ಶಿರಸಿ: ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಹೇಳಿ ಕೇವಲ 2 ಲಕ್ಷಗಳ ವರೆಗಿನ ರೈತರ ಸಾಲ ಮನ್ನಾ ಮಾಡಿದ್ದು, ಇದು ರೈತ ಸಮುದಾಯಕ್ಕೆ ಮಾಡಿದ ದ್ರೋಹವಾಗಿದೆ. ಇದಕ್ಕಾಗಿ ಈ ಬಜೆಟ್‍ನಲ್ಲಿ ಮೀಸಲಿಟ್ಟ ಮೊತ್ತವು ಅತ್ಯಂತ ಕಡಿಮೆಯಾಗಿದ್ದು, ಇದರಿಂದ ಸಹಕಾರಿ ಸಂಘಗಳ ಆರ್ಥಿಕ ಬೆಳವಣಿಗೆಗೆ ಮಾರಕವಾಗಿದೆ. ಪೆಟ್ರೋಲ್ ಡೀಸೆಲ್‍ಗಳ ಮೇಲಿನ ತೆರಿಗೆಯನ್ನೂ ಹೆಚ್ಚಿಸಿದ್ದು, ಜನಸಾಮಾನ್ಯರಿಗೆ ಹೊರೆಯಾಗಿದೆ ಎಂದು ಶಾಸಕ ಕಾಗೇರಿ ಬೇಸರ ವ್ಯಕ್ತಪಡಿಸಿದರು.

RELATED ARTICLES  ನಾಮಪತ್ರ ಸಲ್ಲಿಸಿದ ವಿವಿಧ ಪಕ್ಷದ ಪ್ರಮುಖರು.

ಮಂಡಿಸಿದ ಬಜೆಟ್‍ನಲ್ಲಿ ಮಲೆನಾಡು, ಕರಾವಳಿ, ಉತ್ತರ ಕರ್ನಾಟಕ ಭಾಗಗಳಿಗೆ ಯಾವ ಯೋಜನೆಗಳನ್ನೂ ನೀಡದೆ ಕೇವಲ ಹಾಸನ, ರಾಮನಗರದ ತಮ್ಮ ಕ್ಷೇತ್ರಗಳಿಗೆ ಮೀಸಲಿಟ್ಟಿದ್ದಾರೆ, ರಾಜ್ಯದ ಎಲ್ಲಾ ಜನರು ತೆರಿಗೆದಾರರಾಗಿದ್ದರೂ ಸಹ ಕೇವಲ ತಮ್ಮ ಭಾಗಗಳಿಗೆ ಮಾತ್ರ ಯೋಜನೆಗಳನ್ನು ರೂಪಿಸಿ ರಾಜ್ಯದ ಎಲ್ಲಾ ಜನತೆಯನ್ನು ಸಮಾನವಾಗಿ ಕಾಣದಿರುವುದು ಗೋಚರವಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಗಂಭೀರ ಸಮಸ್ಯೆಗಳಾದ, ಆಸಾಮಿ ಖಾತೆಸಾಲ ಮನ್ನಾದ ಬಗ್ಗೆ ಆಯ ವ್ಯಯದಲ್ಲಿ ಪರಿಗಣಿಸದೇ ಇರುವುದು ಜಿಲ್ಲೆಗೆ ಮಾಡಿದ ಘೋರ ಅನ್ಯಾಯ. ಚುನಾವಣಾ ಸಮಯದಲ್ಲಿ ಕುಮಾರಸ್ವಾಮಿಯವರು ಜಿಲ್ಲೆಗೆ ಭೇಟಿಕೊಟ್ಟಾಗ ನೀಡಿದ ಭರವಸೆಗಳನ್ನು ಈ ಆಯವ್ಯಯದಲ್ಲಿ ಈಡೇರಿಸದಿರುವುದು ನಿರಾಶಾದಾಯಕವಾಗಿದೆ. ಜಿಲ್ಲೆಯ ಅಭಿವೃದ್ಧಿ ಸಹಕಾರಿಯಾಗದ ಬಜೆಟ್ ಇದಾಗಿದೆ ಎಂದೂ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಡಿಸಿದ ಬಜೆಟ್ ಅತ್ಯಂತ ನಿರಾಶಾದಾಯಕ ಮತ್ತು ತಾರತಮ್ಯದಿಂದಿ ಕೂಡಿದ ಬಜೆಟ್ ಆಗಿದೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ದತ್ತು ಯೋಜನೆಯ ಅಡಿಯಲ್ಲಿ ೧೦೧ ವಿದ್ಯಾರ್ಥಿಗಳು