ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಮಂಡಿಸಿರುವ ರಾಜ್ಯ ಬಜೇಟನಲ್ಲಿ ಶಿಕ್ಷಣ ಕ್ಷೇತ್ರದ ಬಗ್ಗೆ ನಿರ್ಲಕ್ಷ ತಾಳಲಾಗಿದೆ. ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಉತ್ತರ ಕನ್ನಡ ಜಿಲ್ಲಾ ಸಮಿತಿ ಆರೋಪಿಸಿದೆ.

ಕಳೆದ ಬಾರಿ 11.78% ರಷ್ಟು ಹಣ ಮೀಸಲಿಡಲಾಗಿತ್ತು. ಈ ಬಾರಿ 0.78% ರಷ್ಟು ಹಣವನ್ನು ಕಡಿತಗೊಳಿಸಿ ಕೇವಲ 11% ಮಾತ್ರ ಮೀಸಲಿರಿಸಿರುವುದು ಶಿಕ್ಷಣ ಕ್ಷೇತ್ರದ ಬಗ್ಗೆ ಸರಕಾರದ ಕಾಳಜಿ ಎಷ್ಟಿದೆ ಎಂಬುದನ್ನು ತೋರಿಸುತ್ತದೆ.

ಶಾಲಾ, ಕಾಲೇಜ್ ಕಟ್ಟಡ ದುರಸ್ಥಿಗಾಗಿ ಕೇವಲ 150 ಕೋಟಿ ಮೀಸಲಿಡಲಾಗಿದೆ. ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಶಾಲಾ – ಕಾಲೇಜುಗಳು ಶಿಥಿಲಾವಸ್ಥೆಯಲ್ಲಿವೇ. ಇವುಗಳನ್ನು ದುರಸ್ಥಿಗೊಳಿಸಲು ಹಣ ಯಾವುದಕ್ಕೂ ಸಾಕಾಗುವುದಿಲ್ಲ.

*ಶಾಲೆಗಳ ವಿಲೀನದ ಹೆಸರಲ್ಲಿ ಮುಚ್ಚುವಿಕೆ*

RELATED ARTICLES  ಶ್ರೀ ಮಹಾಸತಿ ಕ್ರೀಡಾಬಳಗ ಹರೀಟಾ ಇವರ ಆಶ್ರಯದಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ

ಕಡಿಮೆ ಹಾಜರಾತಿ ಇರುವ 28,847 ಸರಕಾರಿ ಶಾಲೆಗಳನ್ನು ವಿಲೀನದ ಹೆಸರಲ್ಲಿ ಸರಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ದಾಖಲಾತಿ ಹೆಚ್ಚಿಸುವ ಕುರಿತು ಯೋಜನೆ ಹಾಕುವ ಬದಲು ಮುಚ್ಚಲು ಮುಂದಾಗಿರುವುದು ನಾಡ ದ್ರೋಹದ ಕೆಲಸವಾಗಿದೆ. ಶಾಲೆ ವಿಲೀನದ ವಿರುದ್ದ SFI ರಾಜ್ಯವ್ಯಾಪಿ ಹೋರಾಟ ನಡೆಸಲಿದೆ.

*ಖಾಸಗೀಕರಣಕ್ಕೆ ದಾರಿ*
ಭದ್ರತಾ ಸಿಬ್ಬಂದಿಗೆ ತರಬೇತಿ ನೀಡುವುದಕ್ಕಾಗಿ ಶಿವಮೊಗ್ಗದಲ್ಲಿ “ತಾಯಿ ನಾಡು ಭದ್ರತಾ ವಿಶ್ವ ವಿಧ್ಯಾಲಯವನ್ನು ” ಖಾಸಗೀ ಸಹಭಾಗೀತ್ವದಲ್ಲಿ ತೆರೆಯುವ ಮೂಲಕ ರಾಜ್ಯದಲ್ಲಿ ಖಾಸಗೀ ವಿ.ವಿ.ಗಳನ್ನು ತೆರೆಯುವ ಕಾರ್ಪೊರೇಟ್ ಕಂಪನಿಗಳ ಪ್ರಸ್ಥಾಪಕ್ಕೆ ಜೀವ ತುಂಬಿರುವುದು ಅಪಾಯಕಾರಿ ಯೋಜನೆಯಾಗಿದೆ.

*ಉಚಿತ್ ಬಸ್ ಪಾಸ್ ನೀಡದೆ ವಂಚನೆ*
ಹಿಂದಿನ ಸರಕಾರ ರಾಜ್ಯ ಬಜೆಟ್ ನಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಿಸಿತ್ತು. ಅದನ್ನು ಈ ಬಜೇಟ್ ನಲ್ಲಿ ಹಣ ಮೀಸಲಿಡುವ ಮೂಲಕ ಜಾರಿ ಗೊಳಿಸುವುದಾಗಿ ಸರಕಾರ ಹೇಳಿತ್ತು.

RELATED ARTICLES  ನೆರೆ ಪರಿಹಾರ ಧನದಲ್ಲಿ ಶಾಸಕಿ ರೂಪಾಲಿ ನಾಯ್ಕ 25% ಕಮಿಶನ್ ದಂಧೆ : ಆನಂದ್ ಗಂಭೀರ ಆರೋಪ

ಆದರೆ ಉಚಿತ ಬಸ್ ಪಾಸ್ ನೀಡದೆ ವಿದ್ಯಾರ್ಥಿಗಳಿಗೆ ವಂಚಿಸಿರುವುದನ್ನು SFI ಉತ್ತರ ಕನ್ನಡ ಜಿಲ್ಲಾ ಸಮಿತಿಯು ಖಂಡಿಸುತ್ತದೆ.

ಒಟ್ಟಾರೆ ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷ ಮಾಡಿರುವ ರಾಜ್ಯ ಬಜೆಟ್ ವಿರುದ್ಧ ಹೋರಾಟಕ್ಕೆ ಸಜ್ಜಾಗಲು SFI ಉತ್ತರ ಕನ್ನಡ ಜಿಲ್ಲಾ ಸಮಿತಿಯು ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡುತ್ತದೆ ಎಂದು SFI ಜಿಲ್ಲಾ ಸಂಚಾಲಕರಾದ ಗಣೇಶ್ ರಾಠೋಡ ತಿಳಿಸಿದ್ದಾರೆ.

ವಂದನೆಗಳೊಂದಿಗೆ.

ಗಣೇಶ್ ರಾಠೋಡ
SFI ಜಿಲ್ಲಾ ಸಂಚಾಲಕರು
ಉತ್ತರ ಕನ್ನಡ