ಹೊನ್ನಾವರ : ಮುಂಬರುವ ಲೋಕಸಭೆ, ಪಟ್ಣಣ ಪಂಚಾಯತ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಮತ್ತು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಅನುಭವಿಸಿದ ಸೋಲಿನ ಕುರಿತು ಪರಾಮರ್ಶಿಸಿ, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲು ಬರುವ ಗುರುವಾರ ದಿ.5 ರಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆಯಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್.ತೆಂಗೇರಿ ತಿಳಿಸಿದ್ದಾರೆ.

RELATED ARTICLES  ಕುಮಟಾ ಹೊನ್ನಾವರದ ಇಂದಿನ ಕೊರೋನಾ ವಿವರ

ಮುಂಜಾನೆ 10:30 ಗಂಟೆಗೆ ನಗರದ ಕೆ.ಡಿ.ಸಿ.ಸಿ.ಬ್ಯಾಂಕ್ ಹತ್ತಿರವಿರುವ ಸೊಶಿಯಲ್ ಕ್ಲಬ್ ಸಭಾಭವನದಲ್ಲಿ ಸಭೆ ನಡೆಯಲಿದ್ದು ಮಾಜಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ .

RELATED ARTICLES  ಹೊನ್ನಾರಾಕಾ ದೇವರ ‘ಹೊಸ್ತು ಹಬ್ಬ’

ಕಾರಣ ಪಕ್ಷದ ಹಿರಿಯ,ಕಿರಿಯ ಮುಖಂಡರುಗಳು, ಬೂತ್ ಮಟ್ಟದ ಕಾರ್ಯಕರ್ತರುಗಳು ಮತ್ತು ವಿವಿಧ ಸೆಲ್‍ಗಳ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಮೂಲ್ಯ ಸÀಲಹೆ-ಸೂಚನೆ ನೀಡುವಂತೆ ಹೊನ್ನಾವರದ ಬ್ಲಾಕ್ ಕಾಂಗ್ರೆsಸ್À ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.