ಗೋಕರ್ಣ: ಪ ಪೂ ಶ್ರೀ ಶ್ರೀ ಸಿದ್ಧಾರೂಢ ಸ್ವಾಮೀಜಿ , ಸಿದ್ಧಾರೂಢಮಠ, ಜಮಖಂಡಿ , ಬಾಗಲಕೋಟ ಇವರು ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” 544ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

RELATED ARTICLES  ಸಿದ್ದಾಪುರದ ಯೋಧ ಸಂದೀಪ ನಾಯ್ಕ ಸಾವು.

ಶ್ರೀ ದೇವಾಲಯದ ಪರವಾಗಿ ಶ್ರೀ ಕರಿಕಾನ ಪರಮೇಶ್ವರಿ ದೇವಸ್ಥಾನ ಹೊನ್ನಾವರ ಇದರ ಮುಖ್ಯ ಅರ್ಚಕರಾದ ವೇ ಮೂ ಸುಬ್ರಹ್ಮಣ್ಯ ಭಟ್ ಇವರು ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು . ವೇ ಗಣೇಶ ಭಟ್ ಜಂಭೆ ಪೂಜಾ ಕೈಂಕರ್ಯ ನೆರವೇರಿಸಿದರು .

RELATED ARTICLES  ವಿಡಂಬಾರಿಯವರ ಅಂಚೆಪೇದೆಯ ಆತ್ಮಕತೆ ಪುಸ್ತಕ ಬಿಡುಗಡೆ