ಕುಮಟಾ: ಅನೇಕ ನಿರುದ್ಯೋಗಿ ಯುವಕರು ಸೂಕ್ತ ಉದ್ಯೋಗ ದೊರೆಯದೇ ಜೀವನ ನಿರ್ವಹಣೆಗಾಗಿ ಸಾಲ ಮಾಡಿ ಆಟೋ ಓಡಿಸುವ ವೃತ್ತಿಯನ್ನು ಆಯ್ದುಕೊಳ್ಳುತ್ತಾರೆ. ಆದರೆ, ಸರಕಾರ ಸಾಲ ಮಾಡಿ ಆಟೋ ಖರೀದಿಸುವ ಬಡ ಆಟೋ ಚಾಲಕರ ಹೊಟ್ಟೆ ಮೇಲೆ ಹೊಡೆಯಲು ರಾಜ್ಯ ಸರ್ಕಾರ ಹೊಸ ಹೊಸ ನಿಯಮಗಳನ್ನು ರೂಪಿಸಿ ತೊಂದರೆ ನೀಡುತ್ತಿದ್ದಾರೆ ಎಂದು ಜಿಲ್ಲಾ ಆಟೋ ಚಾಲಕರ ಯೂನಿಯನ್‌ ಅಧ್ಯಕ್ಷ ಆರ್‌.ಜಿ ನಾಯ್ಕ ಕಿಡಿ ಕಾರಿದರು.

ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು ಈ ಬಾರಿ 3 ಸಾವಿರ ರೂ. ಇದ್ದ ವಿಮಾ ಕಂತನ್ನು 9 ಸಾವಿರಕ್ಕೆ ಹೆಚ್ಚಿಸಿದೆ. ಈಗಾಗಲೇ ಬಾಡಿಗೆಯಿಲ್ಲದೆ ಜೀವನ ನಿರ್ವಹಣೆಯೇ ಕಷ್ಟದಾಯಕವಾಗಿರುವಾಗ ರಾಜ್ಯ ಸರಕಾರ ವಿಮಾ ಕಂತನ್ನು ಅಧಿಕ ಮಾಡಿರುವುದರಿಂದ ಆಟೋ ಚಾಲಕರ ಗಾಯದ ಮೇಲೆ ಬರೆ ಎಳೆಯುವಂತೆ ಮಾಡುವುದು ಸರಿಯಲ್ಲ. ಅಲ್ಲದೆ ಪ್ರವಾಸಿಗರಿಗೆ ಬೈಕ್‌ ಬಾಡಿಗೆಗೆ ನೀಡಲು ಅವಕಾಶ ಕಲ್ಪಿಸಿದೆ. ಪಟ್ಟಣದಿಂದ 7 ಕಿಮೀ ಆಚೆಗೆ ಬಾಡಿಗೆಗೆ ಹೋಗದಂತೆ ಸೂಚಿಸಿದೆ. ಆಟೋ ನಿಲ್ಲಿಸಲು ಸ್ಥಳಾವಕಾಶದ ಕೊರತೆಯಿದ್ದರೂ ಬೇಕಾಬಿಟ್ಟಿ ಪರ್ಮಿಟ್‌ ನೀಡಲಾಗುತ್ತಿದೆ. ಇದರಿಂದ ಉದ್ಭವಿಸಿದ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಅನೇಕ ಬಾರಿ ಗಮನಕ್ಕೆ ತಂದರೂ ಇನ್ನುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ಶಾಸಕ ದಿನಕರ ಶೆಟ್ಟಿ ಅವರು ಹಲ ವರ್ಷಗಳ ಹಿಂದೆ ಆಟೋ ಯೂನಿಯನ್‌ನ ಅಧ್ಯಕ್ಷರಾಗಿದ್ದರು. ಅಲ್ಲದೇ ಅವರಿಗೆ ಆಟೋ ಚಾಲಕರ ಸಮಸ್ಯೆಯನ್ನು ಚೆನ್ನಾಗಿ ಅರಿತವರಾಗಿದ್ದರೂ ಅವರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸುವ ಗೋಜಿಗೆ ಹೋಗಿಲ್ಲ. ಹಾಗಾಗಿ ಜಿಲ್ಲೆಯ ನಿಯೋಗವು ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರನ್ನು ಈ ತಿಂಗಳ ಕೊನೆಯಲ್ಲಿ ಭೇಟಿ ಮಾಡಲಿದ್ದೇವೆ ಆಟೋ ಚಾಲಕರ ವಿರುದ್ಧ ರಾಜ್ಯ ಸರಕಾರ ನೂತನ ನಿಯಮಗಳನ್ನು ರೂಪಿಸಿ, ತೊಂದರೆ ನೀಡುವ ಮೂಲಕ ಬಡ ಆಟೋ ಚಾಲಕರ ಹೊಟ್ಟೆಯ ಮೇಲೆ ಹೊಡೆಯುವ ಕಾರ್ಯ ಮಾಡುವುದಲ್ಲದೇ ಗಾಯದ ಮೇಲೆ ಬರೆ ಎಳೆಯುವಂತೆ ಮಾಡಿದೆ ಎಂದು ಜಿಲ್ಲಾ ಆಟೋ ಚಾಲಕರ ಯೂನಿಯನ್‌ ಅಧ್ಯಕ್ಷ ಆರ್‌.ಜಿ ನಾಯ್ಕ ಆರೋಪಿಸಿದರು.

RELATED ARTICLES  ದಿನಾಂಕ 20 ರಂದು ಕುಮಟಾದಲ್ಲಿ ಕೊಂಕಣಿ ಮಾನ್ಯತಾ ದಿವಸ ಆಚರಣೆ

ಈ ಸಂದರ್ಭದಲ್ಲಿ ಯೂನಿಯನ್‌ನ ಪ್ರಮುಖರಾದ ವೆಂಕಟೇಶ ನಾಯ್ಕ, ಶಿವರಾಜ ಮೇಸ್ತಾ, ವಿವಿಧ ತಾಲೂಕುಗಳಿಂದ ಆಗಮಿಸಿದ ಯೂನಿಯನ್‌ನ ಸದಸ್ಯರು ಹಾಗೂ ಕುಮಟಾ ಪಟ್ಟಣದ ಆಟೋ ಚಾಲಕರು ಉಪಸ್ಥಿತರಿದ್ದರು.

RELATED ARTICLES  ಹೊನ್ನಾವರದ ಕರ್ಕಿಯಲ್ಲಿ ಮನೆಗೆ ಕನ್ನ ಹಾಕಿದ ಚೋರರೀಗ ಪೋಲೀಸರ ಅತಿಥಿ!