ಕುಮಟಾ: ಕರ್ನಾಟಕ ರಾಜ್ಯ ಒಂದು ಸಾಂಸ್ಕೃತಿಕ ತವರು. ಇದು ಭಾರತದ ಇತಿಹಾಸದಲ್ಲಿ ತನ್ನದೇ ಆದ ಕೊಡುಗೆಯನ್ನು ದೇಶಕ್ಕೆ ನೀಡಿದ ಹಿರಿಮೆ ಈ ರಾಜ್ಯಕ್ಕಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಕನ್ನಡ ನಾಡಿನ ಚರಿತ್ರೆಯನ್ನು ನೀವು ಕೇಳಿರುತ್ತಿರಿ. ಇತಿಹಾಸದ ಪುಟವನ್ನು ನಾವು ತಿರುವಿದಾಗ ಅನೇಕ ರಾಜರು ಸಾಮಂತರು ಕರ್ನಾಟಕವನ್ನು ಆಳಿರುವುದನ್ನು ನೀವು ಓದಿರುತ್ತಿರಿ.

ಅವರ ಆಳ್ವಿಕೆಯ ಕಾಲದಲ್ಲಿ ರಾಜ್ಯ ಹಾಗಿತ್ತು ಹೀಗಿತ್ತು ಎನ್ನೋ ವಿಷಯಗಳು ನಮ್ಮ ಕಿವಿಯಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಇದನ್ನು ನೋಡಲು ನಮಗೆ ಸಾಧ್ಯವಿಲ್ಲವಲ್ಲ ಎಂಬ ಕೊರಗು ನಮ್ಮಲ್ಲೂ ಆಗಾಗ ಮೂಡುವುದು ಸಹಜ. ಅಲ್ಲದೇ ಅವರ ರಾಜ್ಯ, ಕೋಟೆ ಹೇಗಿರಬಹುದು ಎಂಬ ಕೂತುಹಲಕ್ಕೆ ಕೋಟೆ ಕೊತ್ತಲುಗಳು, ಹಳೆಯ ಶಾಸನಗಳು, ನಾಣ್ಯಗಳು ಗ್ರಂಥಗಳು ಹೀಗೆ ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದೆ ಸಿಗುತ್ತವೆ.

ಆದರೆ ನಮ್ಮಲ್ಲಿ ಕೋಟೆಗಳೇನೋ ಸಾಕಷ್ಟಿವೆ ಆದರೆ ಅವುಗಳನ್ನು ನೋಡಬೇಕು ಅದರ ಸೌಂದರ್ಯವನ್ನು ಆಸ್ವಾಹಿಸಬೇಕು ಎಂದರೆ ಅಂತಹ ಕೋಟೆಗಳ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಅದರಲ್ಲೂ ಕೆಲವು ಕೋಟೆಗಳು ಅಳಿವಿನ ಅಂಚಿನಲ್ಲಿದ್ದರೆ ಇನ್ನು ಕೆಲವು ಕೋಟೆಗಳು ಮಾತ್ರ ಇಂದಿಗೂ ತನ್ನ ಜೀವಂತಿಕೆಯನ್ನು ಉಳಿಸಿಕೊಂಡು ಗತ ವೈಭವದ ವೈಭೋಗವನ್ನು ಸಾರುತ್ತಿದೆ. ಅಂತಹ ಕೋಟೆಗಳಲ್ಲಿ ಮಿರ್ಜಾನ್ ಕೋಟೆಯು ಒಂದು.

