ಕುಮಟಾ : ಕುಮಟಾ – ಹೊನ್ನಾವರ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ದಿನಕರ ಶೆಟ್ಟಿಯವರಿಗೆ ಕುಮಟಾ ತಾಲೂಕಿನ ಅಂತ್ರವಳ್ಳಿಯಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಅಂತ್ರವಳ್ಳಿಯ ಶ್ರೀ ವಿಶ್ವೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ದೀಪ ಬೆಳಗಿಸುವುದರ ಮೂಲಕ ಚಾಲನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಉತ್ತರ ಕನ್ನಡ ಇತಿಹಾಸದಲ್ಲೇ ಇಷ್ಟು ಮತ ಹಾಕಿ ಗೆಲ್ಲಿಸಿದ್ದು ನನ್ನನ್ನು ಮಾತ್ರ. ನನಗೆ ಬಹಳ ದೊಡ್ಡ ಜವಾಬ್ಧಾರಿ ಇದೆ. ಮೊದಿಜಿ ದೇಶವನ್ನು ಜಗತ್ತಿನ ಮಟ್ಟಕ್ಕೆ ದೊಡ್ಡದಾಗಿ ಪರಿಚಯಿಸಿದರು. ನೀವು ಇಟ್ಟಿರುವ ವಿಶ್ವಾಸಕ್ಕೆ ನಾನು ದ್ರೋಹ ಮಾಡುವುದಿಲ್ಲ. ಬಿಜೆಪಿ ಹಿಂದುತ್ವ ಪರ ಕೆಲಸ ಮಾಡುತ್ತದೆ. ಅದ್ದರಿಂದ ನಾನೂ ಸಹ ಹಿಂದುತ್ವದ ಪರವಾಗಿಯೇ ಕೆಲಸ ಮಾಡುತ್ತೇನೆ. ಹೊನ್ನಾವರಕ್ಕೆ ಶರಾವತಿ ನದಿಯಿಂದ ಕುಡಿಯುವ ನೀರನ್ನು ಪೂರೈಸುವ ಬಗ್ಗೆ ಮತ್ತು ಕುಮಟಾ ತಾಲೂಕಿನಲ್ಲಿ 11 ಪಂಚಾಯತ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ವಿಧಾನ ಸೌಧದಲ್ಲಿ ಪ್ರಸ್ತಾಪಿಸುತ್ತೇನೆ ಎಂದರು.

RELATED ARTICLES  ಇಹಲೋಕ ತ್ಯಜಿಸಿದ ಡಾ. ಎಂ.ಪಿ ಕರ್ಕಿ

ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯ ಗಜಾನನ ಪೈ, ಗ್ರಾ.ಪಂ ಸದಸ್ಯ ಹೇಮಂತ ಗಂವ್ಕಾರ, ಪುರಸಭಾ ಸದಸ್ಯ ಪ್ರಶಾಂತ ನಾಯ್ಕ, ಕೃಷ್ಣ ಗೌಡ,‌ ಮಹಾದೇವ ಗೌಡ, ತಾ.ಪಂ ಸದಸ್ಯೆ ಅನಸೂಯಾ ಅಂಬಿಗ, ಊರಿನ ನಾಗರೀಕರಾದ ನಾರಾಯಣ ಜೋಷಿ, ಜಿ.ಎಸ್ ಭಟ್ ಗಂವಕಾರ, ಜಿ.ಆರ್ ಹೆಗಡೆ, ನಾರಾಯಣ ಭಟ್, ಸುಬ್ರಹ್ಮಣ್ಯ ಭಟ್, ಮುಂತಾದವರು ಉಪಸ್ಥಿತರಿದ್ದರು.

RELATED ARTICLES  ಜನ ಸಂಪರ್ಕ ಸಭೆ : ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

ಇದೇ ಸಂದರ್ಭದಲ್ಲಿ ಊರಿನ ಸಮಸ್ಯೆ ಮತ್ತು ದೇವಸ್ಥಾನದ ಅಭಿವೃದ್ಧಿಗಾಗಿ ಮನವಿ ಸಲ್ಲಿಸಲಾಯಿತು.