ಉತ್ತರಪ್ರದೇಶ:ರಾಜ್ಯದಲ್ಲಿ ಹಸುಗಳ ರಕ್ಷಣೆಗೆ ಯೋಗಿ ಸರಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಉತ್ತರಪ್ರದೇಶದ ಹನ್ನೆರಡು ಜಿಲ್ಲೆಯ ಜೈಲುಗಳಲ್ಲಿ ಗೋಶಾಲೆಗಳನ್ನು ಸ್ಥಾಪಿಸಲು ಎರಡು ಕೋಟಿ ಅನುದಾನವನ್ನು ಮೀಸಲಿಟ್ಟಿದೆ.ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜೈಲು ಹೆಚ್ಚುವರಿ ನಿರ್ದೇಶಕ ಜನರಲ್ ಚಂದ್ರಪ್ರಕಾಶ್ ಅವರು, ಗೋಶಾಲೆಗಳನ್ನು ನಿರ್ಮಿಸುವ ಕಾರಾಗ್ರಹಗಳನ್ನು ಈಗಾಗಲೇ ಗುರುತಿಸಿದ್ದೇವೆ. ಅತೀ ಶೀಘ್ರದಲ್ಲಿ ಕೆಲಸವನ್ನು ಪ್ರಾರಂಭಿಸಲಾಗುವುದು ಮತ್ತು ಈ ನಿಟ್ಟಿನಲ್ಲಿ ಈಗಾಗಲೇ ಎರಡು ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.

RELATED ARTICLES  ಭಟ್ಕಳದಲ್ಲಿ ಆಂಬುಲೆನ್ಸ್ ಮತ್ತು ಆಟೋ ರಿಕ್ಷಾ ನಡುವೆ ಅಪಘಾತ

ಉತ್ತರ ಪ್ರದೇಶ ಸರ್ಕಾರದ ಆದೇಶದ ಪ್ರಕಾರ ಮೀರತ್, ಗೋರಖ್ಪುರ, ಕನ್ನೌಜ್, ಸುಲ್ತಾನ್ಪುರ್, ಕಾನ್ಪುರ್, ಬಲ್ರಾಂಪುರ್, ಗೌತಮ್ ಬುದ್ ನಗರ, ದೆಹತ್, ಫಿರೋಜಾಬಾದ್, ಆಗ್ರಾ, ಬರಾಬಂಕಿ, ಸಿಟಾಪುರ್ ಮತ್ತು ರಾಯ್ಬರೆಲಿ 12 ಜಿಲ್ಲೆಯ ಕಾರಾಗೃಹಗಳನ್ನು ಆಯ್ಕೆ ಮಾಡಲಾಗಿದೆ .ಈ ಸಂಬಂಧ ಪ್ರತಿಕ್ರಿಯಿಸಿದ ಸಚಿವ ಜೈಕುಮಾರ್ ಸಿಂಗ್ ಅವರು ಜೈಲುಗಳಲ್ಲಿ ಗೋಶಾಲೆ ನಿರ್ಮಿಸುವುದರಿಂದ ಕೈದಿಗಳಿಗೆ ಮತ್ತು ಜನರಿಗೆ ಹಾಲು ಲಭಿಸುವುದು ಜೊತೆಗೆ ಸಾವಯವ ತರಕಾರಿಗಳನ್ನು ಸಹ ಉತ್ಪಾದಿಸಲಾಗುವುದು ಇದು ಜೈಲಿನಲ್ಲಿ ಉತ್ತಮ ಪರಿಸರವನ್ನು ನಿರ್ಮಾಣ ಮಾಡುತ್ತದೆ ಎಂದು ಹೇಳಿದ್ದಾರೆ .

RELATED ARTICLES  ಸುಪ್ರೀಂಕೋರ್ಟ್‌ನ ಆದೇಶದಂತೆ ಹಿಂಬಡ್ತಿ ನೀಡುವ ಪ್ರಕ್ರಿಯೆ ತಕ್ಷಣದಿಂದ ಆರಂಭ.!

ಮಾಹಿತಿ :ಸುದ್ದಿ 24/7