ಐತಿಹಾಸಿಕ ಕೋಟೆಯೆ ಮಿರ್ಜಾನ ಊರಿನ ಹಿರಿಮೆ ಹೆಚ್ಚಿಸಿದೆ ಅಳುವಿನಂಚಿನಲ್ಲಿದ್ದ ಮಿರ್ಜಾನ ಕೋಟೆಗೆ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ಮೂಲ ರೂಪಕ್ಕೆ ಧಕ್ಕೆ ಯಾಗದ ರೀತಿಯಲ್ಲಿ ಪುನರ್‌ ನಿರ್ಮಾಣ ಕೈಗೊಂಡಿದ್ದು, ಕೋಟೆ ಮರು ಸೃಷ್ಟಿಯಾಗಿ ಸುಂದರವಾಗಿ ಕಂಗೊಳಿಸಿದೆ. ಹತ್ತಾರು ಚಲನಚಿತ್ರಗಳನ್ನು ನಿರ್ಮಿಸಿದ್ದ ಪರಿಣಾಮ ಪ್ರಚಾರ ಇನ್ನಷ್ಟು ವ್ಯಾಪಿಸಿ ರಾಜ್ಯದ ವಿವಿಧೆಡೆಗಳಿಂದ ಕೋಟೆಯ ವಿಕ್ಷಣೆಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ.

RELATED ARTICLES  ನವರಾತ್ರಿ ವಿಶೇಷ ಶ್ರೀಕಾಂಚಿಕಾ ಪರಮೇಶ್ವರಿ ದೇವಾಲಯದ ರಥಬೀದಿಯಲ್ಲಿ 'ಸಪ್ತ ಯಕ್ಷ ಸೌರಭ ಕಾರ್ಯಕ್ರಮ'.

ಮಿರ್ಜಾನ ರಾಷ್ಟ್ರೀಯ ಹೆದ್ದಾರಿ 66 ರಿಂದ 1.5 ಕಿಮಿ ಅಂತರವಿರುವ ರಸ್ತೆ ಸ್ಥಿತಿ ಚಿಂತಾಜನಕವಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ತಗಲಿರುವ ಈ ರಸ್ತೆ ತುಂಬಾ ಕಂದಕಗಳ ಸಾಮ್ರಾಜ್ಯವಾಗಿ ಮಾರ್ಪಟ್ಟಿದೆ ವಾಹನ ಸಾಗಿಸುವ ಮದ್ಯೆ ಟೈಯರ್‌ ಪಂಚರ ಆಗುವ ಭಿತಿ ಒಂದೆಡೆಯಾದರೆ ಸವಾರರು ಸ್ಕಿಡ್‌ ಆಗಿ ಬೀಳುವ ಅಪಾಯವೇ ಹೆಚ್ಚಾಗಿದೆ. ಅಲ್ಲದೇ ಕೋಟೆಯ ರಸ್ತೆಗೆ ಹೊಂಡಗಳು ಬೀಳಲು ಕಳಪೆ ಕಾಮಗಾರಿ ಪ್ರಮುಖ ಕಾರಣವಾದರೆ ರಸ್ತೆಯ ಅಕ್ಕ ಪಕ್ಕ ಕಾಲುವೆ ನಿರ್ಮಿಸದಿರುವುದರಿಂದ ಮಳೆಯ ನೀರು ರಸ್ತೆಯಲ್ಲ ಸಂಗ್ರಹವಾಗಿ ಹೊಂಡಗಳ ಹೆಚ್ಚಳಕ್ಕೆ ಕಾರಣವಾಗಿದೆ.

