ಕಾರವಾರ:ಸಾವಿನಲ್ಲೂ ನೋವು ಕಾಣೋದು ಅಂದರೆ ಇದೇ ಎನಿಸುತ್ತದೆ. ಹೌದು ಶವ ಸಾಗಿಸಲೂ ಸರಿಯಾದ ಸೇತುವೆಯಿಲ್ಲದೇ ಹಳ್ಳದಿಂದ ಶವ ಸಾಗಿಸಿದ ಘಟನೆ ನಡೆದಿದೆ. ಸೇತುವೆ ಕುಸಿದ ಪರಿಣಾಮ ವೃದ್ಧೆಯೊಬ್ಬ ಶವ ಸಂಸ್ಕಾರಕ್ಕಾಗಿ ಹಳ್ಳದಿಂದ ಜನರು ಶವ ಎತ್ತಿಕೊಂಡು ಸಾಗಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿಯಲ್ಲಿ ಸಂಭವಿಸಿದೆ.

ಕೇಣಿಯ ಸುಶೀಲ (೮೦) ಮೃತಪಟ್ಟ ವೃದ್ಧೆ. ಕಳೆದ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದ್ದರಿಂದ ಅಂಕೋಲಾ ತಾಲೂಕಿನ ಕೇಣಿ ಬಳಿಯ ರುಧ್ರಭೂಮಿಗೆ ಸಂಪರ್ಕ ಕಲ್ಪಿಸಿದ್ಧ ಸೇತುವೆ ಕುಸಿದು ಬಿದ್ದಿದೆ.ಇದರಿಂದ ಸ್ಮಶಾನಕ್ಕೆ ಸಂಪರ್ಕ ಕಡಿತಗೊಂಡಿತ್ತು. ಗುರುವಾರ ಮೃತಪಟ್ಟಿದ್ದ ವೃದ್ಧೆಯ ಶವವವನ್ನು ಸಾಗಿಸಲಾಗದೆ ಸ್ಥಳೀಯರು ತೀವ್ರ ತೊಂದರೆ ಅನುಭವಿಸುವಂತಾಗಿತ್ತು.

RELATED ARTICLES  ಹೆಸರಾಂತ ಹವ್ಯಾಸಿ ರಂಗಭೂಮಿ ಕಲಾವಿದ ವಿ.ಜಿ. ಭಟ್ಟ ನಿಧನ

ಮೊದಲು ದೋಣಿ ತಂದು ಶವದಾಟಿಸುವ ಬಗ್ಗೆ ಚರ್ಚಿಸಲಾಗಿತ್ತಾದರು ಅದು ಸಾಧ್ಯವಾಗಿರಲಿಲ್ಲ. ಬಳಿಕ ಸ್ಥಳೀಯರೇ ನೀರಿ‌ಗಿಳಿದು ಎದೆಯೆತ್ತರಕ್ಕೆ ಹರಿಯುತ್ತಿರುವ ಹಳ್ಳದಲ್ಲಿ ಮೃತದೇಹವನ್ನುಹೊತ್ತುಕೊಂಡು ಸಾಗಿಸಿದ್ದಾರೆ. ಬಳಿಕ ರುಧ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಿಸ ಸ್ಥಳೀಯರು ಮತ್ತೆ ಅದೇ ರಿತಿ ನೀರಿನಲ್ಲಿ ದಾಟಿದ್ದಾರೆ.

RELATED ARTICLES  ದೀವಗಿ ಹಳ್ಳದಲ್ಲಿ ಮೃತದೇಹ ಪತ್ತೆ.

ಸೇತುವೆಯನ್ನು ವರ್ಷದ ಹಿಂದೆ ಕಟ್ಟಿದ್ದರು ಕೂಡ ಕುಸಿದು ಬಿದ್ದಿದ್ದು ಕಳಪೆ ಕಾಮಗಾರಿಯ ಆರೋಪ ಕೇಳಿ ಬಂದಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಂತಹ ಪರಿಸ್ಥಿತಿ ಮತ್ತೊಮ್ಮೆ ಬಾರದಿರಲಿ. ಸೂಕ್ತ ವ್ಯವಸ್ಥೆಗೆ ಅಧಿಕಾರಿಗಳು ಮುಂದಾಗಲಿ ಎಂಬುದೇ ನಮ್ಮ ಆಶಯ.