ಹಾಸನ. : ಹಾಸನ ಜಿಲ್ಲೆ ಗೊರೂರಿನಲ್ಲಿರುವ ಹೇಮಾವತಿ ಜಲಾಶಯ ಭರ್ತಿಯಾಗಿದ್ದು ಇಂದು 15000ಕ್ಯೂಸೆಕ್ಸ ನೀರನ್ನು ನದಿಗೆ ಹರಿಬಿಡಲಾಗಿದೆ.ಲೋಕೋಪಯೋಗಿ ಸಚಿವರಾದ ಹೆಚ್ ಡಿ ರೇವಣ್ಣ ಅವರು ಪತ್ನಿ ಭವಾನಿ ಹಾಗೂ ಸಕಲೇಶಪುರ ಆಲೂರು ಕ್ಷೇತ್ರದ ಶಾಸಕರಾದ ಹೆಚ್.ಕೆ ಕುಮಾರಸ್ವಾಮಿ ಮತ್ತು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಜಲಾಶಯದಿಂದ ನೀರನ್ನು ಹೊರಗೆ ಹರಿ ಬಿಡಲಾಯಿತು.
ಜಲಾಶಯ ನಿರ್ಮಾಣದ ನಂತರ ಇದೇ ಮೊದಲ ಬಾರಿಗೆ ಜುಲೈ 14ಕ್ಕೆ ನೀರು ಭರ್ತಿಯಾಗಿದ್ದು ವಿಶೇಷವಾಗಿದೆ ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವ್ಯಾಪ್ತಿಯಲ್ಲಿ ನಿರಂತರವಾಗಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕ ಪ್ರಮಾಣ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ .ಇಂದು 24000 ಕ್ಯೂಸೆಕ್ಸ ಒಳಹರಿವು ಇದ್ದು ಜಲಾಶಯ ಸಂಪೂರ್ಣ ಭರ್ತಿಗೆ ಇನ್ನೂ ಕೇವಲ2 ಅಡಿ ಬಾಕಿ ಇದೆ ಸುರಕ್ಷತೆ ದೃಷ್ಟಿಯಿಂದ ನದಿಗೆ 15000 ಕ್ಯೂಸೆಕ್ಸ್ ,ಎಡದಂಡೆ ನಾಲೆಗೆ 2200ಕ್ಯೂಸೆಕ್ಸ ,ಬಲದಂಡೆ ನಾಲೆಗೆ 200 ಕ್ಯೂಸೆಕ್ಸ, ಬಲ ಮೇಲ್ದಂಡೆ ನಾಲೆಗೆ 725 ಕ್ಯೂಸೆಕ್ಸ ನದಿ ತೂಬಿಗೆ 1300 ಕ್ಯೂಸೆಕ್ಸ ನೀರು ಹೊರ ಹರಿ ಬಿಡಲಾಗಿದೆ.