ಕುಮಟಾ: ತಾಲೂಕಿನ ಸಂತೆಗೋಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಅರಣ್ಯ ವಾಸಿ ಸರಿ ಸುಮಾರು 128 ಕ್ಕೂ ಹೆಚ್ಚು ಮಹಿಳೆಯರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉಜ್ವಲ ಯೋಜನೆಯ ಅಡಿಯಲ್ಲಿ ಸಂತೆಗುಳಿಯಲ್ಲಿ ಉಚಿತಗ್ಯಾಸ್ ಸಿಲೆಂಡರ ವಿತರಿಸಲಾಯಿತು.

ಸಂತೆಗುಳಿ ಗ್ರಾಮ ಪಂಚಾಯತ ಸದಸ್ಯರಾದ ವಿನಾಯಕ ಭಟ್ಟ ಸರ್ವರನ್ನೂ ಸ್ವಾಗತಿಸಿದರು.ಶಾಸಕ ದಿನಕರ ಕೆ ಶೆಟ್ಟಿಯವರು ಕಾರ್ಯಕ್ರಮವನ್ನ ಉದ್ಗಾಟಿಸಿದರು ನಂತರ ಫಲಾನುಭವಿಗಳಿಗೆ ಸಿಲೆಂಡರ್ ವಿತರಿಸಿದರು.

ಬಿಜೆಪಿ ಮುಖಂಡ ಮದನ ನಾಯಕ ಅವರು ಮಾತನಾಡಿ ಈ ಯೋಜನೆ ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೊದಿಯವರ ಕನಸಿನ ಕೂಸು. ಹಳ್ಳಿಯಲ್ಲಿ ಕಷ್ಟದ ಬದುಕು ಸಾಗಿಸುತ್ತಿರುವ ಪ್ರತಿಯೊಬ್ಬ ಮಹಿಳೆಗೂ ಅನುಕೂಲ ಮಾಡಿಕೊಡುವುದೇ ಈ ಯೊಜನೆಯ ಉದ್ದೇಶ ಎಂದರು ಅಲ್ಲದೇ ಸಿಲೆಂಡರನ್ನು ಹೇಗೆ ಮಹಿಳೆಯರು ಉಪಯೋಗಿಸ ಬೇಕು ಎಂಬ ಸಮಗ್ರ ಮಾಹಿತಿ ನೀಡಿದರು

ಬಿಜೆಪಿ ಮುಖಂಡ ಡಾ ಜಿ ಜಿ ಹೆಗಡೆ ಮಾತನಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಡವರಿಗಾಗಿ ಸಾಕಷ್ಟು ಯೋಜನೆ ಗಳನ್ನ ತಂದಿದ್ದಾರೆ ಅದರಲ್ಲಿ ಬಡ ಮಹಿಳೆಯರಿಗಾಗಿ ಉಜ್ವಲ ಯೋಜನೆ ಕೂಡ ಒಂದು ಎಂದರು ಗ್ರಾಮೀಣ ಭಾಗದ ಬಡ ಮಹಿಳೆಯರು ಉರುವಲದಿಂದ ಅನುಭವಿಸುವ ತೊಂದರೆಯನ್ನ ನೀಗಿಸಲು ಈ ಯೋಜನೆಯನ್ನ ತರಲಾಗಿದೆ ಎಂದರು

RELATED ARTICLES  ಹಾಳಾದ ರಸ್ತೆ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟ : ಹೆಗಡೆಯ ಗಣೇಶ ನಾಯ್ಕ

ಜಿಲ್ಲಾ ಪಂಚಾಯತ ಸದಸ್ಯರಾದ ಗಜಾನನ ಪೈ ಮಾತನಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜನಸಾಮಾನ್ಯರಿಗೆ ಅನುಕೂಲವಾಗುವಂತ ಹಲವಾರು ಯೋಜನೆಗಳನ್ನ ನೀಡಿ ಸಾಕಷ್ಟು ಹಣ ಬಿಡುಗಡೆ ಮಾಡಿದ್ದಾರೆ ಅದರ ಪ್ರಯೋಜನವನ್ನ ಫಲಾನುಭವಿಗಳು ಪಡೆದು ಕೊಳ್ಳಬೇಕು ಎಂದರು

