ಮೊದಲ ಹಂತದಲ್ಲಿ ರೈತರ ಸಣ್ಣಪುಟ್ಟ ಸಾಲ ಮನ್ನ ಮಾಡುತ್ತೇವೆ ಎಂದು ಹೇಳಿದ್ದಾರೆ, ಮಾಡುತ್ತಾರೋ ಇಲ್ವೋ ಗೊತ್ತಿಲ್ಲ, ಸಿಎಂ ಕುಮಾರಸ್ವಾಮಿ ರೈತರಿಗೆ ನಂಬಿಕೆ ದ್ರೋಹ ಮಾಡಿದ್ದಾರೆ…ಯಾವ ಸಣ್ಣ ಮತ್ತು ಅತಿ ಸಣ್ಣ ರೈತನೂ ಐವತ್ತು ಸಾವಿರ ರೂ. ಸಾಲ ಪಡೆದೇ ಇರುವುದಿಲ್ಲ. ಜತೆಗೆ ಈಗಾಗಲೇ ಸಹಕಾರ ಬ್ಯಾಂಕ್ ಗಳಲ್ಲಿನ ಐವತ್ತು ಸಾವಿರ ರೂ.ವರೆಗಿನ ರೈತರ ಸಾಲ ಮನ್ನಾ ಮಾಡಿ ಆಗಿದೆ..ಧರ್ಮಸ್ಥಳಕ್ಕೆ ಹೋಗಿ ರೈತರ ಖಾಸಗಿ ಸಾಲವನ್ನೂ ಮನ್ನಾ ಮಾಡೋದಾಗಿ ಹೇಳಿದ್ದರು. ಆದರೆ ಈಗ ಅದರ ಬಗ್ಗೆ ಚಕಾರವೆತ್ತುತ್ತಿಲ್ಲ. ಕುಮಾರಸ್ವಾಮಿಯವರ ದ್ವಂದ್ವ ನಿಲುವಿನ ಬಗ್ಗೆ ಶಾಸಕಾಂಗ ಸಭೆ ಕರೆದು, ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸುವುದಾಗಿ ಯಡಿಯೂರಪ್ಪ ಹೇಳಿದ್ದಾರೆ.ಇನ್ನೂ ಯಡಿಯೂರಪ್ಪ ಮಾತಿಗೆ ಸಿಎಂ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. ರೈತರ ಸಾಲಮನ್ನಾ ಸಭೆಗೆ ಯಡಿಯೂರಪ್ಪ ಬರದೇ ಮನೆಯಲ್ಲೇ ಕುಳಿತುಕೊಂಡಿದ್ದಾರೆ.

RELATED ARTICLES  ಕೊಂಕಣದಲ್ಲಿ 'ವಿಧಾತ್ರಿ ಅವಾರ್ಡ' ಸಂಭ್ರಮ.

ಮಂಗಳೂರಿನಲ್ಲಿ ಅತೀವೃಷ್ಟಿ ಆಗಿದೆ ಅಲ್ಲಿಗೆ ಹೋಗುತ್ತೇನೆ ಎಂದು ಸುಳ್ಳು ಹೇಳಿ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದಾರೆ. ರೈತರ ಬಗ್ಗೆ ಇದೇನಾ ಕಾಳಜಿ ಇವರಿಗೆ ಇರೋದು.. ನಮಗೆ ಉಚಿತ ಸಲಹೆ ಕೊಡಬೇಡಿ, ನಿಮ್ಮ ಅಭಿಪ್ರಾಯಗಳಿದ್ರೆ ಸಭೆಗೆ ಬಂದು ಹೇಳಬೇಕಿತ್ತು ಎಂದು ಕಿಡಿ ಕಾರಿದ್ದಾರೆ,. ಇನ್ನೂ ಚಿಲ್ಲರೆ ರಾಜಕಾರಣ ಮಾಡಬೇಡಿ ಜನರು ಎಲ್ಲವನ್ನು ಗಮನಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ…

ಸಣ್ಣ ಮತ್ತು ಅತಿ ಸಣ್ಣ ರೈತರ ಸಾಲ ಮನ್ನಾ ಘೋಷಿಸಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕ್ರಮಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಿಎಂ ಕುಮರಸ್ವಾಮಿ ರೈತರಿಗೆ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಬಿಎಸ್. ಯಡಿಯೂರಪ್ಪ ಕಿಡಿ ಕಾರಿದ್ದಾರೆ. ಒಟ್ಟು 53.000 ಕೋಟಿ ಸಾಲ ಮನ್ನಾ ಮಾಡಬೇಕು ಎಂದಿದ್ದರು.

RELATED ARTICLES  ಕುಮಟಾದ ಹೆರವಟ್ಟಾದಲ್ಲಿ ರಸ್ತೆಯಲ್ಲಿ ಹೊಂಡ: ಚರಂಡಿಯಿಂದ ಸಾರ್ವಜನಿಕರಿಗೆ ಕಾಡಿದೆ ಪ್ರಾಣ ಭಯ..?

ರೈತರ ಸಾಲ ಮನ್ನಾ ಮಾಡುವ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ 15 ದಿನಗಳ ಕಾಲಾವಕಾಶ ಕೋರಿದ್ದಾರೆ.. ಮೊದಲ ಹಂತದಲ್ಲಿ ರೈತರ ಬೆಳೆ ಸಾಲ ಮನ್ನಾ ಮಾಡುವ ಘೋಷಣೆ ಮಾಡಿದ್ದಾರೆ.. ಉಳಿದಂತೆ ರೈತರು ಪಡೆದಿರುವ ಕೃಷಿ ಸಂಬಂಧಿತ ಸಾಲ ಮನ್ನಾದ ಬಗ್ಗೆ ಎರಡನೇ ಸ್ಕೀಂ ನಲ್ಲಿ ಜಾರಿಗೆ ತರಲು ಚಿಂತನೆ ನಡೆಸಿದ್ದಾರೆ.. ರೈತ ಪ್ರತಿನಿಧಿಗಳ ಸಭೆಯಲ್ಲಿ ಕುಮಾರಸ್ವಾಮಿ ವಿಸ್ತೃತವಾಗಿ ಚರ್ಚಿಸಿದರು..