ಕುಮಟಾ: ಸೆಕೆಂಡರಿ ಹೈಸ್ಕೂಲ ಹಿರೇಗುತ್ತಿಯಲ್ಲಿ “ಶ್ರೀ ಶ್ರೀನಿವಾಸನ್ ರಾಮಾನುಜನ್ ಗಣಿತ ಸಂಘ, ಸುಭಾಶ್ ಚಂದ್ರ ಭೋಸ್,ಇತಿಹಾಸ ಸಂಘದಿಂದ ಬ್ಯಾಂಕುಗಳ ಉಳಿತಾಯ ಯೋಜನೆಗಳು ಮತ್ತು ಪ್ರಮುಖ ಆರ್ಥಿಕ ಸೇವೆಗಳ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಶ್ರೀ ಶಿವಾನಂದ ನಾಯ್ಕ ನಿವೃತ್ತ ಅಧಿಕಾರಿ ಸಿಂಡಿಕೆಟ್ ಬ್ಯಾಂಕ್ ಅವರು ಉಪನ್ಯಾಸ ಮಾಡಿದರು. ಅವರು ಮಾತಾನಾಡುತ್ತ ಉಳಿತಾಯದ ಪ್ರಯೋಜನವೇನು? ಬ್ಯಾಂಕುಗಳಲ್ಲಿ ಉಳಿತಾಯ ಏಕೆ ಮಾಡಬೇಕು? ಬ್ಯಾಂಕಿಂಗ್ ಎಂದರೇನು? ಚಾಲ್ತಿಖಾತೆ ಎ.ಟಿ.ಎಮ್. ಮುಂತಾದ ವಿಷಯಗಳ ಕುರಿತು ವಿವರವಾದ ಮಾಹಿತಿ ನೀಡದರು. ಕಾರ್ಯಕ್ರಮದಲ್ಲಿ ಹೈಸ್ಕೂಲ್ ಮುಖ್ಯೋಧ್ಯಾಪಕರಾದ ರೋಹಿದಾಸ್.ಎಸ್.ಗಾಂವಕರ್ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ವಿದ್ರ್ಯಾಥಿ ಪ್ರತಿನಿಧಿ ವೆಂಕಟೇಶ ಪಟಗಾರ ಸ್ವಾಗತಿಸಿದರು. ವಿನಯಾ ಗೌಡ ವಂದಿಸಿದರು ಗಣಿತ ಮತ್ತು ಇತಿಹಾಸ ಸಂಘದ ಮಾರ್ಗದರ್ಶಿ ಶಿಕ್ಷಕರಾದ ಬಾಲಚಂದ್ರ ಹೆಗಡೆಕರ್ ಮತ್ತು ಜಾನಕಿ ಗೊಂಡ ಕಾರ್ಯಕ್ರಮ ಸಂಯೋಜನೆ ಮಾಡಿದರು.
-ವರದಿ: ಎನ್. ರಾಮು ಹಿರೇಗುತ್ತಿ