ಶಿರಸಿ: 2017-18ನೇ ಸಾಲಿನಲ್ಲಿ ಎಸ್‌.ಎಸ್‌.ಎಲ್‌.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಪುರಸ್ಕಾರಿಸುವ ಜೊತೆಗೆ ಮಾರಿಕಾಂಬಾ ಜಾತ್ರಾ ಉತ್ಸವದಲ್ಲಿ ಸೇವಾನಿರತ ಕಾರ್ಯಕರ್ತರು ಹಾಗೂ ಇಲಾಖೆ ಮುಖ್ಯಸ್ಥರಿಗೆ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜೀವನದಲ್ಲಿ ಮಾನವೀಯತೆ ಬೆಳೆಸಿಕೊಂಡರೆ ಸಮಾಜ ನಿರಂತರವಾಗಿ ಗುರುತಿಸುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಅಂಕ ಗಳಿಕೆಯ ಜೊತೆಗೆ ಮಾನವೀಯ ಮೌಲ್ಯಗಳ ಕಡೆಗೂ ಗಮನ ನೀಡಬೇಕು ಎಂದು ಶಿರಸಿ ನ್ಯಾಯಾಲಯದ ಹಿರಿಯ ಸಿವಿಲ್‌ ನ್ಯಾಯಾಧೀಶೆ ಸುನೀತಾ ಹೇಳಿದರು. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರುತ್ತಿದ್ದಾರೆ. ಮಕ್ಕಳ ಪ್ರತೀ ಹೆಜ್ಜೆಯೊಟ್ಟಿಗೆ ಪಾಲಕರು ಜೊತೆಯಾಗಿರುತ್ತಾರೆ. ಆದರೆ ಮಾನವೀಯತೆಯ ಪಾಠ ಮರೆಯಾಗುತ್ತಿದೆ. ಕೇವಲ ಅಂಕ ಗಳಿಸಿದರೆ ಶಿಕ್ಷಣ ಪಡೆದಂತಲ್ಲ ಬದಲಾಗಿ ಮಾನವೀಯತೆ ಮೈಗೂಡಿಸಿಕೊಳ್ಳಬೇಕು. ಪಾಲಕರು, ಗುರುಗಳೆಡೆ ಗೌರವ ಇರಬೇಕು. ಹಾಗಾದಾಗ ಸಮಾಜ ಸದಾ ಗುರುತಿಸುತ್ತದೆ ಎಂದು ಹೇಳಿದರು. ಮಾರಿಕಾಂಬಾ ಜಾತ್ರೆ ಯಶಸ್ವಿಯಾಗಲು ಶ್ರಮಿಸಿದ ಪ್ರತಿಯೊಬ್ಬರಿಗೆ ಅಭಿನಂದಿಸುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.

RELATED ARTICLES  ಪ ಪೂ ಶ್ರೀ ಶ್ರೀ ಮಹಾದೇವ ಮಹಾಸ್ವಾಮಿಗಳಿಗೆ ಗೋಕರ್ಣ ಗೌರವ

ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟೇಶ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ದೇವಾಲಯದ ಪರಂಪರೆ ನಿರಂತರವಾಗಿ ಸಾಗಲು ಹಾಗೂ ದೇವಾಲಯದ ಅಭಿವೃದ್ಧಿಗೆ ಈಗಾಗಲೇ 100 ಕೋಟಿ ರೂ.ಗಳ ವಿವಿಧ ಯೋಜನೆ ರೂಪಿಸಿ ಜಿಲ್ಲಾ ನ್ಯಾಯಾಧೀಶರ ಅನುಮತಿ ಪಡೆಯಲಾಗಿದೆ. ಆದರೆ ಹಣದ ಕೊರತೆಯಿದೆ, ಅನಾರೋಗ್ಯಕರ ಹಸ್ತಕ್ಷೇಪ ಕೂಡ ಇದೆ. ಇವೆಲ್ಲವನ್ನೂ ಮೀರಿ ದೇವಾಲಯದ ಅಭಿವೃದ್ಧಿ ಮಾಡಲು ಸಾರ್ವಜನಿಕರು ಕೈಜೋಡಿಸಬೇಕು ಎಂದರು.

RELATED ARTICLES  "ಹಣತೆ ಬೆಳಗಿದ ನಮ್ಮೆಲ್ಲ ಆಲೋಚನೆ ಬೆಳಕಿನ ಸುತ್ತವೇ ಇದೆ’‘ಹಣತೆ ಬೆಳಕಿನಲ್ಲಿ ದೀಪಾವಳಿ ಕವಿಗೋಷ್ಠಿ’ ಉದ್ಘಾಟಿಸಿದ ಗೋವಿಂದ ಹೆಗಡೆ

ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿ ಉಪಾಧ್ಯಕ್ಷ ಮನೋಹರ ಮಲ್ಮನೆ, ಧರ್ಮದರ್ಶಿಗಳಾದ ಶಾಂತಾರಾಮ ಹೆಗಡೆ, ಶಶಿಕಲಾ ಚಂದ್ರಪಟ್ಟಣ, ಲಕ್ಷ÷್ಮಣ ಕಾನಡೆ, ತಹಶೀಲ್ದಾರ ಎಂ.ಆರ್‌.ಕುಲಕರ್ಣಿ, ನಗರಸಭೆ ಅಧ್ಯಕ್ಷ ಪ್ರದೀಪ ಶೆಟ್ಟಿ, ಬಾಬುದಾರ ಪ್ರಮುಖ ಜಗದೀಶ ಗೌಡ, ಪ್ರಮುಖರಾದ ವಿವೇಕಾನಂದ ವೈದ್ಯ, ಟಿ.ಜಿ.ನಾಡಿಗೇರ, ನಗರ ಠಾಣೆ ಪಿಎಸ್‌ಐ ಮಾದೇಶ, ಶ್ರೀಕಾಂತ ಶೇಟ್‌, ಜಗದೀಶ ಕುರುಬರ್‌ ಹಾಗೂ ಇತರರು ಇದ್ದರು.