ಅಂಕೋಲಾ: ತಾಲೂಕಿನ ಬೆಳಸೆ ಗ್ರಾಮ ಪಂಚಾಯತ ವ್ಯಾಪ್ತಿಯ ಶಿರೂರಿನ ಶ್ರೀ ಬೀರ ದೇವಸ್ಥಾನದ ಹತ್ತಿರ ಪಶು ಸಂಗೋಪನೆ ಇಲಾಖೆ, ಜಿ.ಪಂ., ತಾ.ಪಂ., ಗ್ರಾ.ಪಂ. ಆಶ್ರಯದಲ್ಲಿ ಹಮ್ಮಿಕೊಂಡ ದೇಶೀಯ ತಳಿಗಳ ಜಾನುವಾರು ಪ್ರದರ್ಶನ ಮತ್ತು ಚಿಕಿತ್ಸಾ ಶಿಬಿರ ಸಂಪನ್ನವಾಯಿತು.ತಾಲೂಕು ಪಂಚಾಯತ ಅಧ್ಯಕ್ಷೆ ಸುಜಾತಾ ಗಾಂವಕರ ಕಾರ್ಯಕ್ರಮ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ದೇಶೀ ತಳಿಯ ಜಾನುವಾರುಗಳನ್ನು ಉಳಿಸಿ ಬೆಳೆಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ದೇಶೀಯ ತಳಿಯ ಗೋ ಮೂತ್ರದಿಂದ ವಿವಿಧ ಉತ್ಪನ್ನಗಳನ್ನು ಸಿದ್ಧಪಡಿಸಲು ಉತ್ತಮ ಅವಕಾಶಗಳಿದ್ದು, ಸದ್ಬಳಕೆ ಮಾಡಿಕೊಳ್ಳಬೇಕಾದ ಅಗತ್ಯತೆಯಿದೆ ಎಂದು ಹೇಳಿದರು.

RELATED ARTICLES  ಎಲ್ಲರ ಮನಗೆದ್ದ ಕೃಷ್ಣ ಗೌಡರ ಪೆನ್ಸಿಲ್ ಆರ್ಟ

ತಾಲೂಕು ಪಂಚಾಯತ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಡಿ. ನಾಯ್ಕ ಮಾತನಾಡಿ, ಕೃಷಿಯೊಂದಿಗೆ ಹೈನುಗಾರಿಕೆಯನ್ನು ಉದ್ಯೋಗವನ್ನಾಗಿಸಿಕೊಳ್ಳುವ ಮೂಲಕ ಉತ್ತಮ ಆದಾಯವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು. ತಾಲೂಕು ಪಂಚಾಯತ ಸದಸ್ಯ ಬೀರಾ ಗೌಡ, ಶಾಸಕ ಆಪ್ತ ಕಾರ್ಯದರ್ಶಿ ಗಣಪತಿ ಗುನಗಾ ಮಾತನಾಡಿದರು. ಪಶುವೈದ್ಯ ಡಾ. ವಾಸು ಗೌಡ, ಗ್ರಾಮ ಪಂಚಾಯತ ಸದಸ್ಯರಾದ ರಮೇಶ ಗೌಡ, ಅಶೋಕ ಗೌಡ ಉಪಸ್ಥಿತರಿದ್ದರು. ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಕೃಷ್ಣಮೂರ್ತಿ ಹೆಗಡೆ ಸ್ವಾಗತಿಸಿದರು. ಉದಯ ಗೌಡ ನಿರೂಪಿಸಿದರು.

RELATED ARTICLES  ಕ್ರೀಡೆಗಳು ಮಾನವನ ದೈಹಿಕ & ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. : ತೊರ್ಕೆ