ಮುಂಬೈ, – ಬಹುಭಾಷಾ ತಾರೆ ಸೊನಾಲಿ ಬೇಂದ್ರೆಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಈ ವಿಷಯವನ್ನು ಸ್ವತಃ ಸೊನಾಲಿ ಬೇಂದ್ರೆ ತಿಳಿಸಿದ್ದು, ತಮಗೆ ಹೈ ಗ್ರೇಡ್ (ಗರಿಷ್ಠ ಮಟ್ಟ) ಕ್ಯಾನ್ಸರ್ ಇರುವುದು ರೋಗ ನಿರ್ಧಾರ ಪರೀಕ್ಷೆಯಿಂದ ಪತ್ತೆಯಾಗಿದೆ. ಪ್ರಸ್ತುತ ತಾವು ನ್ಯೂಯಾರ್ಕ್‍ನಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಬಾಲಿವುಡ್‍ನ ಪ್ರತಿಭಾವಂತ ನಟ ಇರ್ಫಾನ್‍ಖಾನ್‍ಗೆ ಅರ್ಭುದ ರೋಗ ಕಂಡುಬಂದ ನಂತರ ಬಾಲಿವುಡ್ ನಟಿ ಸೊನಾಲಿಗೂ ಕ್ಯಾನ್ಸರ್ ಪತ್ತೆಯಾಗಿರುವುದು ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ತಮಗೆ ಕ್ಯಾನ್ಸರ್ ರೋಗ ಪತ್ತೆಯಾಗಿದೆ. ನನ್ನ ಕುಟುಂಬ ವರ್ಗದವರು, ಬಂಧು ಮಿತ್ರರು ಹಾಗೂ ಅಭಿಮಾನಿಗಳ ಹಾರೈಕೆಯಿಂದ ನಾನು ಶೀಘ್ರ ಚೇತರಿಸಿಕೊಳ್ಳುತ್ತೇನೆ ಎಂಬ ವಿಶ್ವಾಸ ನನ್ನಲ್ಲಿದೆ ಎಂದು ಸೊನಾಲಿ ಆತ್ಮವಿಶ್ವಾಸದಿಂದ ನುಡಿದಿದ್ದಾರೆ.

RELATED ARTICLES  ಉಡುಪಿ: ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣ – ವಿದ್ಯಾರ್ಥಿನಿ ಆತ್ಮಹತ್ಯೆ