ಶಾಸಕ ದಿನಕರ ಕೆ ಶೆಟ್ಟಿಯವರು ಮಾತನಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ರಾಜಧಾನಿ ದೆಹಲಿಯಲ್ಲಿ ಕುಳಿತಿದ್ದಾರೆ ಎಂದು ನಾವು ಅಂದುಕೊಂಡಿದ್ದರೂ ಪ್ರತಿ ಹಳ್ಳಿಯಲ್ಲಿ ಕಷ್ಟದ ಬದುಕು ಸಾಗಿಸುತ್ತಿರುವ ಮಹಿಳೆಯರ ಸಮಸ್ಯೆಯನ್ನ ಅರಿತು ಈ ಯೋಜನೆಯನ್ನ ತಂದಿದ್ದಾರೆ ಅಲ್ಲದೆ ಇದರಿಂದ ಪರಿಸರವನ್ನೂ ಉಳಿಸಲು ಸಾಧ್ಯವಾಗುತ್ತದೆ ಎಂದರು

RELATED ARTICLES  ಕಾರವಾರದಲ್ಲಿ ಸಂಪನ್ನವಾದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ

ಅದೇ ರೀತಿ ಹಲವು ಉತ್ತಮ ಯೋಜನೆಗಳಿದ್ದು ಅದರಲ್ಲಿ ಆರೊಗ್ಯವಿಮೆ ಕೂಡಾ ಒಂದು ಈ ಯೋಜನೆಯಲ್ಲಿ ಜನಸಾಮಾನ್ಯರಿಗೆ 5 ಲಕ್ಷದ ವರೆಗೆ ಉಚಿತ ಔಷದೋಪಚಾರದ ವೆಚ್ಚವನ್ನ ಕೇಂದ್ರ ಸರಕಾರದಿಂದ ಭರಿಸಲಾಗುವುದು ಎಂದರು ಅಲ್ಲದೇ ಮುಂದಿನ ದಿನಗಳಲ್ಲಿ ವಿಧಾನಸಭೆಯಲ್ಲಿ ಅತಿಕ್ರಮಣದಾರರ ಸಮಸ್ಯೆಯ ಕುರಿತು ದ್ವನಿ ಎತ್ತುವದಾಗಿ ಭರವಸೆ ನೀಡಿ ತನ್ನ ಗೆಲುವಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿದರು

ಊರಿನ ಹಲವು ಮುಖಂಡರು ದಿನಕರ ಶೆಟ್ಟಿಯವರಿಗೆ ಮಾಲಾರ್ಪಣೆ ಮಾಡಿದರು

ಕಾರ್ಯಕ್ರಮದಲ್ಲಿ ದಿನಕರ ಕೆ ಶೆಟ್ಟಿ ಜಿಲ್ಲಾ ಪಂಚಾಯತ ಸದಸ್ಯರಾದ ಗಜಾನನ ಪೈ ಡಾ ಜಿ ಜಿ ಹೆಗಡೆ ಮದನ ನಾಯಕ ಬಿಜೆಪಿ ತಾಲೂಕಾ ಉಪಾದ್ಯಕ್ಷ ಜಿ ಐ ಹೆಗಡೆ ವಿನಾಯಕ ಬಟ್ಟ ನಾಜಿಮಾ ರಹೀಮ್ ಖಾನ್ ಫಕಿರ ಸಾಬ್ ಸಿರಿಲ್ ಫರ್ನಾಂಡೀಸ ಸಪ್ಪನ ಹೊಸಳ್ಳಿ ಪಂಚಾಯತ ಆಧ್ಯಕ್ಷರಾದ ಪಾರ್ವತಿ ಗೌಡ ಇನ್ನೂ ಹಲವು ಮುಖಂಡರು ಉಪಸ್ಥಿತರಿದ್ದರು..