ಬೆಂಗಳೂರು: ಉಚಿತ ಬಸ್ ಪಾಸ್ ನೀಡುವ ಕುರಿತಾಗಿ ಕೇಳಿಬಂದಿದ್ದ ಕೂಗು ಈಗ ಪ್ರಭಲವಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡದ ಹಿನ್ನಲೆ ಜುಲೈ 21ಕ್ಕೆ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳ ಬಂದ್‌ಗೆ ಕರೆ ನೀಡಲಾಗಿದೆ ಎಂದು ವರದಿಯಾಗಿದೆ.

RELATED ARTICLES  ದೇವರ ಮುಂದೆ ಪ್ರಾರಂಭವಾಗಿದೆಯಾ ರಮಾನಾಥ ರೈ ಲಾಬಿ?

ವಿದ್ಯಾರ್ಥಿ ಸಂಘಟನೆಗಳಾದ AIDSO, AIDYO, AIMSS ನೇತೃತ್ವದಲ್ಲಿ ಜುಲೈ 21ಕ್ಕೆ ರಾಜ್ಯದ ಶಾಲಾ ಕಾಲೇಜು ಬಂದ್‌ಗೆ ಕರೆ ನೀಡಲಾಗಿದೆಯಂತೆ.

ವಿದ್ಯಾರ್ಥಿ ಸಂಘಟನೆಗಳು ಸ್ವಯಂ ಪ್ರೇರಿತವಾಗಿ ಶಾಲಾ ಕಾಲೇಜು ತರಗತಿಗಳನ್ನ ಬಹಿಷ್ಕರಿಸಲು ನಿರ್ಧರಿಸಿವೆ ಎನ್ನಲಾಗಿದೆ. ತಕ್ಷಣ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್​​​ ವಿತರಿಸಬೇಕು ಹಾಗೂ ಈಗಾಗಲೇ ಬಸ್ ಪಾಸ್ ಖರೀದಿಸಿರುವ ವಿದ್ಯಾರ್ಥಿಗಳಿಗೆ ಹಣ ಹಿಂತಿರುಗಿಸಬೇಕು ಎಂದು ಆಗ್ರಹಿಸಿ ಈ ಪ್ರಕ್ರಿಯೆ ಕೈಗೊಳ್ಳಲಾಗಿದೆ.

RELATED ARTICLES  ಮೋದಿಯನ್ನು ತಬ್ಬಿಕೊಂಡ ರಾಹುಲ್: ನಡೆಯಿತು ಹೈ ಡ್ರಾಮಾ

ಇದೀಗ ವಿದ್ಯಾರ್ಥಿಗಳ ಆಗ್ರಹ ಪ್ರಬಲವಾಗಿದ್ದು ಬಂದ್‌ಗೆ ಕರೆ ನೀಡಲಾಗಿದೆ. ಮುಂದಿನ ಬದಲಾವಣೆಗಳ ಕುರಿತಾಗಿ ಜನ ನಿರೀಕ್ಷಿಸುವಂತೆ ಆಗಿದೆ.