ಮಾಸ್ಕೋ: ಫೀಫಾ ವಿಶ್ವಕಪ್ 2018ರ ವಿಶ್ವಕಪ್ ಟೂರ್ನಿಯಲ್ಲಿ ಕ್ರೊವೇಷಿಯಾ ಮಣಿಸಿದ ಫ್ರಾನ್ಸ್ ತಂಡ 20 ವರ್ಷಗಳ ಬಳಿಕ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಅಷ್ಟು ಮಾತ್ರವಲ್ಲದೇ ಫ್ರಾನ್ಸ್ ತಂಡದ ಕೋಚ್ ಡೈಡಿಯರ್ ದೆಶ್ಚಾಂಪ್ಸ್‌ ದಾಖಲೆಯೊಂದನ್ನು ಕೂಡ ನಿರ್ಮಾಣ ಮಾಡಿದ್ದಾರೆ.

ಈ ಹಿಂದೆ ವಿಶ್ವಕಪ್ ಗೆದ್ದ ಫ್ರಾನ್ಸ್ ತಂಡದ ನಾಯಕರಾಗಿ ಯಶಸ್ವಿಯಾಗಿ ಮುನ್ನಡೆಸಿದ್ದ ಡೈಡಿಯರ್ ದೆಶ್ಚಾಂಪ್ಸ್‌ ಇದೀಗ ಕೋಚ್ ಆಗಿಯೂ ತಮ್ಮ ತಂಡಕ್ಕೆ ಯಶಸ್ವಿ ತರಬೇತಿ ನೀಡಿ ಮತ್ತೆ ತಮ್ಮ ತಂಡ ವಿಶ್ವಕಪ್ ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.

RELATED ARTICLES  ಮೋದಿ ಅವರ ತಾಯಿ, ಶತಾಯುಷಿ ಹೀರಾಬೆನ್ ಮೋದಿ ಇನ್ನಿಲ್ಲ.

1998ರಲ್ಲಿ ಫ್ರಾನ್ಸ್ ನಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಅಂದು ಫ್ರಾನ್ಸ್ ತಂಡದ ನಾಯಕರಾಗಿದ್ದ ಡೈಡಿಯರ್ ದೆಶ್ಚಾಂಪ್ಸ್‌ ಯಶಸ್ವಿಯಾಗಿ ಮುನ್ನಡೆಸಿದ್ದು ಮಾತ್ರವಲ್ಲದೇ ತಂಡ ವಿಶ್ವಕಪ್ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇದೀಗ ಬರೊಬ್ಬರಿ 20 ವರ್ಷಗಳ ಬಳಿಕ ಇದೇ ಡೈಡಿಯರ್ ದೆಶ್ಚಾಂಪ್ಸ್‌ ಫ್ರಾನ್ಸ್ ತಂಡದ ಕೋಚ್ ಆಗಿ ತಂಡ ವಿಶ್ವಕಪ್ ಗೆಲ್ಲುವಲ್ಲಿ ಮಹತ್ವಗದ ಪಾತ್ರವಹಿಸಿ ನೂತನ ದಾಖಲೆ ನಿರ್ಮಾಣ ಮಾಡಿದ್ದಾರೆ.

RELATED ARTICLES  ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಬಂಪರ್‌ : ವಕ್ಫ್​ಗೆ 100 ಕೋಟಿ, ಕ್ರಿಶ್ಚಿಯನ್ ಸಮುದಾಯಕ್ಕೆ 200 ಕೋಟಿ ಘೋಷಣೆ

ಒಮ್ಮೆ ಆಟಗಾರನಾಗಿಯೂ ಮತ್ತೊಮ್ಮೆ ಕೋಚ್ ಆಗಿಯೂ ವಿಶ್ವಕಪ್ ಗೆದ್ದ ಅಪರೂಪದ ಸಾಧನೆಗೆ ಡೈಡಿಯರ್ ದೆಶ್ಚಾಂಪ್ಸ್‌ ಒಡೆಯನಾಗಿದ್ದು, ಈ ಹಿಂದೆ ಬ್ರೆಜಿಲ್ ತಂಡದ ಮಾಜಿ ಆಟಗಾರ ಮತ್ತು ಕೋಚ್ ಮರಿಯೊ ಜಗಲೊ ಮತ್ತು ಫ್ರಾನ್ಜ್‌ ಬೆಕೆನ್‌ಬೌರ್‌ ಅವರು ಇಂತಹ ಅಪರೂಪದ ಸಾಧನೆ ಮಾಡಿದ್ದರು. ಇದೀಗ ಈ ಪಟ್ಟಿಗೆ ಫ್ರಾನ್ಸ್ ಕೋಚ್ ಡೈಡಿಯರ್ ದೆಶ್ಚಾಂಪ್ಸ್‌ ನೂತನ ಸೇರ್ಪಡೆಯಾಗಿದ್ದಾರೆ.
ಸಂಬಂಧಿಸಿದ್ದು…