ಹೊನ್ನಾವರ : ಪ್ರತಿಯೊಂದು ಶಾಲೆಯಲ್ಲಿಯೂ ಸ್ಕೌಟ್ಸ್ ಮತ್ತು ಗೈಡ್ಸ್ ದಳವನ್ನು ಖಡ್ಡಾಯವಾಗಿ ಆರಂಭಿಸಿ ಮಕ್ಕಳಲ್ಲಿ ಶಿಸ್ತು, ಸಂಯಮ, ಸಹಾನುಭೂತಿ, ತಾಳ್ಮೆ ಹಾಗೂ ಭಾೃತೃತ್ವ ಭಾವನೆ ಮೂಡಿಸಬೇಕೆಂದು ಮಾನ್ಯಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿ ಇವರು ಕರೆ ನೀಡಿದರು.ಅವರು ಎಸ್.ಡಿ.ಎಮ್. ಕಾಲೇಜಿನ ಸಭಾಭವನದಲ್ಲಿ ಜರುಗಿದ ಹೊನ್ನಾವರ.ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮತನಾಡಿದರು.

RELATED ARTICLES  ಯಶಸ್ವಿಯಾಗಿ ಸಂಪನ್ನವಾಯ್ತು ಕುಮಟಾ ವೈಭವ.

ಸಭೆಯ ಅಧ್ಯಕ್ಷತೆಯನ್ನು ಕೃಷ್ಣಮೂರ್ತಿ ಭಟ್, ಶಿವಾನಿ ಇವರು ವಹಿಸಿದ್ದರು.ಉದ್ಘಾಟಕರಾಗಿ ಆಗಮಿಸಿ, . ನಾಗೇಶ ಆರ್.ಶಿವಪುರಿ ಇವರು ವಿಜಾಪುರಜಿಲ್ಲೆಗೆ ವರ್ಗಾವಣೆಯಾದಕಾರಣಆತ್ಮೀಯವಾಗಿ ಸನ್ಮಾನಿಸಲಾಯಿತು. ಜನಾರ್ಧನ ನಾಯ್ಕ, ತಾಲೂಕಾ ಕಾರ್ಯದರ್ಶಿ ಎಲ್ಲರನ್ನೂ ಸ್ವಾಗತಿಸಿ 2017-18 ರ ಸ್ಕೌಟ್ಸ್ ಮತ್ತುಗೈಡ್ಸ್‍ಕಾರ್ಯ ಚಟುವಟಿಕೆಗಳನ್ನು ಸ್ಫುಟವಾಗಿತೆರೆದಿಟ್ಟು ಪಾರದರ್ಶಕವಾಗಿ ವಾರ್ಷಿಕಆಯ-ವ್ಯಯವನ್ನು ಮಂಡಿಸಿದರು.

RELATED ARTICLES  ಮದ್ಯ ಸಾಗಾಟ : ನಾಡದೋಣಿ ಹಾಗೂ ಮದ್ಯ ವಶಕ್ಕೆ

ವೇದಿಕೆಯಲ್ಲಿ ಜಿ.ಜಿ. ಸಭಾಹಿತ, ಜಿಲ್ಲಾ ಸ್ಕೌಟ್ಸ್‍ಆಯುಕ್ತರು, ಎಸ್.ಎನ್. ಗೌಡ, ದೈ.ಶಿ.ಪರಿವೀಕ್ಷಕರು, ಬಿ.ಡಿ. ಫರ್ನಾಂಡೀಸ್, ರಾಜು ಹೆಬ್ಬಾರ ಹಾಜರಿದ್ದರು. ಬಿ.ಎಂ.ಭಟ್ಟರುಕಾರ್ಯಕ್ರಮ ನಿರೂಪಿಸಿದರು. ಪ್ರಸನ್ನ ಶೇಟ್‍ಎಲ್ಲರನ್ನೂ ಅಭಿನಂದಿಸಿದರು.ಸ್ಕೌಟ್ಸ್‍ಗೀತೆಯೊಂದಿಗೆಆರಂಭವಾಗಿರಾಷ್ಟ್ರಗೀತೆಯೊಂದಿಗೆಕಾರ್ಯಕ್ರಮ ಮುಕ್ತಾಯವಾಯಿತು.