ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ರಾತ್ರಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ತಮ್ಮ ಪಕ್ಷದ ಶಾಸಕರುಗಳಿಗೆ ಔತಣಕೂಟವನ್ನು ಆಯೋಜನೆ ಮಾಡಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದ ಕೆಲವು ಮಂದಿ ಶಾಸಕರು ಸಿಟ್ಟಾಗಿದ್ದು, ಸಿದ್ದರಾಮಯ್ಯ ಔತಣ ಕೂಟಕ್ಕೆ ಬಾರದೇ ಗೆ ಟಾಂಗ್ ನೀಡಿದ್ದಾರೆ.

RELATED ARTICLES  ಕಳ್ಳರನ್ನು ಹೆಡೆಮುರಿ ಕಟ್ಟಿದ ಪೊಲೀಸರು

ಔತಣ ಕೂಟದ ನೆಪದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಶಕ್ತಿ ಪ್ರದರ್ಶನ ಮಾಡಲು ಮಂದಾಗಿದ್ದಾರೆ ಎನ್ನಲಾಗಿದೆ. ಇನ್ನು ಇಂದಿನ ಔತಣ ಕೂಟಕ್ಕೆ ಸತೀಶ್ ಜಾರಕಿ ಹೊಳಿ, ರೋಷನ್ ಬೇಗ್, ರಾಮಲಿಂಗರೆಡ್ಡಿ ಯವರು ಆಗಮಿಸಿಲ್ಲ.

RELATED ARTICLES  ತಾಯ್ನಾಡಿಗೆ ಕಾಲಿಟ್ಟ ಅಭಿನಂದನ್ : ಮೋದಿಗೆ ಹರಿದು ಬಂತು ಅಭಿನಂದನೆ

ಬೈರತಿ ಸುರೇಶ್, ಕೃಷ್ಣ ಭೈರೇಗೌಡ, ಡಾ.ಜಿ.ಪರಮೇಶ್ವರ್, ಪ್ರಿಯಾಂಕ ಖರ್ಗೆ, ಕೆ.ಸುಧಾಕರ್, ಶಾಮನೂರು ಶಿವಶಂಕರಪ್ಪ, ಎಸ್.ಆರ್ ಪಾಟೀಲ್, ಮುನಿಯಪ್ಪ, ರಾಮಪ್ಪ, ಧರ್ಮಸೇನಾ ಸೇರಿದಂತೆ ಅನೇಕ ಶಾಸಕರು ಹಾಜರಿದ್ದಾರೆ.