ಕುಮಟಾ :ಇತ್ತೀಚಿಗೆ ಕುಮಟಾ ಪುರಸಭೆ ಅಧ್ಯಕ್ಷರಾದ ಶ್ರೀ ಮಧುಸೂದನ ಶೇಟ್ ರವರು, ಶ್ರೀ ರಮೇಶ ಜಾರಕಿಹೊಳಿ, ಮಾನ್ಯ ಪೌರಾಡಳಿತ ಸಚಿವರು, ಕರ್ನಾಟಕ ಸರ್ಕಾರ ರವರನ್ನು ಬೆಳಗಾವಿಯಲ್ಲಿ ಭೇಟಿ ಮಾಡಿ ಕುಮಟಾ ಪಟ್ಟಣದ ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿಗೆ 10 ಕೋಟಿ ವಿಶೇಷ ಅನುದಾನ ನೀಡುವಂತೆ ವಿನಂತಿ ಸಲ್ಲಿಸಿದರು.

RELATED ARTICLES  ಬಾಲಕಿಯ ಮೇಲೆ ಬೀದಿ ನಾಯಿಯಿಂದ ದಾಳಿ.

ಇದೇ ಸಂದರ್ಭದಲ್ಲಿ ಕುಮಟಾ – ಹೊನ್ನಾವರ ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ದೀವಳ್ಳಿ ಘಟಕಕ್ಕೆ ವಿದ್ಯುತ್ ವ್ಯತ್ಯಯ ಉಂಟಾದಾಗ ನೆರವಿಗೆ ಬರುವ ಜನರೇಟರ್ ಒಂದನ್ನು ಮಂಜೂರು ಮಾಡಲು ಮನವಿ ಪತ್ರವನ್ನು ಸಲ್ಲಿಸಿದರು.

RELATED ARTICLES  ಉ.ಕ ದಲ್ಲಿ ಅಭಯಾಕ್ಷರಕ್ಕೆ 10 ರಿಂದ 11 ಲಕ್ಷ ಸಹಿ ಸಂಗ್ರಹಿಸುವ ಗುರಿ : ಸುಬ್ರಾಯ ಭಟ್ಟ

ಮಾನ್ಯ ಸಚಿವರು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿರುತ್ತಾರೆ. ಅವರಿಗೆ ಪುರಸಭೆ ಅಧ್ಯಕ್ಷರು ಕುಮಟಾ ಕೌನ್ಸಿಲ್ ಪರವಾಗಿ ಧನ್ಯವಾದ ಸಲ್ಲಿಸಿರುತ್ತಾರೆ.