ಕುಮಟಾ: ಸೆಕೆಂಡರಿ ಹೈಸ್ಕೂಲ ಹಿರೇಗುತ್ತಿಯಲ್ಲಿ 2018-19ನೇ ಸಾಲಿನ ಶಾಲಾ ಸಂಸತ್ತು ಸದಸ್ಯರನ್ನು ನೈಜ ಚುನಾವಣಾ ಮಾದರಿಯಲ್ಲಿ ಅಯ್ಕೆ ಮಾಡಲಾಯಿತು.

ಮುಖ್ಯ ಚುನಾವಣಾಧಿಕಾರಿಗಳಾದ ಮುಖ್ಯ ಶಿಕ್ಷಕರಾದ ರೋಹಿದಾಸ. ಎಸ್. ಗಾಂವಕರ ಅಧಿಸೂಚನೆಯೊಂದಿಗೆ ಚುನಾವಣಾ ದಿನಾಂಕ ವೇಳಾಪಟ್ಟಿ ಪ್ರಕಟಿಸಲಾಯಿತು. ವಿದ್ಯಾರ್ಥಿಗಳು ಮುದ್ರಿತ ನಾಮಪತ್ರವನ್ನು ಸೂಚಕರ ಸಹಿಯೊಂದಿಗೆ ಚುನಾವಣಾಧಿಕಾರಿ ಶಿಕ್ಷಕ ಮಹಾದೇವ ಗೌಡರಿಗೆ ಸಲ್ಲಿಸಲಾಯಿತು. ನಂತರ ನಾಮಪತ್ರ ಪರಿಶೀಲಿಸಿ ನಾಮಪತ್ರ
ಹಿಂಪಡೆಯುವ ಪ್ರಕ್ರಿಯೆಗಳು ಜರುಗಿದವು.ನೈಜ ಚುನಾವಣೆಯಂತೆ ವಿದ್ಯಾರ್ಥಿಗಳಿಗೆ ಚಿಹ್ನೆಗಳ ಪಟ್ಟಿ ನೀಡಿ ಆಯ್ಕೆಗೆ ಅವಕಾಶ ಕಲ್ಪಿಸಲಾಗಿತ್ತು. ಮತ್ತು ವಿದ್ಯಾರ್ಥಿಗಳಿಗೆ ಪ್ರಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಂತರ ಚುನಾವಣೆ ನಡೆಸಲಾಯಿತು. ಮತಗಟ್ಟೆ ಅಧಿಕಾರಿ, ಪಿ.ಆರ್.ಓ, ಏ.ಪಿ.ಆರ್.ಓ. ಡಿ ದರ್ಜೆ ಸಹಾಯಕರು ಆರಕ್ಷಕರು ಎಲ್ಲಾ ಇಲ್ಲಿ ಕಂಡುಬಂತು.

RELATED ARTICLES  Where to travel asia Kind Mid Spirit

ಚಿಹ್ನೆ ಸಹಿತ ಇರುವ ಮುದ್ರಿತ ಮತಪತ್ರ. ಮತದಾರರ ಪಟ್ಟಿ, ವೋಟಿಂಗ್ ಕಂಪಾರ್ಟಮೆಂಟ್ ರಬ್ಬರ್ ಮೊಹರು ಅಳಿಸಿಹಾಕಲಾಗದ ಶಾಹಿ ಚುನಾವಣಾ ಸಾಮಗ್ರಿ ಪಡೆಯುವಿಕೆ ಹಿಂತಿರುಗಿಸುವಿಕೆ ಚುನಾವಣಾ ಏಜೆಂಟರ ನೇಮಕಾತಿ, ಹಾಜರಾತಿ ಕರ್ತವ್ಯದ ಪ್ರಮಾಣ ಪತ್ರ ಬಳಸಿ ಮತ ಚಲಾವಣೆ ಇವೆಲ್ಲ ಶಾಲೆಯ ಸಂಸತ್ತಿನ ಚುನಾವಣೆಯಲ್ಲಿ ಕಂಡುಬಂದಿತು. ನೈಜ ಚುನಾವಣೆಯಂತೆ ಮತ ಪತ್ರಗಳನ್ನು 25ರಂತೆ ಬಂಡಲ್ ಮಾಡಿ ಎಣಿಕೆ ಕಾರ್ಯ ನಡೆಯಿತು.

ವಿದ್ಯಾರ್ಥಿಗಳಲ್ಲಿ ಶಿಸ್ತು ಬದ್ಧ ಚುನಾವಣೆ ನಡೆಸಲು ಕಾರಣರಾದ ಶಿಕ್ಷಕರಾದ ಬಾಲಚಂದ್ರ ಹೆಗಡೆಕರ್, ವಿಶ್ವನಾಥ ಬೇವಿನಕಟ್ಟಿ,ಮಹಾದೇವ ಗೌಡ, ನಾಗರಾಜ ನಾಯಕ, ಇಂದಿರಾ ನಾಯಕ, ಶಿಲ್ಪಾ ನಾಯಕ, ಜಾನಕಿ ಗೊಂಡ, ಎನ್ ರಾಮು ಹಿರೇಗುತ್ತಿ, ಸೌಜನ್ಯ ಬಂಟ, ಕವಿತಾ ಅಂಬಿಗ ಮತ್ತು ಗೋಪಾಲಕೃಷ್ಣ ಗುನಗಾ ಸಹಕಾರದಿಂದ ಇಂತಹ ಮಾದರಿ ಚುನಾವಣೆ ನಡೆಸಲು ಸಾಧ್ಯವಾಯಿತು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ ಮಖ್ಯೋಧ್ಯಾಪಕ ರೋಹಿದಾಸ ಎಸ್ ಗಾಂವಕರ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.ಶಾಲಾ ಗಂಡು ಮಕ್ಕಳ ವಿದ್ಯಾರ್ಥಿ ಪ್ರತಿನಿಧಿಯಾಗಿ ವೆಂಕಟೇಶ ಪಟಗಾರ ಹೆಣ್ಣು ಮಕ್ಕಳ ಪ್ರತಿನಿಧಿಯಾಗಿ ಸಹನಾ ಗೌಡ ಆಯ್ಕೆಯಾದರು. ಕೊನೆಯಲ್ಲಿ ಎಲ್ಲ ವರ್ಗದ ಪ್ರತಿನಿಧಿಗಳನ್ನು ಆಯ್ಕೆಮಾಡಲಾಯಿತು. ಮಂತ್ರಿ ಮಂಡಲ ರಚನೆ ಮಾಡಿ ಆಯಾಯ ಖಾತೆಗಳ ಜವಾಬ್ದಾರಿ ಹಂಚಿಕೆ ಮಾಡಲಾಯಿತು.

RELATED ARTICLES  ಗುಂಡು ಹಾರಿಸಿ ಮಗನನ್ನೇ ಕೊಲ್ಲಲು ಯತ್ನಿಸಿದ ಅಪ್ಪ