ಬಳ್ಳಾರಿ, – ಮದುವೆಯಾಗಿ ಇನ್ನೂ ಎರಡು ದಿನ ಕಳೆದಿರಲಿಲ್ಲ. ಅರಿಶಿಣ ನೀರು ಆರಿರಲಿಲ್ಲ. ಆಗಲೇ ಅಪಘಾತ ಸಂಭವಿಸಿ ವರ ಮೃತಪಟ್ಟು, ವಧು ಗಂಭೀರವಾಗಿ ಗಾಯಗೊಂಡಿರುವ ಹೃದಯ ವಿದ್ರಾವಕ ಘಟನೆ ಅರಭಾವಿ ಬಳಿ ನಡೆದಿದೆ. ಮೊನ್ನೆಯಷ್ಟೇ ಬಳ್ಳಾರಿಯ ಉಜ್ಜೈನಿಯ ನಿವಾಸಿ ಕಾಂತೇಶ್ ಅವರ ವಿವಾಹ ಜಗಳೂರಿನಲ್ಲಿ ಆಗಿತ್ತು. ನಿನ್ನೆ ಸಂಜೆ ವಧುವಿನ ಸ್ವಗ್ರಾಮ ಹೊಸಕೆರೆಯಿಂದ ಉಜ್ಜೈನಿಗೆ ನವ ಜೋಡಿಗಳು ಕಾರಿನಲ್ಲಿ ಆಗಮಿಸುವಾಗ ಗಡಿಮಾಕುಂಟೆ ಬಳಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ವರ ಕಾಂತೇಶ್ ಮೃತಪಟ್ಟರೆ ವಧು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಂತಾಜನಕ ಸ್ಥಿತಿಯಲ್ಲಿದೆ ಎಂದು ಹೇಳಲಾಗುತ್ತಿದೆ.

RELATED ARTICLES  ಸಾಮಾಜಿಕ ನ್ಯಾಯದ ಹರಿಕಾರ ಅಂಬೇಡ್ಕರ್ ಅವರ ಜಯಂತಿ ಆಚರಣೆ.