ಭಾರತ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಇಂತಹ ರಾಷ್ಟ್ರದಲ್ಲಿ ನಮಗೆ ನೀಡಿದ ಹಕ್ಕುಗಳ ಜೊತೆಗೆ ನಮ್ಮ ಕರ್ತವ್ಯಗಳ ಅರಿವು ನಮಗೆ ಇರಬೇಕು.ಹಕ್ಕುಗಳನ್ನು ಚಲಾಯಿಸುವ ಭರದಲ್ಲಿ ಕರ್ತವ್ಯ ಮರೆಯಬಾರದು ಎಂದು ಪತ್ರಕರ್ತರೂ ಸಾಮಾಜಿಕ ಕಾರ್ಯಕರ್ತರೂ ನಿರೂಪಕರೂ ಆದ ಶ್ರೀ ಜಯದೇವ ಬಳಗಂಡಿ ಹೇಳಿದರು.ಅವರು ಕೊಂಕಣ ಎಜ್ಯುಕೇಶನ ಟ್ರಸ್ಟನ ಸರಸ್ವತಿ ವಿದ್ಯಾಕೇಂದ್ರದಲ್ಲಿ ನಡೆದ 2018 – 19 ರ ಶಾಲಾ ಸಂಸತ್ ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದಲ್ಲಿ ಅತ್ಯುತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು.ಹವ್ಯಾಸಗಳು ಉತ್ತಮವಾಗಿದ್ದರೆ ಜೀವನ ಸರಳ ಸುಂದರವಾಗುವುದು.ಆದರ್ಶ ವ್ಯಕ್ತಿತ್ವವನ್ನು ಬೆಳಿಸಿಕೊಂಡು ಜೀವನ ಸಾಗಿಸಿದರೆ ಪರರಿಗೆ ಉಪಕಾರಿಯಾಗಿ ಬದುಕಿದರೆ ಜೀವನ ಸಾರ್ಥಕವಾಗುವುದು ಎಂದರು.ಕಲೆ,ಸಂಸ್ಕøತಿ ಹಾಗೂ ಸಂಪ್ರದಾಯಗಳನ್ನು ಕಲಿಸುವ ಈ ಶಾಲೆ ಸಂಸ್ಕøತಿ ಮಂದಿರ ಸರಸ್ವತಿ ವಿದ್ಯಾಕೇಂದ್ರ.ಅದು ಸಂಸ್ಕøತಿ ಕೇಂದ್ರ ಎಂದು ಬಣ್ಣಿಸಿದ ಅವರು ಮಕ್ಕಳು ನಾಯಕತ್ವ ಬೆಳೆÉಸಿಕೊಳ್ಳಲು ಮುಂದಾಗಬೇಕೆಂದು ಕರೆ ನೀಡಿದರು.
ಹಣ್ಣಿನ ಬುಟ್ಟಿಯಲ್ಲಿ ಒಳಿತನ್ನು ಆರಿಸುವಂತೆ ವಿದ್ಯಾರ್ಥಿಗಳೇ ನೈಜ ಚುನಾವಣೆಯ ಮೂಲಕ ಆರಿಸಿದ ಪ್ರತಿನಿಧಿಗಳು ತಮ್ಮ ತಮ್ಮ ಜವಾಬ್ದಾರಿ ನಿರ್ವಹಿಸುವ ಬಗ್ಗೆ ಕಾರ್ಯಪ್ರರ್ವತ್ತರಾಗಬೇಕು ಎಂದು ಕಿವಿ ಮಾತು ಹೇಳಿದ ಅವರು ಜಾನಪದ ಗೀತೆಯನ್ನು ಹಾಡಿ ಎಲ್ಲರನ್ನೂ ಮಂತ್ರಮುಗ್ದಗೊಳಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ವಿಶ್ವಸ್ಥರಾದ ಡಿ.ಡಿ.ಕಾಮತ ಮಕ್ಕಳೆಂದರೆ ದೇಶದ ಆಸ್ಥಿ.ಇಂದು ಇಲ್ಲಿಯ ಸಂಸತ್ ಗೆ ಆಯ್ಕೆಯಾದವರು ಮುಂದಿನ ದಿನದಲ್ಲಿ ರಾಜ್ಯ,ರಾಷ್ಟ್ರ ನಡೆಸುವ ನಾಯಕರಾದರೆ ಅದು ನಮಗೆ ಹೆಮ್ಮೆ.ಅಂತಹ ವಿದ್ಯಾರ್ಥಿಗಳು ನೀವುಗಳಾಗಿರಿ ಎಂದು ಆಶಿಸಿ ಹಾರೈಸಿದರು.ಶೈಕ್ಷಣಿಕ ಸಲಹೆಗಾರರಾದ ಶ್ರೀ.ಆರ್ ಎಚ್.ದೇಶಭಂಡಾರಿ ಮುಖ್ಯ ಶಿಕ್ಷಕಿ ಸುಜಾತಾ ನಾಯ್ಕ,ಶ್ರೀಮತಿ ಸಾವಿತ್ರಿ ಹೆಗಡೆ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಶ್ರೀ ಗೌರೀಶ ಭಂಡಾರಿ,ಹರ್ಷಾ ಶಾಸ್ತ್ರೀ ಕಾರ್ಯಕ್ರಮ ನಿರೂಪಿಸಿದರು.ಗಣೇಶ ಜೋಶಿ ಪ್ರಾಸ್ಥಾವಿಕ ಮಾತುಗಳೊಂದಿಗೆ ಉದ್ಘಾಟಕರನ್ನು ಪರಿಚಯಿಸಿ ಸ್ವಾಗತಿಸಿದರು. ಸುಮಂಗಲಾ ನಾಯ್ಕ,ಈಶ್ವರಗೌಡ,ಪ್ರಜ್ಞಾ ನಾಯ್ಕ ಇತರರು ಸಹಕರಿಸಿದರು.