ಕುಮಟಾ: ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಕುಮಟಾ ನಾಮಧಾರಿ ಸಭಾ ಭವನದಲ್ಲಿ ಕುಮಟಾ ತಾಲೂಕಿನ ಕನ್ನಡಮಾಧ್ಯಮ ಶಾಲಾ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ವಿತರಣಾ ಸಮಾರಂಭ ನೆರವೇರಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಶಾಸಕ ದಿನಕರ ಕೆ ಶೆಟ್ಟಿಯವರು ಉದ್ಘಾಟನೆ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರು ಒಂದು ಸಂದರ್ಭದಲ್ಲಿ ಬೆಂಗಳೂರಿನಂತ ಪಟ್ಟಣಗಳಲ್ಲಿ ಕನ್ನಡ ಮಾಯವಾಗಿ ಇಂಗ್ಲೀಷಮಯವಾಗುವಂತಹ ಸಂದರ್ಭದಲ್ಲಿ ವಾಟಾಳ ನಾಗರಾಜ ಅವರು ಕನ್ನಡ ಭಾಷೆ ಕನ್ನಡ ನೆಲ ಕನ್ನಡ ಜಲ ಉಳಿಸುವ ಪ್ರಯತ್ನಕ್ಕೆ ಕೈ ಹಾಕಿದರು, ನಂತರ ನಾರಾಯಣ ಗೌಡರ ನೇತೃತ್ವದಲ್ಲಿ ಕನ್ನಡ ರಕ್ಷಣಾ ವೇದಿಕೆ ಕನ್ನಡದ ಉಳಿವಿಗಾಗಿ ಸಾಕಷ್ಟು ಶ್ರಮ ವಹಿಸುತ್ತಿದೆ ಅಲ್ಲದೆ ನಾವೆಲ್ಲರೂ ಕೂಡ ಪಕ್ಷ ಬೇದ ಮರೆತು ಕನ್ನಡ ಉಳಿಸಿ ಬೆಳೆಸುವದಕ್ಕಾಗಿ ಶ್ರಮವಹಿಸೋಣ ಎಂದರು.

RELATED ARTICLES  ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಬೇಕು : ಜಗನ್ನಾಥ ನಾಯ್ಕ

ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೊಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ, ಕುಮಟಾ ತಾಲೂಕಾ ಕಸಾಪ ಅಧ್ಯಕ್ಷ ಶ್ರೀಧರ ಉಪ್ಪಿನ ಗಣಪತಿ , ಅರುಣ ಹರ್ಕಡೆ ,ವಿನಾಯಕ ನಾಯಕ ,ಮಂಜುನಾಥ ಗೌಡ ಇನ್ನೂ ಹಲವು ಪ್ರಮುಖರು ಉಪಸ್ಥಿತರಿದ್ದರು ಕುಮಟಾ ತಾಲೂಕಿನ ಕನ್ನಡ ಮಾಧ್ಯಮ ಶಾಲೆಯ ವಿಧ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕ ವಿತರಿಸಲಾಯಿತು.

RELATED ARTICLES  ಚಂಡಮಾರುತ ಪ್ರಭಾವ ಜಿಲ್ಲೆಯಲ್ಲಿ ಎರಡು ದಿನ ಮಳೆ