ಬರಹ : ಶಿಶಿರ ಹೆಗಡೆ

ಸ್ವರ್ಗ ಎಂದರೆ ಹೇಗಿರಬಹುದು ಎಂಬ ಕಲ್ಪನೆಯೂ ನಮಗಿಲ್ಲದಿರುವಾಗ ಗೋವುಗಳಿಗಾಗಿಯೇ ಸ್ವರ್ಗವನ್ನು ಧರೆಗಿಳಿಸಿದ್ದಾರೆ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರು. ಸತ್ತಮೇಲಿನ ಸ್ವರ್ಗದ ಮಾತು ಹಾಗಿರಲಿ, ಗೋವುಗಳಿಗೆ ಬದುಕಿರುವಾಗಲೇ ಸ್ವರ್ಗ ಸದೃಶ ವಾತಾವರಣ ಲಭ್ಯವಾಗಿದೆ. ಸ್ವರ್ಗದ ಸೊಬಗನ್ನು ಆಸ್ವಾದಿಸುವ ಸುವರ್ಣಾವಕಾಶ ಮನುಜರಿಗೆ ಬಂದೊದಗಿದೆ.

?ಇಲ್ಲಿ ಗೋವುಗಳಿಗಿಲ್ಲ ಬಂಧನದ ಭೀತಿ ,
ಕಟ್ಟಿಹಾಕುವ ವ್ಯವಸ್ಥೆಯೇ ಇಲ್ಲ!
ಸ್ವಚ್ಛಂದ ವಿಹಾರ – ವಿರಾಮ;
?ನೆರಳು – ಬಿಸಿಲು – ಮರದ ಆಶ್ರಯ ಇವು ಗೋವುಗಳ ಆಯ್ಕೆ ;
?ಖಾಲಿಯೇ ಆಗದಂತೆ ನಿರಂತರ ಪರಿಶುದ್ಧ ನೀರು ಲಭ್ಯತೆ ಶಿಲಾಪಾತ್ರದಲ್ಲಿ ;
?ಬೇಕೆನಿಸಿದಾಗ ಬೇಕೆನಿಸಿದಷ್ಟು ಬೇಕಾದ ಆಹಾರ ಇಲ್ಲಿ ಗೋವುಗಳ ಹಕ್ಕು ;
?ಮಧ್ಯಭಾಗದಲ್ಲೊಂದು ಗೋತೀರ್ಥ ಎಂಬ ಪುಷ್ಕರಿಣಿ, ಅದರ ಕೇಂದ್ರ~ಗೋಸ್ವರ್ಗದ ಕೇಂದ್ರಬಿಂದು ಸಪ್ತಸನ್ನಿಧಿ ಎಂಬ ಏಳು ದೇವತೆಗಳ ಸಾನಿಧ್ಯ;
?ಗೋಪದ ಎಂಬ ನಾಲ್ಕು ದಿಕ್ಕಿನಲ್ಲಿ ನಾಲ್ಕು ವೇದಿಕೆಗಳು ಗೋವುಗಳ ಶ್ರವಣ,ದೃಶ್ಯ ಸುಖಕ್ಕಾಗಿ
?ವಯಸ್ಸಾದ,ಅಶಕ್ತ ಗೋವುಗಳಿಗಾಗಿಯೇ *ಗುರುಕರುಣೆಯ ಫಲವಾದ ‘ಕರುಣಾವರಣ’! ;
?ದಕ್ಷಿಣ ಭಾರತದಲ್ಲೇ ದುರ್ಲಭ ಎಂಬತಹ *ಶಸ್ತ್ರಚಿಕಿತ್ಸಾ ಘಟಕ ಸಹಿತ ಅತ್ಯಾಧುನಿಕ ಗೋ-ಆಸ್ಪತ್ರೆ* ;
? ಗೋಪಾಲನೆಯ ಇತಿಹಾಸದಲ್ಲೇ‌ ಎಲ್ಲೂ ಇಲ್ಲದ ಗೋವುಗಳ ಸುಖ ಪ್ರಸವಕ್ಕಾಗಿ ‘ಪ್ರಸವ ಶಾಲೆ’;
?ಯಾವ ಉದ್ಯಮಕ್ಕೂ‌ ಕಡಿಮೆ ಇಲ್ಲದಂತ ಗವ್ಯೋತ್ಪನ್ನ ತಯಾರಿಕೆಯ ‘ಗೋಫಲ’ ಎಂಬ ಉದ್ಯಮ ~ ಗೋವು ಲಕ್ಷ್ಮೀ ಎಂಬುದನ್ನು ನಿರೂಪಿಸಲು;
?‌ಎದ್ದುನಿಲ್ಲಲಿದೆ ಅಂತರಾಷ್ಟ್ರೀಯ ಮಟ್ಟದ ಗೋ-ಸಂಶೋಧನಾಲಯ;
? ಇನ್ನೂ ಹತ್ತು ಹಲವು ಪ್ರಥಮಗಳು ಭಾರತದ‌ ಶ್ರೇಷ್ಠ ಗೋಧಾಮವಾದ ಗೋಸ್ವರ್ಗ ದಲ್ಲಿ!

