ಕಾರವಾರ:- ಬೈಕ್ ಚಾಲಕರ ಮೇಲೆ ಮರ ಬಿದ್ದು ತಂದೆ ಮಗ ಸಾವು ಕಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಇಡಗುಂದಿಯಲ್ಲಿ ನಡೆದಿದೆ.

RELATED ARTICLES  ಸಾರ್ವಭೌಮ ಗುರುಕುಲದಲ್ಲಿವಿದ್ಯಾರ್ಥಿ ಪರಿಷತ್ ಉದ್ಘಾಟನೆ

ಅಂಕೋಲಾ ತಾಲೂಕಿನ ಕನಕನಹಳ್ಳಿ ಗ್ರಾಮದ ಸುಭಾಶ್ ಚಿಪ್ಕರ್(೫೦) ಹಾಗೂ ನಾಗರಾಜ್ ಸಲಗಾವ್ಕರ್(೨೫) ಮೃತ ದುರ್ದೈವಿಗಳು.

ಬೈಕ್ ಚಲಾಯಿಸಿಕೊಂಡು ಯಲ್ಲಾಪುರದ ಕಡೆಯಿಂದ ಅಂಕೋಲಕ್ಕೆ ಹೋಗುತಿದ್ದಾಗ ಬಾರಿ ಗಾಳಿ ಮಳೆಗೆ ರಸ್ತೆಯಮೇಲೆ ಬೃಹದಾಕಾರದ ಮರ ಬಿದ್ದು ಈ ಘಟನೆ ನಡೆದಿದೆ ಎನ್ನಲಾಗಿದೆ.

RELATED ARTICLES  ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಘಟನೆ ಸಂಬಂಧ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.