ಬೆಂಗಳೂರು : ಬೆಂಗಳೂರು ಕವಿವೃಕ್ಷ ಬಳಗವು ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಪುಸ್ತಕ ಬಿಡುಗಡೆ ಮತ್ತು ರಾಜ್ಯ ಮಟ್ಟದ ಕವಿಗೊಷ್ಟಿಯನ್ನು ಆಯೋಜಿಸಲಾಗಿತ್ತು.
ಬೆಂಗಳೂರು ಕವಿವೃಕ್ಷ ಬಳಗವು ರಾಜ್ಯದ ವಿವಿಧ ಭಾಗಗಳಲ್ಲಿರುವ ಉದಯೋನ್ಮುಖ ಲೇಖಕರನ್ನು ಗುರುತಿಸಿ ಅವರ ಕೃತಿಗಳ ಲೋಕಾರ್ಪಣೆಗೆ ವೇದಿಕೆಯನ್ನು ಕಲ್ಪಿಸಿ ಎಲ್ಲಾ ಲೇಖಕರಿಗೆ ಗೌರವ ಪ್ರಶಸ್ತಿಗಳೊಡನೆ ಸನ್ಮಾನಿಸಲಾಯಿತು.
ಒಟ್ಟು ಹದಿನೇಳು ಕೃತಿಗಳು ಲೋಕಾರ್ಪಣೆಗೊಂಡಿದ್ದು ಈ ಕಾರ್ಯಕ್ರಮದ ವಿಶೇಷ. ಹಿರಿಯ ಸಾಹಿತಿಗಳಾದ ಪ್ರೊ.ದೊಡ್ಡರಂಗೇ ಗೌಡರು ಮತ್ತು ದೂರದರ್ಶನದ ಹಾಸ್ಯ ವಾಗ್ಮಿಗಳಾದ ಎಂ.ಎಸ್. ನರಸಿಂಹ ಮೂರ್ತಿಗಳಂತಹ ಸಾಹಿತ್ಯ ದಿಗ್ಗಜರುಗಳ ಸಮ್ಮುಖದಲ್ಲಿ ಈ ಹದಿನೈದು ಕೃತಿಗಳು ಲೋಕಾರ್ಪಣೆಯಾದವು.
ಸತ್ವಾಧಾರ ನ್ಯೂಸ್ ಗೆ ವಾರದ ಲೇಖನ ನೀಡುವ ಎನ್ ಮುರಳೀಧರ ಅವರ ಕೃತಿಯೂ ಬಿಡುಗಡೆಯಾಗಿ ಜನಮೆಚ್ಚುಗೆ ಗಳಿಸಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಸಾಹಿತಿಗಳಾದ ದೊಡ್ಡ ರಂಗೇ ಗೌಡರು ಕನ್ನಡ ಭಾಷೆಯ ಬಗ್ಗೆ ತಾವು ಮಾಡಿದ ಸಂಶೋದನೆಯನ್ನು ಕುರಿತು ಮಾತನಾಡಿದರು.