RELATED ARTICLES  ಕಳ್ಳತನವಾದ ಸ್ಮಾರ್ಟ್ ಫೋನಿನಿಂದ ದಾಖಲೆಗಳನ್ನು ಅಳಿಸುವುದು ಹೇಗೆ?

ಇಷ್ಟೆಲ್ಲ ವಿಶೇಷಾತಿವಿಶೇಷಗಳು ನಮ್ಮ ಕಾಲಮಾನದಲ್ಲಿ ನಿರ್ಮಿತವಾಗುತ್ತಿರುವುದು ನಮ್ಮ ಸುಯೋಗವಲ್ಲದೇ ಮತ್ತೇನು??

ಇದಕ್ಕೆಲ್ಲ ಕಲಶಪ್ರಾಯವಾಗಿ ಪೂಜ್ಯ *ಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರು ತಮ್ಮ ೨೫ನೇ ಚಾತುರ್ಮಾಸ್ಯವನ್ನೂ ಗೋಸ್ವರ್ಗದಲ್ಲೇ ಆಚರಿಸಿ* ಅನುಗ್ರಹಿಸಲಿದ್ದಾರೆ.

ನಮ್ಮ ಜೀವಿತಾವಧಿಯ ಅದ್ಭುತ ದಿವ್ಯತೆಯ ಈ ಮಹಾಕಾರ್ಯಕ್ಕೆ ನಾವೂ ಕೈಜೋಡಿಸಿದರೆ ನಮ್ಮ ಜೀವನವೂ ಧನ್ಯ!

RELATED ARTICLES  ಈ ದೇವರಿಗೆ ಕುಡಗೋಲು ಅರ್ಪಿಸುತ್ತಾರೆ ಭಕ್ತರು!

ಸಾಮಾನ್ಯರಲ್ಲಿ ಸಾಮಾನ್ಯರೂ ಪಾಲ್ಗೊಳ್ಳಬಹುದಾದ ಸೇವಾ ಸಮರ್ಪಣೆಗಳಿವೆ:

೧. ಏಕಪದ‌- ಒಬ್ಬ ವ್ಯಕ್ತಿ ದಿನಕ್ಕೆ ಒಂದು ರೂಪಾಯಿಯಂತೆ ವರ್ಷಪೂರ್ತಿ ಸಮರ್ಪಿಸಿದರೆ ಗೋಸ್ವರ್ಗ ದ ಒಂದು ಚದರ ಅಡಿಯ ಸೇವೆ ಅವರ ಹೆಸರಲ್ಲಿ!

೨. ಸಾವಿರದ_ಸುರಭಿ: ಗೋಸ್ವರ್ಗದಲ್ಲಿ ವಾಸಿಸುವ ಸಾವಿರ ಗೋವುಗಳಿಗೂ ನಿಮ್ಮ ಕಿಂಚಿತ್ತಾದರೂ ಸೇವೆ ಸಲ್ಲಬೇಕು ಎಂತಾದಲ್ಲಿ ಒಂದು_ಸಾವಿರ ರೂಪಾಯಿಗಳನ್ನು ಸಮರ್ಪಿಸಿ ಸಾವಿರದ ಸುರಭಿ ಸೇವಕರಾಗಬಹುದು..

ವಿಶ್ವದ ಅದ್ಭುತವೊಂದರ ನಿರ್ಮಾಣದಲ್ಲಿ ನಮ್ಮ ಕಿಂಚಿತ್ ಸೇವೆಯೂ ಇರಲಿ,ಬನ್ನಿ ಸೇವೆಗೈದು ಕೃತಾರ್ಥರಾಗೋಣ.

ಗೋಸ್ವರ್ಗಕ್ಕೆ ಬಂದ ಪ್ರತಿಯೊಬ್ಬರೂ ಒಂದು ಗಿಡ ನೆಡುವ ಸಂಪ್ರದಾಯ ಏರ್ಪಟ್ಟಿದ್ದು, ಬಂದವರೆಲ್ಲರ ಶಾಶ್ವತ ಗುರುತು ಗೋಸ್ವರ್ಗದಲ್ಲಿ ರಾರಾಜಿಸಲಿದೆ!

ಬನ್ನಿ, ಗೋಸ್ವರ್ಗ ನಿಮ್ಮನ್ನು ಆತ್ಮೀಯವಾಗಿ ಆಮಂತ್ರಿಸುತ್ತಿದೆ, ಗೋವುಗಳು ಉತ್ಕೃಷ್ಟ ವಾತಾವರಣದಲ್ಲಿ ಆನಂದಿಸುತ್ತಿರುವುದನ್ನ ನೋಡಬನ್ನಿ