ಹೊನ್ನಾವರ ವಿಭಾಗದ ಕತಗಾಲ ವಲಯದ ಹೆಬೈಲ್ ಶಾಖೆಯ ಶ್ರೀ ದುರ್ಗಾಪರಮೇಶ್ವರಿ ಗ್ರಾಮ ಅರಣ್ಯ ಸಮಿತಿ ಕವಲೋಡಿಯ ವನಮಹೋತ್ಸವ ಹಾಗೂ ಸ್ವ ಸಹಾಯ ಸಂಘಗಳಿಗೆ ಸುತ್ತುನಿಧಿಯ ವಿತರಣೆ ಕಾರ್ಯಕ್ರಮದ ಕುರಿತು ಶ್ರೀ ಡಿ.ಬಿ. ಹರಿಕಂತ್ರ, ಜೆ.ಎಫ್.ಪಿ.ಎಂ. ಸುಗಮಗಾರರು ಕುಮಟಾ ಮಾತನಾಡಿ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ವನಮಹೋತ್ಸವ ಆಚರಿಸುತ್ತಿರುವುದರಿಂದ ಗ್ರಾಮಸ್ಥರಲ್ಲಿ ಗಿಡ ಬೆಳೆಸುವುದರ ಬಗ್ಗೆ ಅರಿವು ಹಾಗೂ ಜಾಗ್ರತಿ ಮೂಡಿಸಿದಂತಾಗುತ್ತದೆ. ಗ್ರಾಮಸ್ಥರ ಮೂಲಕ ಗಿಡಗಳನ್ನು ನೆಟ್ಟು ಬೆಳೆಸುವುದರಿಂದ ಗ್ರಾಮಸ್ಥರು ಸದ್ರಿ ಗಿಡಗಳನ್ನು ರಕ್ಷಣೆ ಮಾಡಲು ಸಹಕಾರಿಯಾಗುತ್ತದೆ. ಪರಿಸರ ಸಮತೋಲನೆಗಾಗಿ ಭೂಭಾಗದ ಶೇಕಡಾ 33ರಷ್ಟು ಹಸುರಿನ ಹೊದಿಕೆ ಇರಲೇ ಬೇಕಾಗುತ್ತದೆ. ಕಾರಣ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯವರು ಸೇರಿ ಗಿಡ ನೆಡುವುದರಿಂದ ಪರಿಸರಕ್ಕೆ ಉತ್ತಮವಾಗಿರುತ್ತದೆ. ಅದೇ ರೀತಿ ಅರಣ್ಯ ಇಲಾಖೆಯಿಂದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಜಾರಿಯಲ್ಲಿದ್ದು ರೈತರು ತಮ್ಮ ಜಮೀನುಗಳಲ್ಲಿ ಗಿಡಗಳನ್ನು ನೆಟ್ಟು ಬದುಕಿಸಿಕೊಂಡಲ್ಲಿ ಪ್ರತಿ ಗಿಡಕ್ಕೆ ಮೂರು ವರ್ಷಗಳಲ್ಲಿ ಹಂತ-ಹಂತವಾಗಿ ನೂರು ರೂಪಾಯಿ ಪ್ರೋತ್ಸಾಹ ಧನ ಸಹ ರೈತರಿಗೆ ಸಿಗುತ್ತದೆಂದು ಕಾರ್ಯಗಾರರಲ್ಲಿ ತಿಳಿಸಿ, ಸದುಪಯೋಗ ಮಾಡಿಕೊಳ್ಳಬೇಕೆಂದು ಮನವಿ ಮಾಡಿಕೊಂಡರು.

RELATED ARTICLES  "ಎಲ್ಲ ನಿನ್ನ ಲೀಲೆ ತಾಯೆ ಎಲ್ಲ ನಿನ್ನ ಮಾಯೆ" ಎನ್ನುತ್ತಲೇ ಲೀನವಾದೆಯಾ ಕವಿಯೇ...

ಶ್ರೀ ವೇಣುಗೋಪಾಲ ಉಪ ವಲಯ ಅರಣ್ಯಾಧಿಕಾರಿ ಹೆಬೈಲ್‍ರವರು ಇವತ್ತಿನ ಕಾರ್ಯಕ್ರಮದ ಕುರಿತು ಪರಿಚಯಿಸಿ ಸ್ವಾಗತಿಸಿ ಸುತ್ತುನಿಧಿಯ ಬಗ್ಗೆ ವಿವರಿಸಿ ಸುತ್ತುನಿಧಿಯನ್ನು ಸುಸ್ಥಿರವಾಗಿ ಬಳಸಿಕೊಳ್ಳಲು ಸಿಂಡ್ ಸಂಸ್ಥೆ ಕುಮಟಾದಿಂದ ಕೌಶಲ್ಯ ಆಧಾರಿತ ತರಬೇತಿ ಪಡೆದು ಆದಾಯ ಹೆಚ್ಚಿಸುವ ಚಟುವಟಿಕೆ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಗಿಡ ಬೆಳೆಸಲು ಆಸಕ್ತಿಯಿರುವ ರೈತರು ಬೆಳ್ಳಂಗಿ ಸಸ್ಯಪಾಲನಾ ಕ್ಷೇತ್ರದಿಂದ ಗಿಡಗಳನ್ನು ಪಡೆಯಬಹುದೆಂದು ಸಭೆಯಲ್ಲಿ ತಿಳಿಸಿದರು.

RELATED ARTICLES  ಕಕ್ಕಳ್ಳಿ ಕನಕನಹಳ್ಳಿ  ಸಾರ್ವಕಾಲಿಕ ರಸ್ತೆಯಾಗಲು ಶ್ರೀಗಳಿಂದ ಮಂತ್ರಾಕ್ಷತೆ..

ಶ್ರೀ ಕುಪ್ಪು ಗೌಡ ಅಧ್ಯಕ್ಷರು ಗ್ರಾಮ ಅರಣ್ಯ ಸಮಿತಿ ಕವಲೋಡಿಯವರು ಶ್ರೀ ಮಹಾಸತಿ ಸ್ವ ಸಹಾಯ ಸಂಘ ಕವಲೋಡಿ, ಚೌಡೇಶ್ವರಿ ಸ್ವ ಸಹಾಯ ಸಂಘ ಕವಲೋಡಿ ಹೀಗೆ ನಾಲ್ಕು ಸಂಘಗಳಿಗೆ ಸುತ್ತುನಿಧಿ ಚೆಕ್‍ನ್ನು ವಿತರಿಸಿದರು. ಶ್ರೀ ಗಣಪತಿ ಗೌಡ ಕಾರ್ಯಕ್ರಮಕ್ಕೆ ವಂದನೆ ಸಲ್ಲಿಸಿದರು.