ಮಸಾಲೆಗಳು ಖಾದ್ಯದ ರುಚಿಯನ್ನು ಹೆಚ್ಚಿಸುತ್ತವೆ. ಭಾರತದಲ್ಲಿ ಬಗೆ ಬಗೆಯ ಮಸಾಲೆಗಳನ್ನು ಬಳಸ್ತಾರೆ. ಈ ಮಸಾಲೆಗಳು ರುಚಿ ನೀಡುವ ಜೊತೆಗೆ ತಮ್ಮದೇ ಆದ ಮಹತ್ವವನ್ನು ಹೊಂದಿವೆ.

ಮಸಾಲೆಗಳಲ್ಲಿ ಜೀರಿಗೆ ಕೂಡ ಒಂದು. ದಾಲ್ ಇರಲಿ, ತರಕಾರಿ ಸಾಂಬಾರ್ ಇರಲಿ ಎಲ್ಲದಕ್ಕೂ ಜೀರಿಗೆ ಇರಲೇಬೇಕು. ಜೀರಿಗೆಯನ್ನು ಕೇವಲ ಸುವಾಸನೆಗಾಗಿ ಬಳಸುವುದಿಲ್ಲ. ಜೀರಿಗೆ ಬಹುಪಯೋಗಿ ಮಸಾಲೆ. ಇದರಲ್ಲಿ ಆರೋಗ್ಯ ಅಡಗಿದೆ. ಸ್ವಲ್ಪ ಜೀರಾ ನಿಮ್ಮ ದೇಹದ ತೂಕವನ್ನು ನಿಯಂತ್ರಿಸಬಲ್ಲದು ಅಂದ್ರೆ ನೀವು ನಂಬಲೇಬೇಕು.

ನೀವು ತೂಕ ಇಳಿಸುವ ಪ್ರಯತ್ನದಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿ. ಜೀರಿಗೆ ಪುಡಿ ನಿಮ್ಮ ತೂಕ ಇಳಿಸುತ್ತೆ ಎಂಬುದನ್ನು ಅಧ್ಯಯನವೊಂದು ಹೇಳಿದೆ. ಇದನ್ನು ಬಳಸುವುದರಿಂದ ಕೊಬ್ಬು ಕರಗುವುದಲ್ಲದೇ, ಕೊಲೆಸ್ಟ್ರಾಲನ್ನು ಸ್ವಾಭಾವಿಕವಾಗಿ ಕಡಿಮೆ ಮಾಡುತ್ತದೆ.
ಆಹಾರ ಜೀರ್ಣವಾಗಲು ಜೀರಿಗೆ ಬಹಳ ಉಪಯುಕ್ತ. ಜೀರ್ಣ ಶಕ್ತಿಯನ್ನು ಹೆಚ್ಚಿಸುವ ಗುಣವನ್ನು ಇದು ಹೊಂದಿದೆ. ಆಹಾರ ಜೀರ್ಣವಾಗುವುದಿಲ್ಲ ಎನ್ನುವವರು ಜೀರಿಗಾ ಟೀ ಸೇವಿಸುವುದು ಒಳ್ಳೆಯದು.

RELATED ARTICLES  ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ತಿಂದರೆ ಫಿಟ್ಸ್ ಬರುವ ಸಂಭವವಿದೆ.!?

ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆಯನ್ನು ಹಾಕಿ. ಅದನ್ನು ಸರಿಯಾಗಿ ಕುದಿಸಿ. ನೀರು ಕಂದು ಬಣ್ಣಕ್ಕೆ ತಿರುಗಿದಾಗ ಗ್ಯಾಸ್ ಆರಿಸಿ. ಜೀರಿಗೆ ನೀರು ತಣ್ಣಗಾದ ನಂತರ ಸೇವಿಸಿ. ದಿನಕ್ಕೆ ಮೂರು ಬಾರಿ ಈ ಟೀ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಸುಲಭವಾಗಿ ಆಗುವುದಲ್ಲದೇ ಹೊಟ್ಟೆ ನೋವು ಗುಣವಾಗುತ್ತದೆ.
ಎರಡು ಚಮಚ ಜೀರಿಗೆಗೆ ನೀರು ಬೆರೆಸಿ ರಾತ್ರಿ ಪೂರ್ತಿ ನೆನೆಸಿಡಿ. ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀರನ್ನು ಕುದಿಸಿ ಕುಡಿಯಿರಿ. ಜೊತೆಯಲ್ಲಿ ಜೀರಿಗೆಯನ್ನು ಅಗೆದು ನುಂಗಿ. ಹೀಗೆ ಮಾಡಿದ್ರೆ ನಿಮ್ಮ ತೂಕ ಕಡಿಮೆಯಾಗುತ್ತದೆ.

ಆಹಾರದಲ್ಲಿ ಸಾಕಷ್ಟು ಜೀರಿಗೆಯನ್ನು ಬಳಸಬೇಕು. 05 ಗ್ರಾಂ ಮೊಸರಿಗೆ ಜೀರಿಗೆ ಪುಡಿ ಹಾಕಿ ಪ್ರತಿದಿನ ತಿನ್ನಿ. ನಿಮ್ಮ ತೂಕ ಕಡಿಮೆಯಾಗುತ್ತದೆ. ಮೂರು ಗ್ರಾಂ ಜೀರಿಗೆ ಪುಡಿಯನ್ನು ಜೇನು ತುಪ್ಪದೊಂದಿಗೆ ಸೇವಿಸುತ್ತ ಬಂದರೂ ತೂಕವನ್ನು ಇಳಿಸಿಕೊಳ್ಳಬಹುದು. ಒಂದು ಚಮಚ ಜೀರಿಗೆ ಪುಡಿಯನ್ನು ಅಕ್ಕಿ ಅಥವಾ ತರಕಾರಿ ಸೂಪ್ ಜೊತೆ ಬೆರೆಸಿ ಕುಡಿಯಬಹುದು.
ಬೆಳ್ಳುಳ್ಳಿ ಮತ್ತು ನಿಂಬೆ ಕೂಡ ನಿಮ್ಮ ತೂಕ ಕಡಿಮೆ ಮಾಡಲು ಸಹಕಾರಿ. ಕ್ಯಾರೆಟ್ ಮತ್ತು ಇತರ ತರಕಾರಿಗಳನ್ನು ಬೆರೆಸಿ ಬೇಯಿಸಿ. ಇದಕ್ಕೆ ಬೆಳ್ಳುಳ್ಳಿ ಹಾಗೂ ನಿಂಬೆ ರಸವನ್ನು ಮಿಕ್ಸ್ ಮಾಡಿ. ನಂತರ ಜೀರಿಗೆ ಪುಡಿಯನ್ನು ಸೇರಿಸಿ. ಇದನ್ನು ಪ್ರತಿ ರಾತ್ರಿ ತಿನ್ನುತ್ತ ಬನ್ನಿ. ಕೆಲವೇ ದಿನಗಳಲ್ಲಿ ಫಲಿತಾಂಶ ಕಾಣುತ್ತೀರಿ.
ಮೇಲೆ ಹೇಳಿದ ಎಲ್ಲ ಬಗೆಯ ಔಷಧಿಗಳನ್ನು ಕನಿಷ್ಠ 15 ದಿನ ಮಾಡಬೇಕಾಗುತ್ತದೆ. ಆಗ ಮಾತ್ರ ಫಲಿತಾಂಶ ಸಿಗಲು ಸಾಧ್ಯ.

RELATED ARTICLES  ಸವತೇಕಾಯಿ ಬಳಸಿ ಸನ್ ಬರ್ನ ತಡೆಯುವುದು ಹೇಗೆ ಗೊತ್ತಾ?