ಹೊನ್ನಾವರ ತಾಲೂಕಾ ಆಸ್ಪತ್ರೆಗೆ ಲಯನ್ಸ ಕ್ಲಬ್ ವತಿಯಿಂದ ವೀಲ್ ಛೇರ್ ಮತ್ತು ಡಸ್ಟ ಬೀನ್‍ಗಳನ್ನು ನೀಡಲಾಯಿತು.ಲಯನ್ಸ್ ಕ್ಲಬ್ ಡಿಸ್ಟ್ರಿಕ್ಟ್ 317ಃ ಇದರ ರೀಜನ್ ಛೇರ್‍ಮನ್ ಲಯನ್ ಕೃಷ್ಣಮೂರ್ತಿ ಭಟ್ಟ, ಶಿವಾನಿ ಮಾತನಾಡಿ ಲಯನ್ಸ ಕ್ಲಬ್ಬಿನ ಎಲ್ಲಾ ಸಹೋದ್ಯೋಗಿಗಳನ್ನು ಒಡಗೂಡಿ ಹೊನ್ನಾವರ ತಾಲೂಕಾ ಆಸ್ಪತ್ರೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಭಾಗವಹಿಸಿ ಆಸ್ಪತ್ರೆಗೆ ವೀಲ್ ಚೇರ್ ಮತ್ತು ಡಸ್ಟ ಬೀನ್‍ಗಳನ್ನು ನೀಡಿ ಬಡರೋಗಿಗಳಿಗೆ ಚಿಕಿತ್ಸೆಯನ್ನು ಉತ್ತಮ ರೀತಿಯಲ್ಲಿ ನೀಡುತ್ತಾ ಬಂದಿರುವ ತಾಲೂಕಾ ಆಸ್ಪತ್ರೆಗೆ ಲಯನ್ಸ ಸಂಸ್ಥೆಯ ಸಹಾಯ ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು.
ಲಯನ್ ಎಸ್.ಜೆ. ಕೈರನ್ನ ಸೇವೆಯ ಮಹತ್ವವನ್ನು ಸಭೆಗೆ ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕಾ ಆಸ್ಪತ್ರೆಯ ಎಲ್ಲಾ ವೈದ್ಯರು ಹೊನ್ನಾವರ ಲಯನ್ಸ ಸಂಸ್ಥೆಯ ಲಯನ್ ಶೇಖರ ನಾಯ್ಕ, ಶಾಂತಾರಾಮ ನಾಯ್ಕ, ಎನ್. ಜಿ. ಭಟ್ಟ, ಯೋಗೀಶ ರಾಯ್ಕರ, ಟಿ.ಎಚ್. ಗೌಡ, ಆರ್.ಡಿ. ನಾಯ್ಕ, ಜೀವೋತ್ತಮ ನಾಯ್ಕ, ಲಕ್ಷ್ಮಣ ತೇಲಂಗ, ಮಂಜು ಆಚಾರ್ಯ ಹಾಗೂ ಮೋಹನ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಕೊನೆಯಲ್ಲಿ ಆಡಳಿತ ವೈದ್ಯಾಧಿಕಾರಿ ರಾಜೇಶ ಕಿಣಿ ಅವರು ಲಯನ್ಸ ಸಂಸ್ಥೆಯು ತಾಲೂಕಾ ಆಸ್ಪತ್ರೆ ನೀಡಿದ ಸೇವೆಯನ್ನು ಸ್ಮರಿಸುತ್ತ ಮುಂದೆಯೂ ಸಂಸ್ಥೆಯ ಸಹಾಯವನ್ನು ಕೋರಿ ಸರ್ವರನ್ನು ವಂದಿಸಿದರು….

RELATED ARTICLES  ವಿಟಿಯು ವಿರುದ್ಧ ತಿರುಗಿ ಬಿದ್ದ ವಿದ್ಯಾರ್ಥಿಗಳು: ಎಬಿವಿಪಿ ಪ್ರತಿಭಟನೆ