ಬರ್ಗಿ ಗೇಸ್ ದುರಂತ – ಲಾರಿ ಚಾಲಕನ ಅಜಾಗುರೂಕತೆಯಿಂದ ಬ್ರಹತ್ ಗ್ಯಾಸ್ ಟ್ಯಾಂಕರ್ ಲಿಕೇಜ್ ನಿಂದಾಗಿ – ಅಮಾಯಕರ ಸಾವು, ದಿವಗಿ ಗುಡ್ಡ ಕುಸಿತ – ಐಆರ್ಬಿ ಕಳಪೆ ಕಾಮಗಾರಿಯಿಂದಾಗಿ – ಅಮಾಯಕರ ಸಾವು, ಪಾಂಡುರಂಗ ಹೋಟೆಲ್ ಬಳಿ ಅಪಘಾತ -ಲಾರಿ ಚಾಲಕನ ಅಜಗುರೂಕತೆಯಿಂದ ಕ್ರೇನ್ ನಂತಹ ವಸ್ತು ಬಸ್ಸಿಗೆ ಬಡಿದು ಬಸ್ ಸಹಿತ – ಅಮಾಯಕರ ಸಾವು
ಈ ಎಲ್ಲಾ ದುರಂತ ಕೇಳಿದಾಗಲೇ ಮೈ ಜುಮ್ ಎನ್ನುತ್ತೆ ಅದರಲ್ಲೂ ನಿನ್ನೆ ನಡೆದ ಘಟನೆ ಎಲ್ಲರಿಗೂ ಭಯ ಮೂಡಿಸಿದೆ ಯಾರೋ ಮಾಡಿದ ತಪ್ಪಿಗೆ ಅಮಾಯಕರು ಬಲಿಯಾಗುತಿದ್ದಾರೆ. ನಮ್ಮ ಕನ್ನಡದ ಸುದ್ದಿ ಮಾದ್ಯಮ ಇವತ್ತಿನ ಸುದ್ಧಿ ಬಿತ್ತರಿಸಿಲ್ಲ ಬಂದಿರೋ ಒಂದೊ ಎರಡೊ ಚಾನಲ್ಲ್ಲಿ ರಾಜ್ಯವೆ ತಲ್ಲಣಿಸಬೇಕಾದ ಈ ಸುದ್ದಿ ಹಾಗೇ ಬಂದು ಹೋಗಿದೆ ಯಾಕಂದ್ರೆ ಹೋಗಿರೊದು ಅಮಾಯಕರು, ಸಾಮಾನ್ಯರ ಪ್ರಾಣ.
ಆಗಿರೋದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ಅನ್ನೊ ಸಣ್ಣ ಪಟ್ಟಣವೊಂದರಲ್ಲಿ. ಹಾಗಾಗಿ ಲೆಕ್ಕಕ್ಕೆ ತೆಗೆದು ಕೊಂಡಿಲ್ಲ ಅನಿಸುತ್ತೆ ನಮ್ಮಂತಹ ಸಾಮಾನ್ಯರಲ್ಲಿ ಇತ್ತೀಚೆಗೆ ಕೇವಲ ಸುದ್ದಿ ಬಿತ್ತರಿಸಬೇಕಾದ ಕನ್ನಡದ ೧೫ – ೨೦ ಸುದ್ದಿ ಮಾದ್ಯಮಗಳು ವಾರ್ತೆ ಹೇಳುವ ಬದಲು ಮನೆಯ ಜಗಲಿ ಕಟ್ಟೆ ನಿರ್ಮಿಸಿದ್ದಾರೆ ಕನ್ನಡದ ನಟ ನಟಿಯರು ಹಾಕಿರುವ ಟ್ವಿಟ್ಟರ್ ವಿಶ್ಲೇಶಣೆ ಇಂತಹ ಅನೇಕ ಕಾರಣಗಳಿಗೆ ಬೆಳಿಗ್ಗೆಯಿಂದ ಸಂಜೆಯ ವರೆಗೆ ಹರಟೆ ಹೋಡೆದು ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ ಅನ್ನೋದು ಜನ ಸಾಮಾನ್ಯರ ಅಭಿಪ್ರಾಯ. ಈ ಸುದ್ದಿ ಮಾದ್ಯಮ ಇಂತಹ ಭೀಕರ ಘಟನೆಯ ಬಗ್ಗೆ ವಿಶ್ಲೇಶಣೆ ಮಾಡದೇ ಅಮಾಯಕರಿಗೆ ನ್ಯಾಯ ಒದಗಿಸುವಲ್ಲಿ ಮಾದ್ಯಮ ಮಿತ್ರರು ಎಡವಿದ್ದಾರೆ ಅನ್ನಿಸುತ್ತೆ.
ನಿನ್ನೆ ನಡೆದ ಭಯಂಕರ ಅಪಘಾತದಲ್ಲಿ ಯಾರಿಗೆ ಪೆಟ್ಟಾಗಿದೆ ಏನಾಗಿದೆ ಎಂದು ತಿಳಿಯಲು ನಿನ್ನೆ ಸಂಜೆ ಎಲ್ಲಾ ನಮ್ಮ ಕನ್ನಡದ ಸುದ್ದಿ ಚಾನಲ್ ತಿರುವಿದರೂ ಏನೂ ಸರಿಯಾಗಿ ಮಾಹಿತಿ ಸಿಗದೇ ಬೆಳಗಿನ ವರೆಗೆ ಕಾಯಬೇಕಾಯಿತು. ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತುರುವ ಪೋಸ್ಟ ನೋಡಿ ಅಲ್ಪ ಸ್ವಲ್ಪ ಅನೇಕರಿಗೆ ಗೊತ್ತಾಗಿದೆ. ಈ ದುರಂತಕ್ಕೆ ಕಾರಣರಾದವರನ್ನು ಕ್ಷಮಿಸದೆ ನಿರ್ದಾಕ್ಷಿಣ್ಯ ಕ್ರಮ ಕಾನೂನು ಪ್ರಕಾರ ತೆಗೆದು ಕೋಳ್ಳಬೇಕಾಗಿ ಈ ಮೂಲಕ ವಿನಂತಿಸುತಿದ್ದೇನೆ.
ವಸಂತ ನಾಯ್ಕ- ಬಾಡ