ಹೊನ್ನಾವರ : ಕೇಂದ್ರದ ಮೋದಿ ಸರಕಾರದ ಅಧೀನದಲ್ಲಿರುವ ಸಿ.ಬಿ.ಐ.ಗೆ ಪರೇಶ ಮೇಸ್ತನ ಸಾವಿನ ತನಿಖೆಯ ಜವಾಬ್ದಾರಿ ನೀಡಿದ್ದಲ್ಲಿ ಕೇವಲ 7 ದಿನಗಳಲ್ಲಿ ನ್ಯಾಯ ಕೊಡಿಸುವುದಾಗಿ ಮುಗ್ಧ ಜನರಿಗೆ ಪ್ರಚೋದನೆ ನೀಡಿದ್ದ ಬಿ.ಜೆ.ಪಿ. ಮುಖಂಡರುಗಳು 7ತಿಂಗಳಾದರೂ ತನಿಖೆಯ ಬಗ್ಗೆ ಸೊಲ್ಲೇತ್ತದಿರುವುದನ್ನು ಖಂಡಿಸಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಮೊದಲ ಹಂತದಲ್ಲಿ ಹೋರಾಟ ಹಮ್ಮಿಕೊಂಡು ಇಂದು ಹೊನ್ನಾವರದಲ್ಲಿ ಪ್ರತಿಭಟನೆ ನಡೆಸಿದರು.
ಅಮಾಯಕ ಬಡ ಕುಟುಂಬದ ಪರೇಶ ಮೇಸ್ತನ ನಿಗೂಢ ಸಾವಿನ ಕುರಿತು ನ್ಯಾಯಕ್ಕಾಗಿ ಎಲ್ಲರೂ ಕೂಡಿ. ಹೋರಾಡ ಬೇಕಾಗಿದೆ. ಮಾಜಿ ಶಾಸಕಿ ಶಾರದಾ ಶೆಟ್ಟಿ, ಸಚಿವ ಆರ್.ವಿ.ದೇಶಪಾಂಡೆ ಮತ್ತು ಸಾರ್ವಜನಿಕರ ಬತ್ತಾಯದ ಮೇರೆಗೆ ಹಿಂದಿನ ಸಿದ್ದರಾಮಯ್ಯ ಸರಕಾರ ತನಿಖೆಯ ಜವಾದ್ದಾರಿಯನ್ನು ಸಿ.ಬಿ.ಐ.ಗೆ ನೀಡಿದೆ. ಆದರೆ ಕೇಂದ್ರ ಸರಕಾರ ಮತ್ತು ನಮ್ಮ ಜಿಲ್ಲೆಯವರೇ ಆದ ಸಚಿವ ಅನಂತಕುಮಾರ ಹೆಗಡೆ ಶ್ರೀಘ್ರ ತನಿಖೆಗೆ ಒತ್ತಾಯಿಸದೇ ಮುಂದಿನ ಲೋಕಸಭಾ ಚುನಾವಣೆಯವರೆಗೂ ಸಾವಿನ ನಿಗೂಢತೆಯನ್ನು ಜೀವಂತವಾಗಿಟ್ಟು ಕಳೆದ ವಿಧಾನಸಭಾ ಚುನಾವಣೆಯಂತೆ ರಾಜಕೀಯ ಲಾಭ ಪಡೆದುಕೊಳ್ಳಲು ಹವಣಿಸುತ್ತಿದ್ದಾರೆ. ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ಆಪಾದಿಸಿದ್ದಾರೆ.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಬರುವ ಮುಂಜಾನೆ 10ಗಂಟೆಗೆ ಪಟ್ಟಣ ಪಂಚಾಯತ ಆವರಣದಲ್ಲಿರುವ ಮಹಾತ್ಮಾ ಗಾಂಧಿಯವರ ಪುತ್ಧಳಿಕೆಗೆ ಮಾಲಾರ್ಪಣೆ ಮಾಡಿ ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಂಡು ಶ್ರೀಘ್ರ ತನಿಖೆಗೆ ಒತ್ತಾಯಿಸಿದರು.
15 ದಿನಗಳೂಳಗಾಗಿ ತನಿಖೆಯ ಬಗ್ಗೆ ಸೂಕ್ತ ಮಾಹಿತಿಯನ್ನು ಸಂಬಂದಿತ ಅಧಿಕಾರಿಗಳು ನೀಡದಿದ್ದಲ್ಲಿ ಎರಡನೇ ಹಂತವಾಗಿ “ಹೊನ್ನಾವರ ಬಂದ್” ಆಚರಿಸಿ ಸರಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು .ಅದಕ್ಕೂ ಮಣಿಯದಿದ್ದಲ್ಲಿ “ಕಾರವಾರ ಚಲೋ” ಹಮ್ಮಿ ಕೊಂಡು ನ್ಯಾಯ ಸಿಗುವವರೆಗೂ ನಿರಂತರ ಹೋರಾಟ ನಡೆಸಲಾಗುವುದು ಎಂದು ತೆಂಗೇರಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರವಿಕುಮಾರ ಶೆಟ್ಟಿ, ವಿ.ಎಲ್ ನಾಯ್ಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ತಾರಾ ಗೌಡ, ಹೊನ್ನಾವರ ಪಟ್ಟಣ ಪಂಚಾಯತ ಅಧ್ಯಕ್ಷ ರಾಜಶ್ರೀ ನಾಯ್ಕ, ಕಾಂಗ್ರೆಸ್ ಕಾರ್ಮಿಕ ಸಂಘಟನೆಯ ಆಗ್ನೇಲ್ ಡಯಾಸ್, ನಗರ ಘಟಕದ ಅಧ್ಯಕ್ಷ ಕೇಶವ ಮೇಸ್ತ ,ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮನಾಥ ನಾಯ್ಕ ,ಕರ್ಕಿ ಮುಂತಾದವರು ಉಪಸ್ಥಿತರಿದ್ದರು.