಸ್ಕøತಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ಯಶಸ್ವಿಯಾಯಿತು. ನೃತ್ಯ-ನಾಟ್ಯ, ನಾಟಕ, ಕಥೆ-ಕವನ-ಗಾಯನ, ವಾಚನ ಮೊದಲಾದ ವಿಭಾಗಗಳಲ್ಲಿ ಮಕ್ಕಳು ಉತ್ತಮ ಪ್ರದರ್ಶನ ನೀಡಿ ಶಾಲೆಯ ಪರಿಸರದಲ್ಲಿ ಸಾಂಸ್ಕøತಿಕ ಕಲರವ ಮೂಡಿಸಿದರು.

RELATED ARTICLES  ನವಿಲಗೋಣ ನಂ.1 ಶಾಲೆಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ

ಪ್ರಾರಂಭದಲ್ಲಿ ರಕ್ಷಿತಾ ಸಂಗಡಿಗರು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ಎನ್.ಆರ್.ಗಜು ಕಾರ್ಯಕ್ರಮವನ್ನು ಉದ್ಘಾಟಿಸಿ, ತಿಂಗಳಿಗೊಮ್ಮೆ ಇಂತಹ ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ದಿನವನ್ನು ವಿದ್ಯಾರ್ಥಿಗಳ ಸಂಯೋಜನೆಯಲ್ಲಿ ನಡೆಸುವುದು ಇಲಾಖಾ ಆಶಯವೇ ಆಗಿದೆ ಎಂದರು.

RELATED ARTICLES  ಹಸೆ ಮಣೆ ಏರಬೇಕಿದ್ದ ಮದುಮಗಳು ನಾಪತ್ತೆ..!

ಭರತನಾಟ್ಯ ಪ್ರವೀಣೆ ಕುಮಾರಿ ಹರ್ಷಿತಾ, ಹಿರಿಯ ಶಿಕ್ಷಕರಾದ ಎಲ್.ಎನ್.ಅಂಬಿಗ, ವಿ.ಎನ್.ಭಟ್ಟ, ಎಸ್.ಪಿ.ಪೈ, ಪ್ರದೀಪ ನಾಯ್ಕ, ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರಣ ೀತ ಕಡ್ಲೆ, ತನುಜಾ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಮಾರ ವಿಶ್ವಾಸ ಪೈ, ಸ್ನೇಹಾ ಪಟಗಾರ, ಸುಬ್ರಹ್ಮಣ್ಯ ಗುನಗಾ ನಿರ್ವಹಿಸಿದರು.