ಬೆಂಗಳೂರು: ಸಿಎಂ ಕುಮಾರಸ್ವಾಮಿ ರೈತರ ಸಾಲ ಮನ್ನಾ ಭರವಸೆಯನ್ನು ಬಜೆಟ್ ನಲ್ಲಿ ಭಾಗಶಃ ಈಡೇರಿಸಿದ್ದಾರೆ. ಆದರೆ ಸುಸ್ತಿ ಸಾಲ ಮನ್ನಾದಿಂದ ಸರ್ಕಾರದ ಮೇಲೆ ಬೀಳುವ 34 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಹೊರೆಯನ್ನು ಸರಿತೂಗಿಸಲು ಜನಸಾಮಾನ್ಯನ ಮೇಲೆ ತೆರಿಗೆ ಹೊರೆ ಹೊರಿಸಿದ್ದಾರೆ.

ಪೆಟ್ರೋಲ್, ಡಿಸೆಲ್ ಮೇಲಿನ ಸೆಸ್ ನ್ನು ಶೇ.32 ಕ್ಕೆ ಏರಿಕೆ ಮಾಡಲಾಗಿದ್ದು, ಈಗಾಗಲೇ ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿರುವ ಜನಸಾಮಾನ್ಯ ಪ್ರತಿ ಲೀಟರ್ ಪೆಟ್ರೋಲ್ ಗೆ 1 ರೂಪಾಯಿ 14 ಪೈಸೆಯನ್ನು ಹೆಚ್ಚು ಹಣ ತೆರಬೇಕಾಗುತ್ತದೆ. ಇನ್ನು ಪೆಟ್ರೋಲ್ ಅಷ್ತೇ ಅಲ್ಲದೇ ಮೋಟಾರು ವಾಹನ ತೆರಿಗೆಯೂ ದುಬಾರಿಯಾಗಿದ್ದು, ಶೇ.50 ರಷ್ಟು ಏರಿಕೆ ಮಾಡಲಾಗಿದೆ.

RELATED ARTICLES  ಫೇಕ್ ನ್ಯೂಸ್ ಗೆ ಕತ್ತರಿ ಹಾಕುವಂತೆ ವಾಟ್ಸ್‌ಆ್ಯಪ್‌ಗೆ ಮತ್ತೆ ಕೇಂದ್ರದ ಸೂಚನೆ..!

ಇದೇ ವೇಳೆ ವಿದ್ಯುತ್ ಕೂಡಾ ದುಬಾರಿಯಾಗಲಿದ್ದು ವಿದ್ಯುತ್ ಮೇಲಿನ ತೆರಿಗೆಯನ್ನು ಶೇ.6 ರಿಂದ ಶೇ.9 ರಷ್ಟು ಏರಿಕೆ ಮಾಡಲಾಗಿದೆ. ಇದರಿಂದಾಗಿ ಪ್ರತಿ ಯುನಿಟ್ ವಿದ್ಯುತ್ ದರ 20 ಪೈಸೆ ಏರಿಕೆಯಾಗಲಿದೆ. ಬಜೆಟ್ ನಲ್ಲಿ ಮದ್ಯ ಪ್ರಿಯರಿಗೂ ನಿರಾಶೆಯಾಗುವ ಅಂಶವಿದ್ದು, ದೇಶಿಯವಾಗಿ ಉತ್ಪಾದಿಸಲಾಗುವ ಮದ್ಯದ ಎಲ್ಲಾ 18 ಸ್ಲ್ಯಾಬ್ ಗಳ ಮೇಲಿನ ಅಬಕಾರಿ ಸುಂಕವನ್ನು ಶೇ.4 ರಷ್ಟು ಏರಿಕೆ ಮಾಡಲಾಗಿದೆ.

RELATED ARTICLES  ಮುಳ್ಳೇರಿಯಾ ಹವ್ಯಕ ಮಂಡಲ ಸಭೆ ಸಂಪನ್ನ.