ಕುಮಟಾ: ಇಲ್ಲಿನ ಪ್ರಸಿದ್ಧ ಬಾಡದ ಕಾಂಚಿಕಾ ಪರಮೇಶ್ವರಿ ದೇವಸ್ಥಾನ ವಿವಾದ ಈಗ ಬೇರೆ ತಿರುವು ಪಡೆದಿದೆ. ಇದೀಗ ಆಡಳಿತಾಧಿಕಾರಿಯನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ‌.

ಉಪವಿಭಾಗಾಧಿಕಾರಿಯವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿದೆ. ದೇವಸ್ಥಾನವನ್ನು ಮುಜರಾಯಿ ಇಲಾಖೆ ಮೇಲ್ದರ್ಜೆಗೇರಿಸಿರುವುದರಿಂದ ಅವರನ್ನು ನೇಮಕ ಮಾಡಲಾಗಿದೆ ಎಂದು ಅಧಿಕೃತ ವರದಿ ಹೇಳಿದೆ.

RELATED ARTICLES  ವಾಟ್ಸ್ಆಪ್ಆಪ್ನಲ್ಲಿ ಪ್ರಚೋದನಾಕಾರಿ ಮಾಹಿತಿ ರವಾನೆ; ಪ್ರಕರಣ ದಾಖಲು

ದೇವಸ್ಥಾನದ ಸಭಾ ಭವನದಲ್ಲಿ ನಡೆದ ಸಾರ್ವಜನಿಕರ ಸಭೆಯಲ್ಲಿ ಈ ಹಿಂದಿನ ಆಡಳಿತ ಮೊಕ್ತೇಸರ ಜೆ.ಎಸ್.ನಾಯ್ಕ ಹಾಗೂ ಸಾರ್ವಜನಿಕರು ಇದ್ದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಮಾತನಾಡಿ, ಈ ಹಿಂದೆ ಕಾಂಚಿಕಾ ಪರಮೇಶ್ವರಿ ದೇವಾಲಯ ವ್ಯವಹಾರ ದೃಷ್ಟಿಯಿಂದ ‘ಬಿ’ ದರ್ಜೆಯಲ್ಲಿತ್ತು. ಈಗ ‘ಎ’ ದರ್ಜೆಗೇರಿದ್ದರಿಂದ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿದೆ ಎಂದು ತಿಳಿಸಿದರು.

RELATED ARTICLES  ಉತ್ತರಕನ್ನಡದಲ್ಲಿ ಇಂದು ಒಂದೇ ದಿನ 100 ಕೊರೋನಾ ಕೇಸ್..!