ಶಿರಸಿ: ಯುವಾ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನ ಹಾಗೂ ಬೆಂಗಳೂರಿನ ಸ್ವಚ್ಛತಾ ಬ್ರಿಗೇಡ್ ತಂಡ ಶಿರಸಿ ಸಿದ್ದಾಪುರ ಹೆದ್ದಾರಿಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ (ನಾಲ್ಕನೆ ಹಂತ) ನಡೆಯಿತು.
ಈಗಾಗಲೇ ಸ್ವಚ್ಛಗೊಳಿಸಿದ ಜಾಗದಲ್ಲೇ ಬಾಳೆಕಾಯಿ ಮಂಡಿಯ ತ್ಯಾಜ್ಯವನ್ನು ಎಸೆದಿದ್ದು ನೋಡಿ ನಮಗೆಲ್ಲ ನೋವುಂಟುಮಾಡಿತು. ಎರಡು ಟಿಪ್ಪರ್ ಲೋಡ್ ಗಳಷ್ಟಿದ್ದ ಅದನ್ನು ಕಷ್ಟಪಟ್ಟು ಸ್ವಚ್ಛಗೊಳಿಸಿ ಟಿಪ್ಪರಿಗೆ ಲೋಡ್ ಮಾಡಲಾಯಿತು. ನಂತರ ಅಬ್ರಿಮನೆ ರಸ್ತೆಯಲ್ಲಿ ಎಸೆಯಲಾದ ನೂರಕ್ಕೂ ಅಧಿಕ ಮಧ್ಯದ ಬಾಟಲಿಗಳನ್ನು ತೆಗೆದು ಸುಮಾರು ಒಂದು ಲೋಡ್ ಟಿಪ್ಪರಿನಷ್ಟು ತ್ಯಾಜ್ಯವನ್ನು ವಿಲೇವಾರಿ ಮಾಡಲಾಯಿತು, ಒಟ್ಟೂ ಮೂರು ಟಿಪ್ಪರ್ ಲೋಡ್ ತ್ಯಾಜ್ಯವನ್ನು ತೆಗೆಯಲಾಯಿತು. ಯುವತಿಯರು ಯುವಕರಿಗೆ ಪೈಪೋಟಿ ನೀಡುತ್ತ ಕ್ಷಿಪ್ರಗತಿಯಲ್ಲಿ ಸ್ವಚ್ಛತಾ ಕಾರ್ಯ ಮಾಡಿದರು
MHRD ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸ್ವಚ್ಛಭಾರತ್ ಇಂಟರ್ನಶಿಪ್ ತೆಗೆದುಕೊಂಡಿರುವ ಬೆಂಗಳೂರಿನ ಸಾಯಿ ವಿದ್ಯಾ ತಾಂತ್ರಿಕ ಮಹಾವಿದ್ಯಾಲಯದ ಸ್ವಚ್ಛತಾ ಬ್ರಿಗೇಡ್ ತಂಡದ ಯುವಕ ಯುವತಿಯರು ಶಿರಸಿ ತಾಲೂಕಿನ ದೇವನಳ್ಳಿಯನ್ನು ಜಾಗೃತಿಗೊಳಿಸಿ ಅಭಿವೃದ್ಧಿ ಪಡಿಸುವ ಸಂಕಲ್ಪ ಹೊತ್ತು ಹನ್ನೆರಡು ದಿನಗಳ ಕಾಲ ಇಲ್ಲೇ ವಸತಿ ಮಾಡಲಿದ್ದು, ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಲಿದ್ದಾರೆ.