ಇಲ್ಲಿನ ರಸ್ತೆಯ ನಿರ್ಮಾಣಕ್ಕೆ ಸರಕಾರದಿಂದ ಲಕ್ಷಾಂತರ ರೂಪಾಯಿ ಈ ಹಿಂದಿನಿಂದಲೂ ಹಣ ಮಂಜೂರಾಗಿದೆ. ರಸ್ತೆ ನಿರ್ಮಾಣದ ವೇಳೆ ಸಮಾನ ಪ್ರಮಾಣದಲ್ಲಿ ಜೆಲ್ಲಿ ಡಾಂಬರ್‌ ಬಳಕೆಯಾಗದ ಹಿನ್ನಲೆಯಲ್ಲಿ ಆರೆಳು ತಿಂಗಲಲ್ಲಿ ರಸ್ತೆ ಬಾಯಿ ತೆರೆದು ನಿಂತಿದೆ. ರಸ್ತೆಗೆ ಹಾಕಿದ ಜೆಲ್ಲಿ ಡಾಂಬರ್‌ ಕಿತ್ತು ಬಂದು ಹೊಂಡಮಯ ವಾಗಿದೆ. ತದನಂತರ ಹೊಂಡಬಿದ್ದ ರಸ್ತೆ ದುರಸ್ಥಿಗೊಳಿಸಲು ಪ್ಯಾಚ್‌ ವರ್ಕಗೆ ಹಣ ಮಂಜೂರಾಗಿದೆ. ಪ್ಯಾಚ್‌ ವರ್ಕ ಆಗಿದ 6 ತಿಂಗಳಲ್ಲಿ ಮರು ಡಾಂಬರಿಕರಣಕ್ಕೆ ಮತಷ್ಟು ಹಣ ಮಂಜೂರಾಗಿದೆ. ಇನ್ನೆನು ರಸ್ತೆ ನಿರ್ಮಾಣವಾಗುತ್ತದೆ ಎನ್ನುವಷ್ಟರಲ್ಲಿ ದುರದೃಷ್ಟವಶಾತ್‌ ಅಲ್ಲಿಂದ ಕಾಮಗಾರಿ ಬದಲಾವಣೆಯಾಗಿ ರಸ್ತೆ ಬೇರೆಡೆ ಬದಲಾಯಿಸಿತು. ಇದರಿಂದ ಊರಿನ ಜನ ನಿರಾಶೆಪಡುವಂತಾಯಿತು.

RELATED ARTICLES  ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 157 ಕರೋನಾ ಪಾಸಿಟಿವ್

ಬಹುಜನರ ಬೇಡಿಕೆಗೆ ಸ್ಪಂದಿಸಿದ ಅಂದಿನ ಶಾಸಕಿ ಶಾರದಾ ಮೋಹನ ಶೆಟ್ಟಿ ಅವರು ಮಿರ್ಜಾನ ಕೋಟೆಗೆ ಸುಸಜಿತ್‌ ಸಿಮೆಂಟ್‌ ರಸ್ತೆ ನಿರ್ಮಾಣಕ್ಕೆ ಒಂದು ಕೋಟಿ ರೂ ಅನುದಾನ ಮಂಜೂರು ಮಾಡಿಸಿದರು. ಕಳೆದ ವಿಧಾನ ಸಭಾ ಚುನಾವಣೆಗೆ 2 ತಿಂಗಳಿರುವಾಗ ರಸ್ತೆ ನಿರ್ಮಾಣಕ್ಕೆ ನಾಮ ಫಲಕ ಅನಾವರಣಗೊಳಿಸಿ ವಿಧ್ಯುಕ್ತವಾಗಿ ಚಾಲಣೆ ನೀಡಿದರು ತದನಂತರ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ರಸ್ತೆಯ ನಿರ್ಮಾಣ ಕಾರ್ಯ ಅಷ್ಟಕ್ಕೆ ಸ್ಥಗಿತ ಗೊಂಡಿತು. ರಸ್ತೆ ದುರಸ್ಥಿ ಭಾಗ್ಯ ದೊರೆಯದೆ ನಿತ್ಯ ಓಡಾಡುವ ಪ್ರವಾಸಿಗರು ನರಕ ಯಾತನೆ ಅನುಭವವಾಗುತ್ತದೆ. ಈಗ ನೂತನ ಶಾಸಕ ದಿನಕರ ಶೆಟ್ಟರು ರಸ್ತೆಯ ನಿರ್ಮಾಣಕ್ಕೆ ಭರವಸೆ ನೀಡಿದ್ದಾರೆ. ಅದು ಯಾವತ್ತು ಕಾರ್ಯ ರೂಪಕ್ಕೆ ಬರುತ್ತದೆ ಎಂಬುದನ್ನು ಜನ ಜಾತಕ ಪಕ್ಷಿಯಂತೆ ಕಾಯುತ್ತಾ ಕುಳಿತ್ತಿದ್ದಾರೆ. ಆದಷ್ಟು ಬೇಗನೆ ರಸ್ತೆ ನಿರ್ಮಾಣ ಆಗಲೆಂಬುದು ಜನರ ಆಶಯವಾಗಿದೆ.