ಕುಮಟಾ: ಧರ್ಮಸ್ಥಳದ ಶ್ರೀರಾಮ ಕ್ಷೇತ್ರದಲ್ಲಿ ಸೆಪ್ಟೆಂಬರ್ 3 ರಂದು ರಾಷ್ಟ್ರೀಯ ಧರ್ಮ ಸಂಸತ್‌ ನಡೆಯಲಿದೆ. ಈ ಬಗ್ಗೆ ಕಾರ್ಯ ಚಟುವಟಿಕೆಗಳು ಚುರುಕಾಗಿದ್ದು ಪೂರ್ವಭಾವಿ ಸಭೆಗಳೂ ನಡೆಯುತ್ತಿವೆ.

ರಾಷ್ಟ್ರೀಯ ಧರ್ಮ ಸಂಸತ್‌ ನ ಪೂರ್ವಭಾವಿ ಸಭೆ ಕುಮಟಾದ ನಾಮಧಾರಿ ಸಮಾಜ ಭವನದಲ್ಲಿ ನಡೆಯಿತು.

RELATED ARTICLES  ಗುಜರಾತ್ ಗೆ ಬೈಕ್ ನಲ್ಲಿ ಹೊರಟ ಹವ್ಯಾಸಿ ಬೈಕ್ ರೈಡರ್ ಗಳು.

ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತಿನೀಡಿ ಮಾರ್ಗದರ್ಶನ ಮಾಡಿದರು. ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂದೂ ಮುಖಂಡ ಸುರಜ್ ನಾಯ್ಕ ಸೋನಿ ಮತ್ತು ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ನಾಯ್ಕ ಸಭೆಯನ್ನುದ್ದೇಶಿಸಿ ಮಾತನಾಡಿ ಕಾರ್ಯಕ್ರಮದ ಬಗ್ಗೆ ವಿವರಿಸಿದರು.

RELATED ARTICLES  ಗೋಕರ್ಣದಲ್ಲಿ ಸಂಪನ್ನವಾದ 'ದಧಿ ಶಿಕ್ಯೋತ್ಸವ'

ಸಭೆಯಲ್ಲಿ ಪ್ರಮುಖರಾದ ಜೈವಂತ್ ಸಾರಂಗ್, ಮಂಜುನಾಥ್ ರುಕ್ಕಪ್ಪ ನಾಯ್ಕ, ಎಟಿ ನಾಯ್ಕ, ಸುಬ್ರಾಯ ಜಿ ನಾಯ್ಕ, ಎಚ್ ಆರ್ ನಾಯ್ಕ ಇದ್ದರು.